ಕನ್ನಡ ಚಿತ್ರರಂಗದ ಸುಂದರ ಜೋಡಿಗಳಲ್ಲಿ ಚಿರು ಹಾಗೂ ಮೇಘನಾ ರಾಜ್ ಅವರ ಜೋಡಿಯು ಒಂದು. ವಿಧಿಯಾಟದ ಮುಂದೆ ನಮ್ಮದು ಏನಿಲ್ಲ 2020 ರಲ್ಲಿ ಚಿರು ಸರ್ಜಾ ಅವರನ್ನು ಕಳೆದುಕೊಂಡೆವು. ಮೇಘನಾ ಅವರು ಗರ್ಭಿಣಿಯಾಗಿದ್ದು ಅವರ ಮಾಡಿಲಲ್ಲಿ ಚಿರು ಮತ್ತೆ ಹುಟ್ಟಿ ಬಂದನು. ಬಹುದಿನಗಳ ನಂತರ ಮೇಘನಾ ಅವರು ಮತ್ತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಚಂದನವನದ ಮುದ್ದು ಮುಖದ, ಸದಾ ನಗು ಮುಖದ ನಟಿ ಮೇಘನಾ ರಾಜ್ ಇಂದು ಮಗಳಾಗಿ, ತಾಯಿಯಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ. ಮೇಘನಾ ಅವರ ಜೀವನ ಬೇರೆಯದೆ ತಿರುವು ಪಡೆದುಕೊಂಡಿದ್ದರೂ ಜೀವನ ನೀಡಿದ ಎಲ್ಲಾ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದ ಮೇಘನಾ ರಾಜ್ ಅವರು ಇಂದು ಅವುಗಳನ್ನು ಎದುರಿಸಿ ಮಾದರಿಯಾಗಿ ನಿಂತಿದ್ದಾರೆ. ಕೆಲವು ತಿಂಗಳುಗಳ ಕಾಲ ಎಲ್ಲದರಿಂದಲೂ ದೂರ ಉಳಿದಿದ್ದ ಮೇಘನಾ ರಾಜ್ ಅವರು ಈಗ ಮೊದಲಿನ ಹಾಗೆ ಸಹಜ ಜೀವನದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಹಲವು ದಿನಗಳ ನಂತರ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮೇಘನಾ ರಾಜ್ ಅವರ ಕುಟುಂಬ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಇವರ ತಂದೆ ತಾಯಿ ಇಬ್ಬರು ಕೂಡ ಕನ್ನಡದ ಹಿರಿಯ ಕಲಾವಿದರು. ಕನ್ನಡದ ದಿಗ್ಗಜರ ಜೊತೆಯಲ್ಲಿ ತೆರೆ ಹಂಚಿಕೊಂಡವರು.

ಶ್ರೇಷ್ಠ ಕಲಾವಿದರ ಮಗಳಾಗಿ ಬೆಳೆದ ಮೇಘನಾ ರಾಜ್ ಅವರು ಬಾಲನಟಿಯಾಗಿ ಜೋಕುಮಾರಸ್ವಾಮಿ ಸಿನಿಮಾದಲ್ಲಿ ನಟಿಸಿದ್ದರು, ಒಂದು ಸಿನಿಮಾ ಬಳಿಕ ನಟನೆಯಿಂದ ಬ್ರೇಕ್ ಪಡೆದು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರು. ಡಿಗ್ರಿ ಮುಗಿಸಿದ ನಂತರ ನಟನೆಗೆ ಕಂಬ್ಯಾಕ್ ನೀಡಿದರು. ಅವರು ಕನ್ನಡ, ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರೀಯರಾಗಿದ್ದರು. ಮಲಯಾಳಂ ಚಿತ್ರರಂಗದ ಟಾಪ್ ನಟಿಯಾಗಿ ಬೆಳೆದ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು 8 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಸ್ಯಾಂಡಲ್ ವುಡ್ ನ ಮುದ್ದಾರ ಸ್ಟಾರ್ ಜೋಡಿಯಾಗಿದ್ದರು ಚಿರು ಮೇಘನಾ.

ಇವರ ಸುಂದರ ಮತ್ತು ಪ್ರೀತಿ ಮೇಲೆ ಯಾರ ದೃಷ್ಟಿ ಬಿದ್ದಿತೋ ಏನೋ ಮದುವೆಯಾದ ಎರಡೆ ವರ್ಷಕ್ಕೆ ಚಿರು ಇಹಲೋಕ ತ್ಯಜಿಸಿದರು. ಆಗ ಒಂಟಿಯಾಗಿದ್ದ ಮೇಘನಾ ಅವರಿಗೆ ಆಸರೆಯಾಗಿದ್ದು ಹೊಟ್ಟೆಯಲ್ಲಿದ್ದ ಮಗು. ಚಿರು ಇಲ್ಲವಾದ ಬಳಿಕ ಮೇಘನಾ ರಾಜ್ ಅವರು ಹಲವು ದಿನಗಳ ಕಾಲ ಹೊರಗಡೆ ಬರಲಿಲ್ಲ ಮಾಧ್ಯಮದವರ ಜೊತೆಗೆ ಮಾತನಾಡಿರಲಿಲ್ಲ. ಮಗು ಜನಿಸಿ ಕೆಲವು ತಿಂಗಳುಗಳ ನಂತರ ರಾಯನ್ ತಂದ ಸಂತೋಷದಿಂದ, ಚಿರು ನೆನಪಿನ ಜೊತೆಯಲ್ಲಿ ಮೇಘನಾ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಪ್ರಸ್ತುತ ಎರಡು ಹೊಸ ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ. ಹಾಗೆಯೆ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಜಡ್ಜ್ ಆಗಿ ಬರುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಕಿರುತೆರೆಯ ವೀಕ್ಷಕರಿಗೆ ಹಾಗೂ ಶೋನ ಸ್ಪರ್ಧಿಗಳಿಗೆ ಬಹಳ ಇಷ್ಟವಾಗಿದ್ದಾರೆ. ಅವರು ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಮೂಲಕ ಪ್ರತಿವಾರ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಕಲರ್ ಫುಲ್ ಕಾಸ್ಟ್ಯೂಮ್ ಹಾಗೂ ಸರಳವಾದ ಮೇಕಪ್ ಇಂದ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಮೇಘನಾ ಅವರು ಎರಡು ವರ್ಷಗಳ ನಂತರ ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದು ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಈ ಹೊಸ ಫೋಟೋಸ್ ನೋಡಿ ಅಭಿಮಾನಿಗಳು ಬಹಳ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಮೇಘನಾ ರಾಜ್ ಅವರು ಸದಾ ಹೀಗೆ ನಗುನಗುತ್ತಾ ಇರಲಿ ಎನ್ನುವುದೆ ಎಲ್ಲರ ಆಸೆ. ಮೇಘನಾ ರಾಜ್ ಅವರು ಹೆಚ್ಚು ಆಕ್ಟೀವ್ ಆಗಿ ಅಭಿಮಾನಿಗಳಿಗೆ ಖುಷಿ ತರಲಿ ಎಂದು ಆಶಿಸೋಣ. video credit for KFI

Leave a Reply

Your email address will not be published. Required fields are marked *