ಕನ್ನಡ ಚಿತ್ರರಂಗದ ಎವರ್ ಟೈಮ್ ಗಯ್ಯಾಳಿ , ಬಜಾರಿ ಅಂತಾನೇ ಬಿರಿದು ಉಳಿಸಿಕೊಂಡಿರುವ ಮಂಜುಳಾ ಎಪ್ಪತ್ತು ಎಂಬತ್ತರ ದಶಕದಲ್ಲಿ ಮಿಂಚಿ ಮರೆಯಾದ ಸ್ಟಾರ್ ನಟಿ ಆಗಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಚಿತ್ರರಸಿಕರ ರಂಜಿಸಿದ್ದ ಮಂಜುಳಾ ಅವರು ವಿಧಿವಶರಾಗಿ ಸುಮಾರು ವರ್ಷಗಳೇ ಕಳೆದುಹೋಗಿವೆ. ಒಂದು ಚಿತ್ರದಲ್ಲಿ ಸಣ್ಣ ಹುಡುಗಿ ಪಾರ್ಟ್ ಮಾಡುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಮಂಜುಳಾ ಅವರು ಸಾಕ್ಷಿ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪಟ್ಟಿಯನ್ನು ಪಡೆದುಕೊಂಡಿದ್ದರು. ಆದ್ದರಿಂದ ನಾವು ಇಲ್ಲಿ ಇವರು ಕಟ್ಟಿಸಿದ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ತುಮಕೂರಿನ ಹೊನ್ನೇನಹಳ್ಳಿಯ ಲಿಂಗಾಯತ ಪರಿವಾರದಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ಶಿವಣ್ಣನವರ ಮಗಳಾಗಿ ನಟಿ ಮಂಜುಳಾ ಅವರು ಜನಿಸಿದ್ದಾರೆ. ಇವರು ಬಾಲ್ಯದಿಂದಲೇ ನಾಟಕರಂಗದತ್ತ ಆಸಕ್ತಿ ಹೊಂದಿದ್ದರು. ಬೆಂಗಳೂರಿನ ಪ್ರಭಾತ್ ಕಲಾವಿದರು ನಾಟಕ ಸಂಘದಲ್ಲಿ ಅಭಿನಯವನ್ನು ಪ್ರಾರಂಭಿಸಿದರು. ಇವರು 1966 ರಲ್ಲಿ ತೆರೆಕಂಡ ಮನೆಕಟ್ಟಿ ನೋಡು ಚಿತ್ರದಿಂದ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ ಇವರು 1972 ರಲ್ಲಿ ತೆರೆಕಂಡ ಯಾರ ಸಾಕ್ಷಿ ಚಿತ್ರದಿಂದ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯ ಪ್ರಾರಂಭಿಸಿದರು.

ಮುಂದಿನ ವರ್ಷವೇ ಮೂರುವರೆ ವಜ್ರಗಳು ಚಿತ್ರದಲ್ಲಿ ಡಾ.ರಾಜಕುಮಾರ್ ರವರ ಜೊತೆ ನಟಿಸುವ ಅವಕಾಶ ಲಭಿಸಿತು. ನಂತರ ರಾಜ್ ಜೊತೆ ಸತತವಾಗಿ ಎರಡು ಕನಸು, ಸಂಪತ್ತಿಗೆ ಸವಾಲ್, ಭಕ್ತ ಕುಂಬಾರ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಫ್ರೌಡಿಮೆಯನ್ನು ಪ್ರದರ್ಶಿಸಿದರು. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆ ಅಭಿನಯಿಸಿದ ಇವರು ತಮ್ಮ ನಟನೆಗೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಇವರು ಚಿತ್ರ ನಿರ್ದೇಶಕ ಅಮೃತಂ ಜೊತೆ ಮದುವೆಯಾಗಿದ್ದರು. 1986 ರಲ್ಲಿ ತಮ್ಮ ಮನೆಯಲ್ಲಿ ಗ್ಯಾಸ್ ಸ್ಟೋವ್ ಸ್ಪೋಟದಿಂದ ನಿಧನ ಹೊಂದಿದರು. ಕನ್ನಡ ಚಲನಚಿತ್ರದ ನಟಿ ಮಂಜುಳಾ ಅವರು ತುಮಕೂರಿನಲ್ಲಿ ಗರ್ಭಗುಡಿಯನ್ನು ಕಟ್ಟಿಸಿದ್ದಾರೆ.

ಮಂಜುಳಾ ಅವರ ತಮ್ಮ ಹೇಳುವ ಪ್ರಕಾರ ಅವರ ತಂದೆಗೆ ಶಿವಲಿಂಗ ಸಿಕ್ಕಿತ್ತು. ನಂತರ 28ನೇ ತಾರೀಖು 1977ನೇ ಜನವರಿಯಂದು ಶುಕ್ರವಾರ ಶ್ರೀ ಶಿವಕುಮಾರ್ ಸ್ವಾಮಿ ಇವರಿಂದ ಶಿವಲಿಂಗದ ಪ್ರತಿಷ್ಠಾಪನೆ ನೆರವೇರಿಸಿದ್ದರು. ಹಾಗೆಯೇ ಶಿವಲಿಂಗದ ಎದುರಿಗೆ ಬಸವನ ವಿಗ್ರಹ ಇದೆ. ಹಾಗೆಯೇ ಅಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಮಂಜುಳಾ ಅವರ ಸಮಾಧಿಯನ್ನು ಕಟ್ಟಲಾಗಿದೆ. ಹಾಗೆಯೇ ಮಂಜುಳಾ ಅವರ ತಮ್ಮನ ಮಗಳನ್ನು ಕೂಡ ಮಂಜುಳಾ ಅವರು ಭರತನಾಟ್ಯ ಕಲಿತಲ್ಲಿಯೇ ಸೇರಿಸಲಾಗಿದೆ. ಆದ್ದರಿಂದ ಇಬ್ಬರಿಗೂ ಒಂದೇ ಗುರು ಎಂದು ಹೇಳಬಹುದು. ಮಂಜುಳಾ ಅವರು ನಿಧಾನರಾದರೂ ಅವರ ನೆನಪುಗಳು ಮಾತ್ರ ಎಂದಿಗೂ ಅಮರ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *