ಕನಸಿನ ರಾಣಿ ಮಾಲಾಶ್ರೀ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಹೇಗೆ ನೋಡಿ

0 0

ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಂಡತಿಯಾಗಿದ್ದಾರೆ. ಹಾಗೆಯೇ ಇವರು ಕನ್ನಡ ಸಿನೆಮಾಗಳ ನಿರ್ದೇಶಕಿಯಾಗಿದ್ದಾರೆ. ಹಾಗೆಯೇ ಅವರು ಅನೇಕ ಹೊಸ ವ್ಯಕ್ತಿತ್ವಗಳನ್ನು ಸಿನೆಮಾರಂಗಕ್ಕೆ ಪ್ರವೇಶ ಮಾಡಿಸಿದ್ದಾರೆ. ಅಂತಹವರಲ್ಲಿ ಬಹಳ ನಟಿಗಳು ಇದ್ದಾರೆ. ಆದ್ದರಿಂದ ನಾವು ಇಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ಸಿನೆಮಾರಂಗಕ್ಕೆ ಪ್ರವೇಶ ಮಾಡಿಸಿದವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪಾರ್ವತಮ್ಮ ರಾಜ್ ಕುಮಾರ್ ಅವರು ಹೆಚ್ಚಿನ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ತಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿ ಎಂದು ಮಾಲಾಶ್ರೀ ಅವರನ್ನು ಕರೆಯಲಾಗುತ್ತದೆ. ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಎಂಬ ಸಿನೆಮಾದಲ್ಲಿ ನಟಿಸಿ ಎಲ್ಲರ ಮನೆಮಾತಾದರು. ಅಂದಿನಿಂದ ರಾಜ್ ಕುಮಾರ್ ಕುಟುಂಬದ ಜೊತೆ ಬಹಳ ಆತ್ಮೀಯತೆಯನ್ನು ಹೊಂದಿದ್ದಾರೆ. ಸುಮಾರು ದಿನಗಳ ಹಿಂದೆ ಟ್ವಿಟ್ಟರ್ನಲ್ಲಿ ತಾವು ಶಿವರಾಜ್ ಕುಮಾರ್ ಅವರ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದರು. ಇದರಿಂದಲೇ ತಿಳಿಯುತ್ತದೆ ಅವರಿಗೆ ರಾಜಕುಮಾರ ಕುಟುಂಬದ ಮೇಲೆ ಅದೆಷ್ಟು ಅಭಿಮಾನವಿದೆ ಎಂದು.

ಹಾಗೆಯೇ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಶಿವರಾಜ್ ಕುಮಾರ್ ಜೊತೆ ನಟಿಸಿದ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ಹಾಗೆಯೇ ಇಂದು ಸಹ ಆ ಸಿನಿಮಾಕ್ಕೆ ಒಳ್ಳೆಯ ಬೆಲೆ ಇದೆ ಎಂದು ಹೇಳಬಹುದು. ನಂತರದಲ್ಲಿ ಸುಧಾರಾಣಿ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಧಾರಾಣಿ ಅವರು ರಾಜಕುಮಾರ್ ಅವರ ಜೊತೆ ದೇವತಾ ಮನುಷ್ಯ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

ಅದರಲ್ಲಿ ನಿನ್ನಂತ ಅಪ್ಪ ಇಲ್ಲ ಎನ್ನುವ ಹಾಡು ತುಂಬಾ ಪ್ರಖ್ಯಾತಿ ಆಗಿದೆ. ಹಾಗೆಯೇ ನಂತರದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸಿನಲ್ಲಿ ಕುಳಿತಿದ್ದಾರೆ. ಹಾಗೆಯೇ ರಕ್ಷಿತಾ ಅವರು ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ದರ್ಶನ್ ಮತ್ತು ಸುದೀಪ್ ಅವರ ಜೊತೆ ನಟಿಸಿದ ಸಿನಿಮಾಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ. ಆದ್ದರಿಂದ ಮಾಲಾಶ್ರೀ, ಪ್ರೇಮಾ, ಸುಧಾರಾಣಿ ಮತ್ತು ರಕ್ಷಿತಾ ಇವೆಲ್ಲರನ್ನು ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಇವರೇ ಪರಿಚಯಿಸಿದ್ದಾರೆ ಎಂದು ಹೇಳಬಹುದು.

Leave A Reply

Your email address will not be published.