ಕಾಶಿನಾಥ್ ಅವರು ತಮ್ಮ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ. ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಅನೇಕ ಪ್ರತಿಭೆಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಇವರು ಕಲಾತ್ಮಕ ಲೋಕದ ಗುರುಗಳು ಎಂದು ಹೇಳಬಹುದು. ಆದರೆ ಇವರಿಗೆ ಯಾವುದೇ ರೀತಿಯ ಅಹಂಕಾರ ಇರಲಿಲ್ಲ. ನಾವು ಇಲ್ಲಿ ಕಾಶಿನಾಥ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಾಶಿನಾಥ್ ಅವರು ಕನ್ನಡಕ್ಕೆ ಸಿಕ್ಕ ಒಬ್ಬ ಅತಿಥಿ ನಟ ಆಗಿದ್ದಾರೆ. ತಮ್ಮ ನಿರ್ದೇಶನ ಮತ್ತು ವೈಶಿಷ್ಟತೆಯಿಂದ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ನಾಯಕರಿಂದ ಹಿಡಿದು ನಿರ್ದೇಶಕರವರೆಗೆ ರಂಗಕ್ಕೆ ನೀಡಿದ ಕೊಡುಗೆ ಇವರಿಗೆ ಸಲ್ಲುತ್ತದೆ. ಇವರು 1951ರಲ್ಲಿ ಕುಂದಾಪುರದಲ್ಲಿ ಜನಿಸಿದರು. ಇವರು ನಟ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇವರ ಹೆಂಡತಿಯ ಹೆಸರು ಚಂದ್ರಪ್ರಭ. ಇವರು ಅಪರಿಚಿತ ಚಿತ್ರದೊಂದಿಗೆ ಬೆಳಕಿಗೆ ಬಂದರು. ಅನುಭವ ಎಂಬ ಚಲನಚಿತ್ರದ ಮೂಲಕ ನಾಯಕ ನಟನಾದರು.
ಇದೇ ಚಲನಚಿತ್ರವನ್ನು ಹಿಂದಿಯಲ್ಲಿ ಅನುಭವ್ ಎಂದು ನಿರ್ದೇಶಿಸಲಾಯಿತು. ಇದರಿಂದ ಅವರು ಬಾಲಿವುಡ್ ಪ್ರವೇಶ ಮಾಡಿದರು. ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಡಿವಂತಿಕೆಯ ವಿಷಯಗಳು ಎಂದು ಪರಿಣಮಿಸಲ್ಪಟ್ಟಿರುವ ವಿಷಯಗಳನ್ನು ಹೇಳುತ್ತವೆ. ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಷಣೆಗಳಿಂದಾಗಿ ಅವರ ಸಿನಿಮಾಗಳಿಗೆ ಟೀಕೆಗಳು ಎದುರಾದರೂ ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಪರಿಣಾಮ ಬೀರಿದೆ.
ಇವರ ಅಜಗಜಾಂತರ ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ ಎಂದು ರಿಮೇಕ್ ಮಾಡಲಾಗಿದೆ. ಇವರು ಕಡಿಮೆ ವೆಚ್ಚದಲ್ಲಿ ಉತ್ತಮ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ 36 ಮತ್ತು ತೆಲುಗಿನ 1 ಚಿತ್ರದಲ್ಲಿ ಅಭಿನಯಿಸಿದ್ದರು. ಅವರ ಕೊನೆಯ ಚಿತ್ರ ಚೌಕ ಯಶಸ್ವಿಯಾಗಿ ನೂರು ದಿನ ಪೂರೈಸಿತ್ತು. ಇವರು 2018ರಲ್ಲಿ ಜನವರಿ 18ರಂದು ಬೆಂಗಳೂರಿನಲ್ಲಿ ನಿಧನರಾದರು.