ದುನಿಯಾ ವಿಜಿ ಅವರು ಕಷ್ಟಪಟ್ಟು ಕಟ್ಟಿಸಿದ ಮನೆ ಹೇಗಿದೆ ನೋಡಿ

0 5,665

ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ. ದುನಿಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯರಾದ ವಿಜಯ್ ಅವರು ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ದುನಿಯಾ ಸಿನಿಮಾ ಹಾಡುಗಳು ಈಗಲೂ ಕೇಳಿಬರುತ್ತದೆ, ಅಷ್ಟರಮಟ್ಟಿಗೆ ದುನಿಯ ಸಿನಿಮಾ ಹಿಟ್ ಆಗಿತ್ತು. ವಿಜಯ್ ಅವರ ಸಿನಿಮಾ, ಕುಟುಂಬ ಹಾಗೂ ಮನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡ ಚಿತ್ರರಂಗದ ಕರಿ ಚಿರತೆ ಎಂದೆ ಖ್ಯಾತಿ ಪಡೆದ ದುನಿಯ ವಿಜಯ್ ಒಬ್ಬ ಕನ್ನಡ ಚಲನಚಿತ್ರ ನಟ. ವಿಜಯ್ ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರು, ನಂತರ ದುನಿಯಾ ಚಿತ್ರದಿಂದ ಇವರು ಮುಖ್ಯ ಪಾತ್ರಕ್ಕೆ ಕಾಲಿಟ್ಟರು. ಇವರ ಆರಂಭಿಕ ದಿನಗಳು ಕಷ್ಟದಿಂದ ಕೂಡಿತ್ತು. ಇವರ ಮೊದಲ ಹೆಸರು ಬಿ. ಆರ್ ವಿಜಯಕುಮಾರ್. ಇವರಿಗೆ ತಂದೆಯೆಂದರೆ ಬಹಳ ಪ್ರೀತಿ, ಭಯ ಇತ್ತು. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಮೊದಲಿಗೆ ಬೋಡಿ ಬಿಲ್ಡ್ ಮಾಡಿಕೊಂಡು ಫೈಟ್ ಅಸಿಸ್ಟಂಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಸಂಸಾರಿ ಆಗಿರುವ ಇವರಿಗೆ ಮೂವರು ಮಕ್ಕಳು. ವಿಜಯ್ ನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ ದುನಿಯ. ಇವರ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡಾ ದೊರಕಿದೆ. ನಂತರ ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂಡ, ದುನಿಯ. ಮಾಸ್ತಿಗುಡಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಮ್ಮೆ ದುನಿಯ ವಿಜಯ್ ಅವರು ಕೌಟುಂಬಿಕ ಸಮಸ್ಯೆಗಳಿಂದ ಸುದ್ದಿಯಲ್ಲಿ ಇದ್ದರು ಆದರೆ ಈಗ ಅವರು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಅವರು ಸಿನಿಮಾಗಳಲ್ಲಿ ನಟಿಸುವ ಮೂಲಕ ಹಣ ಸಂಪಾದಿಸಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ತಮ್ಮದೊಂದು ಭವ್ಯವಾದ ಮನೆಯನ್ನು ನಿರ್ಮಿಸಿದ್ದಾರೆ. ವಿಜಯ್ ಅವರು ತಮ್ಮ ಹೊಸ ಮನೆಗೆ ಹೋದ ನಂತರ ತಾವೆ ನಿರ್ದೇಶನ ಮಾಡುತ್ತಿದ್ದಾರೆ. ಹೊರಗಿನಿಂದ ಬಹಳ ವರಟಾಗಿ ಕಾಣುವ ವಿಜಯ್ ಅವರ ಮನಸ್ಸು ಬಹಳ ಮೃದುವಾಗಿದೆ. ಯಾರಾದರೂ ಕಷ್ಟ ಎಂದು ವಿಜಯ್ ಅವರ ಬಳಿ ಹೋದರೆ ಸಹಾಯ ಮಾಡದೆ ಇರುವುದಿಲ್ಲ, ಕೆಲವೊಮ್ಮೆ ವಿಜಯ್ ಅವರು ಬೇರೆಯವರಿಗೆ ಕಷ್ಟವಿದೆ ಎಂದು ಗೊತ್ತಾದರೆ ಸಾಕು ಸಹಾಯ ಮಾಡುತ್ತಾರೆ. ಸಲಗ ಎಂಬ ಅದ್ಭುತ ಚಿತ್ರದಲ್ಲಿ ನಟಿಸಿ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯದಲ್ಲೆ ಸಲಗ ಚಿತ್ರ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ವಿಜಯ್ ಅವರಿಗೆ ಆ ಮನೆಯು ಲಕ್ಕಿ ಮನೆಯಾಗಿದೆ. ದುನಿಯ ವಿಜಯ್ ಅವರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಲಿ ಎಂದು ಆಶಿಸೋಣ

Leave A Reply

Your email address will not be published.