ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಅಭಿಮಾನಿ ಬಳಗ ಹೊಂದಿರೋ ಸೂಪರ್ ಸ್ಟಾರ್. ದರ್ಶನ್ ಹೈಟು, ಪರ್ಸನಾಲಿಟಿಗೆ ಅಭಿಮಾನಿಗಳಾದವರ ಸಂಖ್ಯೆ ದೊಡ್ಡದಿದೆ. ಸದ್ಯ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದಲ್ಲೂ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದಕ್ಕಾಗಿ ಹಲವು ದಿನಗಳಿಂದ ದರ್ಶನ್ ಭರ್ಜರಿ ಕಸರತ್ತು ನಡೆಸ್ತಿದ್ಧಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಸಿನಿಮಾ ಕ್ರಾಂತಿ ಬಹುಭಾಷಾ ಚಿತ್ರವಾಗಿದೆ. ಸುಮಾರು 2 ವರ್ಷಗಳ ನಂತರ ದರ್ಶನ್ ಕ್ಯಾಮೆರಾ ಎದುರು ಬಂದಿದ್ದಾರೆ. ಈಗಾಗಲೇ ಕ್ರಾಂತಿ ಚಿತ್ರದ ಶೇಕಡಾ 60ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು ವಿ. ಹರಿಕೃಷ್ಣ ನಿರ್ದೇಶನದ ಕ್ರಾಂತಿ ಚಿತ್ರದಲ್ಲಿ ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಗಣವಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ್ ಕ್ರಾಂತಿ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ದರ್ಶನ್ ಬರ್ತಡೆ ವಿಶೇಷವಾಗಿ ಕ್ರಾಂತಿ ಟೀಸರ್ ರಿಲೀಸ್ ಆಗಿತ್ತು.

ಅಕ್ಟೋಬರ್ ವೇಳೆಗೆ ಸಿನಿಮಾ ತೆರೆಗೆ ಬರಲಿದೆ. ಯಜಮಾನ ಚಿತ್ರತಂಡ ಪ್ಯಾನ್ ಇಂಡಿಯಾ ಸಿನಿಮಾದೊಂದಿಗೆ ಮತ್ತೆ ಮರಳಿದೆ. ಇದೊಂದು ಕಮರ್ಷಿಯಲ್ ಎಂಟರ್ಟೈನ್ ಮೆಂಟ್ ಎಂದು ಹೇಳಲಾಗಿದೆ. ಆದರೆ ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಅವರನ್ನು ವರ್ಣಮಾಲೆಗಳೊಂದಿಗೆ ಆಸಕ್ತಿದಾಯಕವಾಗಿ ವಿನ್ಯಾಸಗೊಳಿಸಲಾಗಿದೆ. ಏಕಾಂಗಿಯಾಗಿ ಹೋರಾಡಲು ಕಲಿಯಿರಿ ಎಂಬುದು ಚಿತ್ರದ ಟ್ಯಾಗ್ ಲೈನ್ ಆಗಿದೆ. ನಿರ್ದೇಶಕ ಹರಿಕೃಷ್ಣ ಇದನ್ನು ಅಕ್ಷರ ಕ್ರಾಂತಿ ಎಂದು ಕರೆದಿದ್ದಾರೆ.

ದರ್ಶನ್ ಫಿಟ್ನೆಸ್ ಫ್ರೀಕ್ ಯಾವುದೇ ಕಾರಣಕ್ಕೂ ಕಸರತ್ತು ಮಾಡೋದನ್ನು ಮಿಸ್ ಮಾಡೋದೇ ಇಲ್ಲ. ಆದರೆ ಲಾಕ್ಡೌನ್ ಟೈಮಲ್ಲಿ ಶೂಟಿಂಗ್ ಇಲ್ದೆ ವರ್ಕೌಟ್ ಬಿಟ್ಟು ರಿಲ್ಯಾಕ್ಸ್ ಆಗಿದ್ದಕ್ಕೆ ದೇಹದ ತೂಕ ಹೆಚ್ಚಾಗಿತ್ತು. ಕಳೆದ ಆರೇಳು ತಿಂಗಳಿನಿಂದ ದರ್ಶನ್ ಮತ್ತೆ ಜಿಮ್ ನಲ್ಲಿ ಬೆವರಿಳಿಸೋಕೆ ಶುರು ಮಾಡಿದ್ದಾರೆ. ತರಬೇತುದಾರನ ಮಾರ್ಗದರ್ಶನದಲ್ಲಿ ಪ್ರತಿದಿನ ವರ್ಕೌಟ್ ಜೊತೆಗೆ ಡಯೆಟ್ ಮಾಡ್ತಿದ್ದಾರೆ. ಪರಿಣಾಮವಾಗಿ ಮತ್ತೆ ಸ್ಲಿಮ್ ಆಗಿದ್ದಾರೆ. ಇತ್ತೀಚೆಗೆ ದರ್ಶನ್ ಅಭಿಮಾನಿಗಳ ಜೊತೆ ತೆಗೆಸಿಕೊಂಡಿರೋ ಫೋಟೋಸ್, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರೋ ವೀಡಿಯೋಸ್ ಸಖತ್ ವೈರಲ್ ಆಗಿದೆ.

ಅದರಲ್ಲಿ ದಚ್ಚುನ ನೋಡಿ ಫ್ಯಾನ್ಸ್ ಬಾಸ್ ಈಸ್ ಬ್ಯಾಕ್ ಅಂತ ಖುಷಿಯಾಗಿದ್ದಾರೆ. ಗರಡಿ ಚಿತ್ರಕ್ಕಾಗಿ ಬಾಸ್ ವರ್ಕೌಟ್ ಮಾಡ್ತಿದ್ದಾರೆ ಅಂತೆಲ್ಲಾ ಫೋಟೋಸ್ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. 3 ವರ್ಷಗಳ ಹಿಂದೆ ರಾಬರ್ಟ್ ಶೂಟಿಂಗ್ ಟೈಮಲ್ಲಿ ಹೇಗಿದ್ದರೋ ಅದೇ ಲುಕ್ ನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಕೃಷಿ ಸಚಿವರಾದ ಬಿ. ಸಿ ಪಾಟೀಲ್ ನಿರ್ಮಿಸಿ, ನಟಿಸ್ತಿರೋ ಗರಡಿ ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್ ನಟಿಸೋದು ಪಕ್ಕಾ ಆಗಿದೆ. ಶೀಘ್ರದಲ್ಲೇ ದರ್ಶನ್ ನಟನೆಯ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ. ಒಟ್ಟಿನಲ್ಲಿ ದರ್ಶನ್ ಹೊಸ ಲುಕ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.

Leave a Reply

Your email address will not be published. Required fields are marked *