Ultimate magazine theme for WordPress.

ದರ್ಶನ್, ಸುದೀಪ್ ಸ್ನೇಹದ ಬಗ್ಗೆ ದೊಡ್ಡಣ್ಣ ಏನಂದ್ರು ನೋಡಿ

0 3

ಚಿತ್ರರಂಗ ಎಂದ ಮೇಲೆ ಸ್ಟಾರ್ ವಾರ್ ಗಳು ಸಹಜ. ಚಿತ್ರರಂಗದಲ್ಲಿ ಹಲವಾರು ನಟರು ಜನಪ್ರಿಯಗೊಂಡಿರುತ್ತಾರೆ ಅವರಿಗೆ ಅವರದೇ ಆದ ಅಭಿಮಾನಿ ಬಳಗ ಇರುತ್ತದೆ. ದ್ವೇಷ ಅತಿಯಾದರೆ ಯಾರಿಗೂ ಒಳ್ಳೆಯದಲ್ಲ. ಕನ್ನಡ ಚಿತ್ರರಂಗದಲ್ಲಿರುವ ಸ್ಟಾರ್ ವಾರ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕನ್ನಡ ಸಿನಿಮಾರಂಗದಲ್ಲಿ ಬಹಳಷ್ಟು ಜನಪ್ರಿಯರಾದ ಸ್ಟಾರ್ ನಟರಿದ್ದಾರೆ ಅವರಲ್ಲಿ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಪ್ರಮುಖ ಸ್ಥಾನದಲ್ಲಿರುವ ನಟರಾಗಿದ್ದಾರೆ. ಮೊದಲು ಹೆಚ್ಚು ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಇವರಿಬ್ಬರು ಇದೀಗ ಕೆಲವು ವರ್ಷಗಳಿಂದ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಹಾವಳಿ ಹೆಚ್ಚುತ್ತಿರುವ ಈ ಕಾಲದಲ್ಲಿ ಸ್ಟಾರ್ ವಾರ್‌ಗಳು ವಿಪರೀತ ಮಟ್ಟಕ್ಕೆ ಏರಿದ್ದು, ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವಿನಾಕಾರಣ ವಾಗ್ಯುದ್ಧಗಳು ನಡೆಯುತ್ತಲೇ ಇರುತ್ತವೆ. ಕನ್ನಡ ಸಿನಿಮಾರಂಗದ ಹಾಸ್ಯ ಕಲಾವಿದರು, ಹಿರಿಯ ಕಲಾವಿದರು, ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇನ್ನೂ ಹಲವಾರು ನಟರೊಂದಿಗೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದು ಬಹಳ ವರ್ಷಗಳಿಂದ ಚಿತ್ರರಂಗವನ್ನು ನೋಡುತ್ತಾ ಬಂದಿರುವ ಹಿರಿಯ ನಟ ದೊಡ್ಡಣ್ಣ ಅವರು ಸುದೀಪ್ ಹಾಗೂ ದರ್ಶನ್ ನಡುವಿನ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ದೊಡ್ಡಣ್ಣ ಅವರು ಭಾಗವಹಿಸಿದ್ದರು. ನಟ ದೊಡ್ಡಣ್ಣ ಅವರಿಗೆ ಕನ್ನಡ ಸಿನಿಮಾರಂಗದ ಬಗ್ಗೆ ಸಾಲು-ಸಾಲು ಪ್ರಶ್ನೆಗಳನ್ನು ಕೇಳಲಾಯಿತು ಅದರಲ್ಲಿ ಒಂದು ಕನ್ನಡ ಚಿತ್ರರಂಗದ ಸ್ಟಾರ್ ವಾರ್‌ ಕುರಿತದ್ದಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ನಟ ದೊಡ್ಡಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಏನು ಇಲ್ಲ. ಸುದೀಪ್ ಮತ್ತು ದರ್ಶನ್ ಆತ್ಮೀಯ ಸ್ನೇಹಿತರು, ಸೂರ್ಯನ ಬೆಳಕಿಗೆ ಸಣ್ಣ ಮೋಡ ಅಡ್ಡಬಂದಂತೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಬಂದಿರಬಹುದು ಅಷ್ಟೆ ಎಂದು ಹೇಳಿದರು.

ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಂದೇ ಸಮಯದಲ್ಲಿ ಚಿತ್ರರಂಗದಲ್ಲಿ ನಾಯಕರಾಗಿ ಗುರುತಿಸಿಕೊಂಡವರು ಅಷ್ಟೇ ಬೇಗ ಜನಪ್ರಿಯರಾದರು. ಇಬ್ಬರೂ ಬಹು ದೊಡ್ಡ ಸ್ಟಾರ್‌ಗಳಾಗಿ ಚಿತ್ರರಂಗದಲ್ಲಿ ಬೆಳೆದಿದ್ದಾರೆ. ಇಬ್ಬರಿಗೂ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ತಮಿಳು, ತೆಲುಗು ಸಿನಿಮಾ ರಂಗಗಳಿಗೆ ಹೋಲಿಸಿದರೆ ಕನ್ನಡದ ಚಿತ್ರರಂಗದಲ್ಲಿ ಸ್ಟಾರ್ ವಾರ್ ಕಡಿಮೆ ಎಂದು ಹೇಳಿದರೆ ತಪ್ಪಾಗಲಾರದು. ತಮಿಳಿನ ಸ್ಟಾರ್ ನಟರಾದ ಅಜಿತ್ ಹಾಗೂ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಲ್ಲದೆ ಚಿತ್ರಮಂದಿರಗಳಲ್ಲಿಯೂ ಕಿತ್ತಾಡಿದ ಉದಾಹರಣೆಗಳನ್ನು ನೋಡಬಹುದು. ಸ್ಟಾರ್ ನಟನ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅಭಿಮಾನಿಗೆ ಚಾಕು ಇರಿದು ಕೊಂದ ಘಟನೆಯ ನೆನಪು ಮಾಸಿಲ್ಲ. ಅಭಿಮಾನವು ನಟರ ಮೇಲೆ ಇರುವುದು ಸಹಜ ಆದರೆ ಒಬ್ಬರನ್ನು ಕೊಲ್ಲುವ ಮಟ್ಟಕ್ಕೆ ಹೋಗಬಾರದು. ಅಭಿಮಾನವು ಚಿತ್ರರಂಗವನ್ನು ಬೆಳೆಸಬೇಕೆ ಹೊರತು ಒಬ್ಬರ ಪ್ರಾಣವನ್ನು ತೆಗೆಯುವ, ದ್ವೇಷ ಸಾಧಿಸುವ ಮಟ್ಟಕ್ಕೆ ಹೋಗಬಾರದು. ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡುವ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸೋಣ

Leave A Reply

Your email address will not be published.