ಕೇವಲ ನಟನಾಗಿ ಅಷ್ಟೇ ಅಲ್ಲದೇ ನಿರ್ದೇಶಕ, ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕರಾಗಿದ್ದ ಚರಣ್ ರಾಜ್ ಅವರ ಮಗನು ತಂದೆಯಂತೆ ಬಹು ಭಾಷಾ ನಟನಾಗಿ ಜನಪ್ರಿಯ ಆಗಲಿದ್ದಾರೆ. ಚರಣ್ ರಾಜ್ ಅವರ ಬಗ್ಗೆ ಹಾಗೂ ಅವರ ಮಗನ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಟ ಚರಣ್ ರಾಜ್ ಅವರು ದಕ್ಷಿಣ ಭಾರತ ಚಿತ್ರರಂಗದ ಹೆಮ್ಮಯ ನಾಯಕ, ಖಳನಾಯಕ, ನಿರ್ದೇಶಕ, ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕರಾಗಿದ್ದರು. ಬಹುಮುಖ ಪ್ರತಿಭೆಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಅವರು ಮೂಲತಃ ಕರ್ನಾಟಕದವರು. ಅವರು ಬಾಗಲಕೋಟೆಯ ಖಾನಪುರದಲ್ಲಿ ಜನಿಸಿದರು. ಕನ್ನಡದಲ್ಲಿ ಆಶಾ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಯಶಸ್ಸು ಕಂಡಿದ್ದು ತಮಿಳು ಹಾಗೂ ತೆಲುಗು ಚಿತ್ರಗಳ ಮೂಲಕ ಇದರ ಜೊತೆಗೆ ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಈಗ ಅವರಿಗೆ 60 ವರ್ಷ ವಯಸ್ಸಾದರೂ ಅದೇ ವರ್ಚಸ್ಸಿನಲ್ಲಿ ಅಭಿನಯ ಮಾಡುತ್ತಾರೆ. ಚರಣ್ ರಾಜ್ ಆಶಾ ಹಾಗೂ ತಾಳಿಯಭಾಗ್ಯ ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಕನ್ನಡದಲ್ಲಿ ಅವರಿಗೆ ಹೆಚ್ಚು ಅವಕಾಶಗಳು ಹಾಗೂ ಯಶಸ್ಸು ಕಾಣಲಿಲ್ಲ. ಆದರೆ ಇವರ ಪ್ರತಿಭೆಯನ್ನು ಗುರುತಿಸಿದ ತಮಿಳು ಮತ್ತು ತೆಲುಗು ಚಿತ್ರರಂಗದ ನಿರ್ದೇಶಕರು ಅವಕಾಶ ಕೊಡುತ್ತಾರೆ. ನಂತರ ಬಹುಬೇಗನೆ ಚರಣ್ ರಾಜ್ ಅವರು ಬೇಡಿಕೆಯ ನಟರಾಗಿ ಜನಪ್ರಿಯತೆ ಗಳಿಸುತ್ತಾರೆ. ಬೇರೆ ಭಾಷೆಯ ಚಿತ್ರರಂಗದಲ್ಲಿ ನಿರತರಾಗಿದ್ದರೂ ಕನ್ನಡ ಚಿತ್ರರಂಗವನ್ನು ಅವರು ಮರೆಯಲಿಲ್ಲ. ನಾಯಕನಾಗಿ, ಖಳನಾಯಕನಾಗಿ, ಪೋಷಕ ಪಾತ್ರದಲ್ಲಿಯೂ ಕೂಡ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಆಫ್ರೀಕಾದಲ್ಲಿ ಶೀಲಾ, ಸಮರ, ಗಂಧದಗುಡಿ ಭಾಗ 2 ಸಿನಿಮಾಗಳಲ್ಲಿ ನಟಿಸಿದ್ದಾರೆ ಸುಮಾರು 25 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅವರು ತಮಿಳಿನಲ್ಲಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ತೆಲುಗಿನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಅವರು ಕಲ್ಪನಾ ರಾಜ್ ಎಂಬುವವರೊಂದಿಗೆ ವಿವಾಹವಾದರು ಇವರಿಗೆ ತೇಜ್ ರಾಜ್, ಈಶ್ವರಿ, ದೇವೇಂದ್ರ ರಾಜ್ ಎಂಬ ಮೂವರು ಮಕ್ಕಳಿದ್ದಾರೆ.
ಮಗ ತೇಜ್ ರಾಜ್ ಕೂಡ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದ್ದು, ಇತ್ತೀಚೆಗೆ ತೆಲುಗಿನಲ್ಲಿ 90ಎಮ್ಎಲ್ ಎಂಬ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದರು. ಅಲ್ಲದೇ ತಮಿಳಿನ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಅದೇ ರೀತಿ ತೇಜ್ ರಾಜ್ ಅವರು ಕನ್ನಡದಲ್ಲೂ ಕೂಡ ಅಭಿನಯಿಸಿದ್ದು, ಭರತ ಬಾಹುಬಲಿ ಎಂಬ ಚಿತ್ರದಲ್ಲಿ ನಟಿಸಿದ್ದರು. ಒಟ್ಟಿನಲ್ಲಿ ಅಪ್ಪನಂತಯೇ ಮಗ ತೇಜ ಕೂಡ ಮೂರು ಭಾಷೆಗಳಲ್ಲಿ ಅಭಿನಯಿಸಿ ಬಹು ಭಾಷಾ ನಟರಾಗಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಿಂದ ಪ್ರಸಿದ್ಧರಾದ ಅವರು ಕನ್ನಡಿಗರ ಮನಸ್ಸು ಕದ್ದಿದ್ದು ನಿಜ. ಅವರಂತೆ ಅವರ ಮಗನೂ ಕನ್ನಡಿಗರ ಮನಸ್ಸನ್ನು ಗೆಲ್ಲಲಿದ್ದಾರೆ. ಅವರ ಮುಂದಿನ ಭವಿಷ್ಯ ಚಿತ್ರರಂಗದಲ್ಲಿ ಉಜ್ವಲವಾಗಲಿ ಎಂದು ಆಶಿಸೋಣ.