ಶಂಕರ ನಾಗ್ ಅವರ ಊರು, ಜೀವನ ಹಾಗು ಅವರಿಗಾದ ಅಪಘಾತದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶಂಕರ್ ನಾಗ್ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಮಲ್ಲಾಪುರ ಎಂಬ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ನವೆಂಬರ್ 4, 1954 ರಂದು ಜನಿಸಿದರು. ಇವರ ಸರನೇಮ ನಾಗರಕಟ್ಟೆ ಹೀಗಾಗಿ ಶಂಕರ್ ನಾಗ್ ಎಂಬ ಹೆಸರು ಬಂತು. ಇವರ ವಿಧ್ಯಾಭ್ಯಾಸ ನಡೆದಿದ್ದು ಹೊನ್ನಾವರದ ಶಾಲೆಯಲ್ಲಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗುತ್ತಾರೆ. ಇವರಿಗೆ ಶ್ಯಾಮಲಾ ಎನ್ನುವ ಸಹೋದರಿ ಇದ್ದಾರೆ. ನಂತರ ಮರಾಠಿ ರಂಗಮಂದಿರವನ್ನು ಸೇರುತ್ತಾರೆ. ನಂತರದ ದಿನಗಳಲ್ಲಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ.
1990 ಸಪ್ಟೆಂಬರ್ 30 ಸಮಯ ಬೆಳಿಗ್ಗೆ 5 ಗಂಟೆ 45 ನಿಮಿಷ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೇಟ್ ಕಾರಿನಲ್ಲಿ ಡ್ರೈವರ್ ಜೊತೆ ಶಂಕರ್ ನಾಗ್ ಅವರು ತಮ್ಮ ಹೆಂಡತಿ ಅರುಂಧತಿ ನಾಗ್ ಹಾಗೂ ಮಗಳು ಕಾವ್ಯ ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸುತ್ತಿದ್ದರು. ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಬಳಿ ಟ್ರಕ್ ಕೆಟ್ಟು ನಿಂತಿತ್ತು ಕಾರು ಟ್ರಕ್ ಬಳಿ ಸಾಗಿ ಮುಂದೆ ಹೋಯಿತು ಆದರೆ ಲಾರಿಯೊಂದು ಕಾರಿಗೆ ಅಪ್ಪಳಿಸಿ ಆಕ್ಸಿಡೆಂಟ್ ಸಂಭವಿಸಿತು. ಸೌಂಡ್ ಕೇಳಿದ ಆನಗೋಡು ಹಳ್ಳಿಯ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದರು.
ಕಾರಿನಲ್ಲಿದ್ದ ಇಬ್ಬರು ಅಂದರೆ ಡ್ರೈವರ್ ಹಾಗೂ ಶಂಕರ್ ನಾಗ್ ಮೃತಪಟ್ಟು, ಮಹಿಳೆಯೊಬ್ಬರು ಬದುಕಿರುತ್ತಾರೆ, ದೂರದಲ್ಲಿ ಪುಟ್ಟ ಮಗು ಜೋರಾಗಿ ಅಳುತಿರುತ್ತದೆ. ಮಹಿಳೆಯನ್ನು ಕಾರಿನಿಂದ ಹೊರಗೆ ಕರೆತಂದು ವಿಚಾರಿಸುತ್ತಾರೆ ಆಗ ಜನರಿಗೆ ತಿಳಿಯುತ್ತದೆ. ಮೃತಪಟ್ಟವರು ಶಂಕರ್ ನಾಗ್, ಮಹಿಳೆಯು ಅವರ ಹೆಂಡ್ತಿ ಅರುಂಧತಿ ನಾಗ್ ಹಾಗೂ ಅವರ ಮಗಳು ಕಾವ್ಯ ಎಂದು. ಅರುಂಧತಿ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಶಂಕರ್ ನಾಗ್ ಅವರು 82 ಚಿತ್ರಗಳಲ್ಲಿ ನಟಿಸಿ 7 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಮಾಲ್ಗುಡಿ ಡೇಸ್ ಧಾರವಾಹಿಯನ್ನು ಪ್ರಪಂಚಕ್ಕೆ ತೋರಿಸುವ ಕೆಲಸವನ್ನು ಮಾಡುತ್ತಾರೆ. ಇವರ ಸಾವು ಮರೆಯಲು ಸಾಧ್ಯವಿಲ್ಲ.