Kannada Actor Saritha: ಬಣ್ಣ ಬಣ್ಣ ಎಂದು ಮಾತನಾಡುವ ವ್ಯಕ್ತಿಗಳಿಗೆ ಕಪ್ಪುಬಣ್ಣ ಯಾವ ದೋಷವೂ ಅಲ್ಲ ಎಂದು ತೋರಿಸಿಕೊಟ್ಟವರು ನಟಿ ಸರಿತಾ ಅವರು.ಅವರನ್ನು ‘ಕೃಷ್ಣಸುಂದರಿ’ ಎಂದು ಕರೆಯಲಾಗುತ್ತದೆ. ಕನ್ನಡ ನಟಿ ಸರಿತಾ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನಟಿ ಸರಿತಾ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.ಇವರ ಕಣ್ಣೋಟಕ್ಕೆ ಎಷ್ಟೋ ಜನ ಬಿದ್ದಿದ್ದಾರೆ.ಇವರ ಕಣ್ಣ ನೋಟಕ್ಕೆ ಬಲಿಯಾದ ಎಷ್ಟೋ ಜನ ಇವರಂತಹ ಹುಡುಗಿ ಬೇಕು ಎಂದು ಆಸೆಪಟ್ಟಿದ್ದರು.ಇವರು ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.ಇವರು ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ವಿಜೃಂಭಿಸಿದ್ದರು.ಆದರೆ ಇವರ ಜೀವನ ಮಾತ್ರ ನೋವಿನಲ್ಲಿ ಇತ್ತು.
ಇವರ ವಿವಾಹದ ನಂತರದ ಜೀವನ ಮಾತ್ರ ಇವರಿಗೆ ಬಹಳ ಕಹಿ ನೀಡಿತ್ತು.ಆಕೆಯ ನೋವುಗಳನ್ನು ಅರ್ಥಮಾಡಿಕೊಳ್ಳುವ ಗಂಡ ಮಾತ್ರ ಸಿಗಲಿಲ್ಲ. ಮದುವೆ ಮತ್ತು ಸಂಸಾರ ಎಂದರೆ ಏನು ಎಂದು ಅರ್ಥವಾಗದ ವಯಸ್ಸಿನಲ್ಲಿ ಇವರ ವಿವಾಹವಾಗಿತ್ತು. ನಟ ವೆಂಕಟಸುಬ್ಬಯ್ಯ ಎಂಬ ನಟನೊಂದಿಗೆ ಇವರ 14ನೇ ವಯಸ್ಸಿನಲ್ಲಿ ಮದುವೆ ಮಾಡಲಾಯಿತು.ಆಗ ಇನ್ನೂ ಹೈಸ್ಕೂಲು ಓದುತ್ತಿದ್ದ ಇವರು ಗತಿ ಇಲ್ಲದೆ ಗಂಡನ ಜೊತೆ ಚೆನ್ನೈ ನಲ್ಲಿ ವಾಸವಾದರು.35 ವರ್ಷದ ಗಂಡನ ಆಲೋಚನೆಗಳಿಗೂ 15ವರ್ಷದ ಸರಿತಾ ಅವರಿಗೂ ಹೊಂದಾಣಿಕೆ ಆಗಲಿಲ್ಲ.
ಅದರ ಜೊತೆ ಗಂಡನ ಹಿಂಸೆ ಬೇರೆ. ಇವೆಲ್ಲವನ್ನೂ ಸಹಿಸದೇ ಇವರು ತಂದೆಯ ಮನೆಗೆ ವಾಪಸ್ ಬಂದರು. ಆಗ ಅವರ ಗಂಡ ಹೆಂಡತಿಯನ್ನು ತನ್ನ ಮನೆಗೆ ಕಳಿಸಿ ಎಂದು ಕೋರ್ಟ್ ಮೆಟ್ಟಲನ್ನು ಏರಿದರು.ಆಗ ಸರಿತಾ ಅವರು ಅದು ನನ್ನ ಮದುವೆಯೇ ಅಲ್ಲ ಎಂದು ವಾದಿಸಿದಾಗ ಕೋರ್ಟ್ ಸರಿತಾ ಅವರಿಗೆ ವಿಚ್ಛೇದನ ನೀಡಲು ಒಪ್ಪಿಗೆ ನೀಡಿತು.ಆನಂತರ ಚಿತ್ರರಂಗಕ್ಕೆ ಕಾಲಿರಿಸಿದ ಸವಿತಾ ಟಾಪ್ ನಟಿಯಾಗಿ ಬೆಳೆದರು.ನಂತರ 12ವರ್ಷಗಳ ನಂತರ ಮಲಯಾಳಂ ನಟ ಮುಖೇಶ್ ಅವರನ್ನು ಮದುವೆ ಆದರು.ಕೆಲವು ವರ್ಷಗಳ ಕಾಲ ಅನ್ಯೋನ್ಯವಾಗಿದ್ದರು.
ಇವರಿಗೆ 2 ಮಕ್ಕಳಾದರು.ಕಾಲ ಕಳೆದ ನಂತರ ತನ್ನ ನಿಜ ವ್ಯಕ್ತಿತ್ವ ತೋರಿಸಿದ ಮುಖೇಶ್ ಸರಿತಾ ಅವರಿಗೆ ನಟನೆ ಮಾಡಲು ಅವಕಾಶ ಕೊಡಲಿಲ್ಲ.ಸಾಂಸಾರಿಕ ಪಾತ್ರಗಳನ್ನು ಮಾಡಲು ಸಹ ಬಿಡಲಿಲ್ಲ.ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದರು.ಇಲ್ಲಿದ್ದರೆ ಹಿಂಸೆ ಕೊಡುತ್ತಾರೆಂದು ಇಬ್ಬರು ಮಕ್ಕಳನ್ನು ಕರೆದುಕೊಂಡು ದುಬೈಗೆ ಹೋದ ನಟಿ ಸರಿತಾ ಅಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. 2011ರಲ್ಲಿ ಸರಿತಾ ಅವರು ವಿಚ್ಛೇದನ ನೀಡಿದರು. ತಮ್ಮ ಮಕ್ಕಳೇ ತನ್ನ ಜೀವನವೆಂದು ತಿಳಿದು ಒಬ್ಬ ಮಗನಿಗೆ MBBS ಮಾಡಿಸಿ, ಇನ್ನೊಬ್ಬ ಮಗನಿಗೆ ನ್ಯೂಜಿಲ್ಯಾಂಡ್ ನಲ್ಲಿ ಓದಿಸುತ್ತಿದ್ದಾರೆ.