ಮೋಹಕ ನಟಿ ಮಧುಬಾಲಾ ಅವರ ಕುಟುಂಬದ ಬಗ್ಗೆ ಹಾಗೂ ಅವರ ಸಿನಿ ಪ್ರಯಾಣದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಬಾಲಿವುಡ್ ಖ್ಯಾತ ನಟಿ ಹೇಮಾಮಾಲಿನಿ ಅವರ ಸೋದರ ಸೊಸೆ ನಟಿ ಮಧುಬಾಲಾ ತಮ್ಮ 13 ನೇ ವಯಸ್ಸಿನಲ್ಲಿ ತಾಯಿ ಕ್ಯಾನ್ಸರ್ ನಿಂದ ತೀರಿಕೊಂಡರು. ಇವರು ತನ್ನ ಸೋದರ ಅತ್ತೆಯಂತೆ ಫೇಮಸ್ ನಟಿ ಆಗಬೇಕು ಲಕ್ಷಾಂತರ ಜನ ನನ್ನ ಗುರುತಿಸಬೇಕು ಅಂದುಕೊಂಡರು. ಮಧುಬಾಲಾ ಅವರ ತಾಯಿ ಭರತನಾಟ್ಯ ಕಲಾವಿದೆಯಾಗಿದ್ದರು ತಂದೆ ಕೂಡ ಸಿನಿಮಾ ನಿರ್ಮಾಪಕರು. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ರೋಜಾ ಸಿನಿಮಾದ ಮೂಲಕ ಮಧುಬಾಲಾ ಅವರನ್ನು ಪ್ರೇಕ್ಷಕರು ಗುರುತಿಸಿದರು. ಇದಕ್ಕೂ ಮುಂಚೆ ಹಿಂದಿ ಹಾಗೂ ಮಲಯಾಳಂನಲ್ಲಿ ಸುಮಾರು 6 ಚಿತ್ರದಲ್ಲಿ ನಟಿಸಿದ್ದರೂ ಮಧುಬಾಲಾ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ರೋಜಾ. ನಂತರ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಫೇಮಸ್ ಆದರು.
1993 ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಣ್ಣಯ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದರು. ಅಣ್ಣಯ್ಯ ಸಿನಿಮಾದಲ್ಲಿ ಅತ್ತೆಯ ಅಟ್ಟಹಾಸ ಅಡಗಿಸುವ ಗಟ್ಟಿ ಸೊಸೆಯಾಗಿ ಗಂಡನ ಮುಗ್ಧತೆಗೆ ಮನಸೋಲುವ ಪತ್ನಿಯಾಗಿ ಅದ್ಭುತವಾಗಿ ನಟಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂನಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೋಹಕ ನಟಿ ಮಧುಬಾಲಾ ನಟಿಸಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ರನ್ನ, ಸೀತಾರಾಮ ಕಲ್ಯಾಣ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1990 ರಲ್ಲಿ ಗುಜರಾತ್ ಮೂಲದ ಉದ್ಯಮಿ ಆನಂದ್ ಷಾ ಎಂಬುವವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ ಸಂತಸದ ಕುಟುಂಬ ಅವರದಾಗಿದೆ