ಇತ್ತೀಚಿನ ದಿನಗಳಲ್ಲಿ ನಾವು ಟಿವಿ ಮಾಧ್ಯಮಗಳಲ್ಲಿ ಕರೋನ ಬದಲಾಗಿ ನೋಡುತ್ತಿರುವ ವಿಷಯ ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ವಿಚಾರದ ಬಗ್ಗೆ. ಈ ಡ್ರಗ್ಸ್ ಎನ್ನುವುದು ಎಷ್ಟು ಮಾರಕ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ನಮ್ಮ ದೇಹಕ್ಕೆ ಮಾತ್ರ ಅಲ್ಲಾ ದೇಶಕ್ಕೂ ಕೂಡಾ ಡ್ರಗ್ಸ್ ಎನ್ನುವುದು ಬಹುದೊಡ್ಡ ಮಾರಕ ಎನ್ನಬಹುದು. ಈ ವಿಚಾರ ತಿಳಿದಿದ್ದೂ ಕೂಡಾ ಕೆಲವು ಬುದ್ಧಿಜೀವಿಗಳು ಇದನ್ನೇ ವ್ಯಾಪಾರ ಮಾಡಿಕೊಂಡು ಸಮಾಜವನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ. ಈ ಡ್ರಗ್ ಪೆಡ್ಲರ್ ಗಳ ಮುಖ್ಯ ಉದ್ದೇಶ ಮತ್ತು ಗುರಿ ನಮ್ಮ ಯುವ ಜನತೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಈಗಿನ ಯುವಕ ಯುವತಿಯರು ಯಾವುದೋ ಕಾರಣಕ್ಕಾಗಿ ಡ್ರಗ್ಸ್ , ಸಿಗರೇಟ್ ಗಾಂಜಾ ಇಂತಹ ದುಶ್ಚಟಗಳಿಗೆ ಬಲಿಯಾಗಿ ಅವುಗಳ ದಾಸರಾಗುತ್ತ ಇದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಬಡವ ಶ್ರೀಮಂತ ಎನ್ನುವ ಯಾವುದೇ ಬೇಧ ಭಾವ ಇಲ್ಲದೆ ತಮ್ಮ ವಿದ್ಯಾಭ್ಯಾಸದ ಚಿಂತೆ ಬಿಟ್ಟು ಸಾವಿರಾರು ರೂಪಾಯಿ ಕೊಟ್ಟು ಯಾರಿಗೂ ತಿಳಿಯದೆ ಇಂತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಮುಂದಿನ ಉತ್ತಮ ಭವಿಷ್ಯವನ್ನು ತಮ್ಮ ಕೈಯ್ಯಾರೆ ತಾವೇ ನಾಶ ಮಾಡಿಕೊಳ್ಳುತ್ತಾ ಇದ್ದಾರೆ.

ಇವುಗಳ ಸಾಲಿಗೆ ಇತ್ತೀಚೆಗೆ ಸೇರಿದ್ದು ಕನ್ನಡ ಚಿತ್ರರಂಗದಲ್ಲಿ ಕೂಡಾ ಕೆಲವು ನಟ ನಟಿಯರು ಈ ಡ್ರಗ್ಸ್ ಜಾಲದಲ್ಲಿ ತೊಡಗಿರುವುದರ ಕುರಿತು ಟಿವಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇದರ ಮೂಲ ಬಹುಶಃ ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಇದರಿಂದ ಆರಂಭ ಆಗಿದೆ ಎನ್ನಬಹುದು. ಈ ಒಂದು ಪ್ರಕರಣದ ಹಿಂದೆಯೇ ಡ್ರಗ್ಸ್ ವಿಚಾರ ಕೂಡ ಹೊರಬಿದ್ದಿದ್ದು ಈಗಾಗಲೇ ಕನ್ನಡ ಚಿತ್ರರಂಗದ ರಾಗಿಣಿ ಮತ್ತು ಸಂಜನಾ ಇಬ್ಬರೂ ನಟಿಯರನ್ನು ಸಿಸಿಬಿ ಅವರು ವಿಚಾರಣೆಗೆ ಎಂದು ತಮ್ಮ ವಶಕ್ಕೆ ಪಡೆದುಕೊಂಡು ಇವರಿಬ್ಬರನ್ನು ಜೈಲಿಗೆ ಹಾಕಲಾಗಿದೆ. ಇವರ ಹಿಂದೆಯೇ ಚಿತ್ರರಂಗದ ಇನ್ನೊಂದು ನಟ ನಟಿಯ ಹೆಸರು ಹೊರಬಂದಿದ್ದು, ಇವರಿಗೂ ಕೂಡಾ ಸಿಸಿಬಿ ಕಡೆಯಿಂದ ವಿಚಾರಣೆಗೆ ನೋಟಿಸ್ ನೀಡಲಾಗಿದೆ. ಮನಸಾರೆ ಚಿತ್ರದಲ್ಲಿ ಜೋಡಿಯಾಗಿ ನಟಿಸಿ ನಂತರ ವಿವಾಹ ಆಗಿದ್ದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಇವರಿಗೆ ಕೂಡಾ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ನಂತರ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಇಬ್ಬರೂ ಕೂಡಾ ವಿಚಾರಣೆಗೆ ಹಾಜರಾಗಿದ್ದು, ಸತತ ನಾಲ್ಕು ಗಂಟೆಗಳ ವಿಚಾರಣೆಯ ನಂತರ ದಿಗಂತ್ ಅವರು ಸಿಸಿಬಿ ಅವರು ನಮಗೆ ವಿಚಾರಣೆಗೆ ಕರೆದಿದ್ದಾರೆ ನಾವು ಕೂಡಾ ಅವರ ವಿಚಾರಣೆಗೆ ಸಹಕಾರ ನೀಡುತ್ತಿದ್ದೇವೆ ಮತ್ತೆ ಏನಾದರೂ ವಿಚಾರಣೆಗೆ ಕರೆದರು ಕೂಡಾ ನಾವು ವಿಚಾರಣೆಗೆ ಹೋಗಿ ಸಹಕಾರ ನೀಡುತ್ತೇವೆ ಎಂದು ಹೇಳಿ ಹೋಗಿದ್ದಾರೆ.

ಡ್ರಗ್ಸ್ ಎನ್ನುವ ಕರಾಳ ದಂಧೆ ಇಂದು ಕೇವಲ ಚಿತ್ರರಂಗ ಮಾತ್ರ ಅಲ್ಲ ಇಡೀ ದೇಶದಾದ್ಯಂತ ಹೆಮ್ಮರವಾಗಿ ತನ್ನ ಬೇರುಗಳನ್ನು ಹಬ್ಬಿಸಿದೆ. ತಿಳಿಯದೇ ಇದರ ದಾಸರಾಗುವವರು ಕೆಲವರು ಆದರೆ ಡ್ರಗ್ಸ್ ಎನ್ನುವುದು ಮಾರಕ ಎನ್ನುವುದು ತಿಳಿದೂ ಅದನ್ನೇ ತೆಗೆದುಕೊಳ್ಳುವವರಿಂದ ಸಮಾಜ ಹಾಳಾಗುವುದು. ಆದರೆ ಚಿತ್ರರಂಗದಲ್ಲಿ ಯಾರೋ ಒಂದಿಬ್ಬರು ಇಂತಹ ಕಾರ್ಯದಲ್ಲಿ ಇದ್ದಾರೆ ಅಥವಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಇಡೀ ಚಿತ್ರರಂಗವನ್ನೇ ದೂಷಿಸುವುದು ತಪ್ಪು. ಇನ್ನೂ ಇದರ ಹಿಂದೆ ಎಷ್ಟು ಜನರು ಇದ್ದಾರೋ? ಬರೀ ಚಿತ್ರರಂಗದವರು ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳು , ಕೆಲವು ಸಾಮಾನ್ಯ ಜನರೂ ಪಾಲುದಾರರು ಇದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಈ ಡ್ರಗ್ಸ್ ಎನ್ನುವುದು ಇಡೀ ದೇಶಕ್ಕೆ ದೊಡ್ಡ ಮಾರಕವಾಗಿರುವುದು ಅಂತೂ ಸತ್ಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!