ಮುಂಬೈ ಸರ್ಕಾರವನ್ನೇ ನಡುಗಿಸಿದ ಈ ಕಂಗನಾ ರಣಾವತ್ ಯಾರು ಗೊತ್ತೇ?

0 5

ಕಂಗನಾ ರಣಾವತ್ ಈಕೆ ಕೇವಲ ಬಾಲಿವುಡ್ನ ಖ್ಯಾತ ನಟಿ ಮಾತ್ರವಲ್ಲದೆ ತನ್ನ ಹೋರಾಟದಿಂದ ಅತಿರಥ ಮಹಾರಥರನ್ನು ಬಗ್ಗು ಬಡಿದ ದಿಟ್ಟ, ಧೀರ ಮಹಿಳೆ. ಕಂಗನಾ ರಣಾವತ್ ಯಾರು ಇವರಿಗೆ ಶಿವಸೇನೆ ಜೀವ ಬೆದರಿಕೆಯನ್ನು ಹಾಕಿದ್ದು ಯಾತಕ್ಕಾಗಿ ಕಂಗನಾ ರಣಾವತ್ ಹಿನ್ನೆಲೆ ಏನು? ಈ ಎಲ್ಲ ವಿಚಾರಗಳ ಕುರಿತಾಗಿ ನಾವು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

ಕಂಗಣ ರಣವತ್ ಮೂಲತಃ ಹಿಮಾಚಲಪ್ರದೇಶದವರು. ಹಿಮಾಚಲ ಪ್ರದೇಶದಲ್ಲಿ ಒಂದು ಶ್ರೀಮಂತ ಹಾಗೂ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ಕಂಗನಾ ರಣಾವತ್ ಅವರ ತಂದೆ ಬಹುದೊಡ್ಡ ಬಿಸ್ನೆಸ್ ಮ್ಯಾನ್ ಹಾಗೇ ಇವರ ಅಜ್ಜ ಕೂಡಾ ಐಎಎಸ್ ಆಫೀಸರ್ ಆಗಿ ಇಡೀ ದೇಶಕ್ಕೆ ಮಾದರಿಯಾಗಿದ್ದ ವ್ಯಕ್ತಿ. ಇಂತಹ ಕುಟುಂಬ ಹಿನ್ನೆಲೆಯಲ್ಲಿ ಬೆಳೆದು ಬಂದ ಕಂಗನಾ ರಣಾವತ್ ಅವರಿಗೆ ಬಾಲಿವುಡ್ ನಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಸಣ್ಣವಯಸ್ಸಿನಲ್ಲಿ ಬೆಳೆದು ಬಂದಿತ್ತು. ಇದಕ್ಕಾಗಿ ತಾನು ನಟಿ ಯಾಗುವುದಕ್ಕೆ ತನ್ನ ಮನೆಯಲ್ಲಿ ವಿರೋಧವಿದ್ದರೂ ಕೂಡ ತಾನು ದೊಡ್ಡ ನಟಿಯಾಗಬೇಕು ಎನ್ನುವ ಆಸೆ ಹೊತ್ತುಕೊಂಡು ಮಹಾನಗರಿ ಮುಂಬೈಗೆ ಬರುತ್ತಾರೆ. ಹೀಗೆ ತನ್ನ ಅದೃಷ್ಟವನ್ನು ಹುಡುಕಿಕೊಂಡು ಮುಂಬೈಗೆ ಬಂದ ಕಂಗನಾ ರಣವತ್ ಅವರಿಗೆ ಅವರ ಮೊದಲ ಪ್ರಯತ್ನದಲ್ಲೇ ಗ್ಯಾಂಗ್ಸ್ಟರ್ ಎಂಬ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ. ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ನಿರ್ಮಾಣದ ಈ ಚಿತ್ರದಲ್ಲಿ ಕಂಗನಾ ರಣಾವತ್ ನಟಿಸಿ ಅತ್ಯುತ್ತಮ ನಟಿ ಎಂಬ ಖ್ಯಾತಿಯನ್ನು ಪಡೆದುಕೊಂಡು ಹಲವಾರು ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಳ್ಳುತ್ತಾರೆ. ಅನಂತರದ ಚಿತ್ರಗಳಲ್ಲಿ ಕೂಡ ತನ್ನ ಮೇಲೆ ನಂಬಿಕೆ ಇಟ್ಟಂತಹ ತನ್ನ ಸ್ವಂತ ಪ್ರತಿಭೆಯಿಂದಲೇ ಅನೇಕ ಚಿತ್ರ ನಿರ್ಮಾಪಕರಿಗೆ ಬಹುದೊಡ್ಡ ಲಾಭವನ್ನು ತಂದು ಕೊಡುತ್ತಾರೆ.

ಇನ್ನು ಇತ್ತೀಚೆಗಷ್ಟೇ ನಡೆದ ಸುಶಾಂತ್ ಸಿಂಗ್ ಹ ತ್ಯೆಯಾದ ನಂತರ ಈ ಬಾಲಿವುಡ್ ನಲ್ಲಿ ಎಲ್ಲವೂ ಸರಿಯಿಲ್ಲ ಇಲ್ಲಿ ಸ್ವಜನಪಕ್ಷಪಾತ ನಡೆಯುತ್ತದೆ ಬಾಲಿವುಡ್ನ ಕೆಲವು ಸ್ಟಾರ್ ನಟರು ಚಿಕ್ಕ ಚಿಕ್ಕ ನಟರನ್ನು ಬೆಳೆಯಲು ಬಿಡುತ್ತಿಲ್ಲ, ತಮ್ಮ ಮಕ್ಕಳು ಮತ್ತು ತಮ್ಮ ಕುಟುಂಬದವರು ಮಾತ್ರವೇ ಬಾಲಿವುಡ್ನಲ್ಲಿ ಮುಂದುವರಿಯಬೇಕು ಎನ್ನುವ ವಿಚಾರ ಹಾಗೂ ಆಸಕ್ತಿಯನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ಬಾಲಿವುಡ್ನಲ್ಲಿ ಮೊಟ್ಟಮೊದಲ ಬಾರಿಗೆ ಬಹಿರಂಗ ಪಡಿಸಿದ್ದೆ ಕಂಗನಾ ರಣಾವತ್. ಅಲ್ಲಿಂದ ಕಂಗನಾ ರಣಾವತ್ ಮೇಲೆ ವೈಚಾರಿಕವಾಗಿ ದಾಳಿ ನಡೆಯಲು ಆರಂಭವಾಗುತ್ತದೆ. ಬಾಲಿವುಡ್ನ ಕೆಲವೊಂದಿಷ್ಟು ಜನರು ಕಂಗನಾ ರಣಾವತ್ ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆ ಎನ್ನುವ ವಿಚಾರವನ್ನು ಹಬ್ಬಿಸುತ್ತಾರೆ. ಈ ಆರೋಪವನ್ನು ಮಾಡಿದ್ದು ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ಮುಖ್. ಇದರಿಂದ ಕೋಪಗೊಂಡ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೆ. ಹಾಗೆ ಸುಶಾಂತ್ ಸಿಂಗ್ ಆತ್ಮಹ ತ್ಯೆ ಕೂಡ ಇದು ಆತ್ಮಹ ತ್ಯೆಯಲ್ಲ ಕೊಲೆ ಎನ್ನುವ ವಿಚಾರವನ್ನು ಕೂಡ ನೇರವಾಗಿ ಹೇಳುತ್ತಾರೆ ಮಹಾರಾಷ್ಟ್ರ ಸರಕಾರ ಕೂಡ ತನ್ನ ಕೈಜೋಡಿಸಿದ ವಿಚಾರವನ್ನು ಬಹಿರಂಗಪಡಿಸುತ್ತಾರೆ ಹಾಗೂ ಬಲವಾದ ಆರೋಪವನ್ನು ಮಹಾರಾಷ್ಟ್ರ ಸರ್ಕಾರದ ಮೇಲೆ ಮಾಡುತ್ತಾರೆ. ಆರೋಪವನ್ನು ಸಹಿಸದ ಮಹಾರಾಷ್ಟ್ರ ಸರ್ಕಾರ ಕಂಗನಾ ರಣಾವತ್ ಅವರ ಮೇಲೆ ಆಡಳಿತಾತ್ಮಕ ದಾಳಿಯನ್ನು ನಡೆಸುತ್ತದೆ.

ಇದರಿಂದಾಗಿ ಶಿವಸೇನೆ ಮುಖ್ಯಸ್ಥ ಸಂಜಯ್ ರಾಉತ್ ಕಂಗನ ಅವರಿಗೆ ಕೊ ಲೆ ಬೆದರಿಕೆಯನ್ನೂ ಕೂಡ ಹಾಕುತ್ತಾರೆ. ಮಹಾರಾಷ್ಟ್ರದಲ್ಲಿನ ಶಿವಸೇನೆಯ ದುರಾಡಳಿತ ನೀತಿಯನ್ನು ಅದರ ವಿರುದ್ಧ ಹೋರಾಡಿದ ಕಂಗನಾ ರಣಾವತ್ ಮಹಾರಾಷ್ಟ್ರ ಹಾಗೂ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಆಗುವ ಸಾಧ್ಯತೆ ಇದೆ ಎನ್ನುವ ಆರೋಪವನ್ನು ಮಾಡಿದ್ದರು. ಇದರಿಂದಾಗಿ ಶಿವಸೇನೆ ಮುಖ್ಯಸ್ಥ ಸಂಜಯ್ ರಾಉತ್ ಕಂಗನ ಅವರಿಗೆ ಆಕೆ ಏನಾದ್ರೂ ಮುಂಬೈಗೆ ಬಂದರೆ ಜೀವಂತವಾಗಿ ಉಳಿಯುವುದಿಲ್ಲ ಎಂದು ಕೊಲೆ ಬೆದರಿಕೆಯನ್ನೂ ಕೂಡ ಹಾಕುತ್ತಾರೆ. ಆದರೆ ಈ ಬೆದರಿಕೆಗೆ ಬಗ್ಗದ ಕಂಗನಾ ರಾಣಾವತ್ ತಾನು ಸೆಪ್ಟೆಂಬರ್ 9ರಂದು ಮುಂಬೈಗೆ ಬರುವುದಾಗಿ ಹೇಳಿ ಶಿವಸೇನೆಯವರು ತನ್ನನ್ನು ಕೊಲ್ಲಬಹುದು ಹಾಗು ತನ್ನ ಮೇಲೆ ದಾಳಿಯನ್ನು ಮಾಡುವುದಾದರೂ ಮಾಡಬಹುದು ಎಂದು ಓಪನ್ ಚಾಲೆಂಜ್ ಮಾಡಿದ್ದರು. ಎಲ್ಲಾ ಸೂಕ್ಷ್ಮತೆಯನ್ನು ಗಮನಿಸಿದ ಕೇಂದ್ರ ಸರ್ಕಾರ ಕಂಗನಾ ರಣಾವತ್ ಅವರಿಗ ವೈ ಪ್ಲಸ್ ಭದ್ರತೆಯನ್ನು ನೀಡಿತ್ತು. ಈ ವೈ ಪ್ಲಸ್ ಭದ್ರತೆ ಜೊತೆಗೆ ಹಿಮಾಚಲ ಪ್ರದೇಶದಿಂದ ಕಂಗನಾ ರಣಾವತ್ ಮುಂಬೈಗೆ ಬಂದಿದ್ದರು. ಕಂಗನಾ ರಣಾವತ್ ಮುಂಬೈಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಅವರ 48 ಕೋಟಿ ಬೆಲೆಬಾಳುವ ಬ್ರಹತ್ ಬಂಗಲೆಯನ್ನು ಅನಧಿಕೃತವಾಗಿ ಇಟ್ಟುಕೊಂಡಿದ್ದಾರೆ ಎನ್ನುವ ಕಾರಣವನ್ನು ಒಡ್ಡಿ ಅದನ್ನು ನಿರ್ನಾಮ ಮಾಡುವ ಕೆಲಸದಲ್ಲಿತ್ತು. ಆದರೆ ಈ ಮೊದಲು ಹೈಕೋರ್ಟ್ನಲ್ಲಿ ತನ್ನ ಮನೆಯನ್ನು ತೆರವುಗೊಳಿಸಬೇಕಿದೆ ಸ್ವಲ್ಪ ಅವಕಾಶ ನೀಡಬೇಕು ಎನ್ನುವುದರ ಕುರಿತಾಗಿ ಕಂಗನಾ ರಾಣಾವತ್ ಮೊದಲೇ ಅರ್ಜಿ ಸಲ್ಲಿಸಿದ್ದರು. ಆದರೆ ಆ ತೀರ್ಪು ಹೊರಬೀಳುವ ಮೊದಲ ಮಹಾರಾಷ್ಟ್ರ ಸರಕಾರ ಅವರ ಮನೆಯನ್ನು ನಿರ್ನಾಮ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಕಂಗನಾ ರಣಾವತ್ ವಿರುದ್ಧ ಯಾವ ರೀತಿ ತನ್ನ ದ್ವೇಷವನ್ನು ತೀರಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಯೋಚಿಸಿ ಅವರ ತೇಜೋವಧೆ ಮಾಡಿತ್ತು. ಮಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿ ಒಬ್ಬ ಪ್ರತಿನಿಧಿಯಾಗಿ ಯೋಚನೆ ಮಾಡದೆ ತನ್ನ ಸ್ವಾರ್ಥಕ್ಕಾಗಿ ಯೋಚಿಸಿ ಇನ್ನೊಬ್ಬರಿಗೆ ಏನನ್ನಾದರೂ ಮಾಡಬಹುದು ಎನ್ನುವುದನ್ನು ಶಿವಸೇನೆಯ ಮುಖ್ಯಸ್ತ ಹಾಗು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ರೀತಿಯ ವರ್ತನೆಯನ್ನು ತೋರಿಸುತ್ತಾರೆ.

ಇನ್ನು ಕಂಗನ ಮುಂಬೈಗೆ ಕಾಲಿಡುತ್ತಿದ್ದಂತೆ ಮಹಾರಾಷ್ಟ್ರ ಅಲ್ಲದೆ ಇಡೀ ದೇಶದ ಎಲ್ಲೆಡೆ ಒಂದು ಹೊಸ ಕ್ರಾಂತಿ ಹುಟ್ಟಿಕೊಳ್ಳುತ್ತದೆ. ಇಂತಹ ದಿಟ್ಟ ಮಹಿಳೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಮುಂಬೈ ಏರ್ಪೋರ್ಟ್ ನಿಂದ ಹಿಡಿದು ಆಕೆಯ ಮನೆಯವರೆಗೂ ಲಕ್ಷಾಂತರ ಕಾರ್ಯಕರ್ತರು ಆಕೆಗೆ ರಕ್ಷಣೆಯನ್ನು ನೀಡುತ್ತಾರೆ. ಇದಾದ ಬಳಿಕ ತನ್ನ ಮನೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದಾಗ ಮಹಾರಾಷ್ಟ್ರ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಕಂಗನಾ ರಣಾವತ್ ಉದ್ಧವ ಠಾಕ್ರೆಗೆ ಏಕವಚನದಲ್ಲಿ ಮಾತನಾಡಿಸಿ, ನೀನು ಇಂದು ನನ್ನ ಮನೆಯನ್ನು ಬೀಳಿಸಿದ್ದೀಯ ಇದು ನಿನ್ನ ಸಮಯ ಹಾಗೂ ನಿನ್ನ ಆಟ ಆಗಿತ್ತು ಆದರೆ ಸಮಯ ಎಂದಿಗೂ ಒಂದೇ ರೀತಿ ಆಗಿರುವುದಿಲ್ಲ. ನನ್ನ ಮನೆಯನ್ನ ಧ್ವಂಸ ಮಾಡಿದ ತಕ್ಷಣ ನಾನೇನು ಸುಮ್ಮನೆ ಕೂರುವುದಿಲ್ಲ. ಬಾಲಿವುಡ್ನ ಕರ್ಮಕಾಂಡಗಳ ಬಗ್ಗೆ ಹಾಗೂ ಮಹಾರಾಷ್ಟ್ರ ಸರ್ಕಾರದ ಅನಾಚಾರಗಳ ಬಗ್ಗೆ ಜನರ ಮುಂದೆ ಎಳೆಎಳೆಯಾಗಿ ಇಡುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಗೆ ನೇರವಾಗಿ ತನ್ನ ಮಾತಿನ ಮೂಲಕ ಸವಾಲನ್ನು ಹಾಕಿದ್ದಾರೆ ಕಂಗನಾ ರಣಾವತ್.

Leave A Reply

Your email address will not be published.