ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳಲ್ಲಿ ಹೆಸರು ಮಾಡಿದವರು ಚಿಕ್ಕಣ್ಣ. ಸಾಮಾನ್ಯವಾಗಿ ಇತ್ತೀಚಿನ ಯಾವುದೆ ಚಿತ್ರಗಳಲ್ಲಿ ಚಿಕ್ಕಣ್ಣ ಇಲ್ಲಾ ಎಂಬಂತಿಲ್ಲ. ದರ್ಶನ್, ಶರಣ್, ಸುದೀಪ್, ಪ್ರಜ್ವಲ್ ದೇವರಾಜ್, ದಿಗಂತ್, ವಿಜಯ್ ರಾಘವೇಂದ್ರ ಹೀಗೆ ಎಲ್ಲರೊಂದಿಗೂ ಅಭಿನಯಿಸಿದ್ದಾರೆ. ಈಗ ಇವರು ನಾಯಕ ನಟರಾಗಿ ಅಭಿನಯಿಸುತ್ತಾರಂತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ನಾವು ತಿಳಿಯೋಣ.
ಎರಡು ವರ್ಷಗಳಿಂದ ಒಂದಷ್ಟು ಸುದ್ದಿಗಳು ಚಿಕ್ಕಣ್ಣ ಅವರು ನಾಯಕ ನಟ ಆಗುತ್ತಾರೆ ಎಂದು ಹೇಳಿದ್ದವು. ಆದರೆ ಈಗ ಆ ಸುದ್ದಿ ನಿಜವಾಗಿದೆ. ಚಿಕ್ಕಣ್ಣ ಅವರು ಉಪಾಧ್ಯಕ್ಷರಾಗಿ ನಮ್ಮೆಲ್ಲರ ಎದುರು ಬರುತ್ತಾರೆ. ಇದರ ಬಗೆಗೆ ಚಿಕ್ಕಣ್ಣ ಅವರನ್ನು ವಿಚಾರಿಸಿದಾಗ ಅವರು, ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವುದು ಖುಷಿ ಆಗುತ್ತಿದೆ. ಅದರ ಜೊತೆಗೆ ಜವಾಬ್ದಾರಿ ಹೆಚ್ಚಾದ ಅನುಭವ ಆಗುತ್ತಿದೆ. ಜೊತೆಗೆ ಅಭಿನಯಿಸುವ ತಂಡದಲ್ಲಿ ದೊಡ್ಡ ದೊಡ್ಡ ನಟರು ಹಾಗೂ ಟೆಕ್ನಿಷಿಯನ್ ಗಳು ಇರುವುದರಿಂದ ಕೊಂಚ ನೆಮ್ಮದಿ ಇಂದ ಇದ್ದೆನೆ ಎನ್ನುತ್ತಾರೆ. ನಾಯಕ ನಟ ಆಗುವುದರಿಂದ ಹಲವಾರು ಬದಲಾವಣೆ ಆಗುತ್ತವೆ ಎಂದು ತಿಳಿದಿದ್ದರೂ, ಜೊತೆಗೆ ಎರಡು ವರ್ಷಗಳ ಕಾಲ ಬಂದ ಕಥೆಗಳನ್ನು ಬಿಟ್ಟು ಉಪಾಧ್ಯಕ್ಷ ಸಿನಿಮಾ ಒಪ್ಪಲು ಕಾರಣ ಏನು ಎಂದು ಕೇಳಿದಾಗ, ನನ್ನನ್ನು ಜನರು ಒಪ್ಪುವಂತೆ ಕಥೆ ಸರಳವಾಗಿದೆ. ನನ್ನಿಂದ ಎಷ್ಟು ಹಾಸ್ಯ ತರಿಸಬಹುದು, ಹೇಗೆ ನಾಯಕನನ್ನಾಗಿ ಮಾಡಿದರೆ ನಗಿಸಬಹುದು ಎಂದು ಯೋಚಿಸಿ ತಯಾರಾದ ಕಥೆ, ಜನರಿಗೆ ಹತ್ತಿರವಾಗುವಂತಹ ಕಥೆ ಉಪಾಧ್ಯಕ್ಷ. ಅದೆ ಭರವಸೆಯಿಂದ ನಿರ್ದೇಶಕರು ಕಥೆ ಹೇಳಿದಾಗ ಇಷ್ಟವಾಗಿ ಒಪ್ಪಿದೆ ಎಂದು ಚಿಕ್ಕಣ್ಣ ಹೇಳಿದರು.
ಅಧ್ಯಕ್ಷ ಚಿತ್ರದಿಂದ ಸಿಕ್ಕಂತಹ ಹೆಸರು ಉಪಾಧ್ಯಕ್ಷ. ಈ ಉಪಾಧ್ಯಕ್ಷ ಸಿನಿಮಾ ಅಧ್ಯಕ್ಷ ಸಿನಿಮಾದ ಹೋಲಿಕೆ ಇರುತ್ತದೆಯೆ, ಸಂಘ ಎಲ್ಲಾ ಇದ್ದು ಅದಕ್ಕೆ ಉಪಾಧ್ಯಕ್ಷ ಆಗಿರುತ್ತಿರಾ ಎಂದು ಕೇಳಿದಾಗ, ಉಪಾಧ್ಯಕ್ಷ ಹಾಗೂ ಅಧ್ಯಕ್ಷ ಎರಡು ಚಿತ್ರಗಳು ಬೇರೆ ಬೇರೆ. ಸಿನಿಮಾದಲ್ಲಿ ಸಂಘ ಇದೆಯೋ ಇಲ್ಲವೋ ಎಂಬುದು ಕಥೆ ಪೂರ್ತಿಯಾಗಿ ತಯಾರಾದ ಮೇಲೆ ಇನ್ನೂ ಒಂದು ಅರ್ಧ ತಿಂಗಳಲ್ಲಿ ನಿರ್ಧಾರ ಆಗುತ್ತದೆ ಎಂದರು ಚಿಕ್ಕಣ್ಣ. ಉಪಾಧ್ಯಕ್ಷ ಸಿನಿಮಾಕ್ಕಾಗಿ ನಡೆದ ತಯಾರಿಗಳೇನು ಎಂದು ಕೇಳಿದಾಗ, ಚಿಕ್ಕ ಪುಟ್ಟ ತಯಾರಿಗಳಷ್ಟೆ ಮಾಡಿಕೊಂಡಿರುವುದು. ಏನೆ ಹಾಕಿಕೊಂಡು ತಯಾರಿ ಮಾಡಿದರೂ ಬೆಳ್ಳಗೆ ಆಗುವುದಿಲ್ಲ ನಾನು. ಎಲ್ಲವೂ ನಿರ್ದೇಶಕರು ಹಾಗೂ ಛಾಯಾಗ್ರಾಹಕರ ನಿರ್ಧಾರ ಎಂದರು ಚಿಕ್ಕಣ್ಣ. ಸಾಹಸ ಹಾಗೂ ರೊಮಾನ್ಸ್ ಎಲ್ಲ ಚಿತ್ರದಲ್ಲಿ ಇದೆಯಾ ಕೇಳಿದಾಗ, ಕಥೆ ಬೇಡಿದರೆ ಅದೆಲ್ಲವೂ ಇರಬಹುದು. ಆದರೆ ಅದರ ಬಗೆಗಿನ ಮಾಹಿತಿ ಸಿಗಲು ಒಂದು ಅರ್ಧ ತಿಂಗಳು ಬೇಕು ಎಂದು ಚಿಕ್ಕಣ್ಣ ಹೇಳಿದರು. ನಿಮ್ಮ ಜೊತೆ ಚಂದ್ರ ಮೋಹನ್ ಎರಡು ಸಿನಿಮಾ ಮಾಡಿದ್ದಾರೆ. ಅವರ ಮೇಲಿನ ಆ ನಂಬಿಕೆ ಇಂದ ಈ ಕಥೆ ಇಷ್ಟ ಆಗಿದ್ದಾ ಕೇಳಿದರೆ ಅದಕ್ಕೆ ಚಿಕ್ಕಣ್ಣ ಚಂದ್ರ ಮೋಹನ್ ಜೊತೆಗೆ ಮಾಡಿದ ಎರಡು ಚಿತ್ರಗಳು ಹಾಸ್ಯ ಆಧಾರಿತವಾಗಿದೆ. ಚಿಕ್ಕಣ್ಣನ ಪ್ಲಸ್ ಮತ್ತು ಮೈನಸ್ ಎರಡು ಚಂದ್ರ ಮೋಹನ್ ಅವರಿಗೆ ತಿಳಿದಿದೆ. ಅವರ ಹಾಸ್ಯ ಸ್ವಭಾವ ಚೆನ್ನಾಗಿ ಇರುವುದರಿಂದ ಅವರೊಂದಿಗೆ ಕೆಲಸ ಮಾಡುವುದು ಸುಲಭ ಅನಿಸಿತ್ತು. ಚಂದ್ರ ಮೋಹನ್ ಅವರಿಗೆ ನನ್ನಿಂದ ಹಾಸ್ಯ ಹೇಗೆ ತೆಗೆಸಬೇಕೆಂಬ ಅರಿವು ಇದೆ. ಕಥೆಯು ಚೆನ್ನಾಗಿ ಇರುವುದರಿಂದ ಒಪ್ಪಿದೆ ಎಂದರು.
ಚಿಕ್ಕಣ್ಣ ನಾಯಕ ನಟರಾಗಿ ಅಭಿನಯಿಸುತ್ತಾರೆ ಎಂದಾಗ ಚಿತ್ರರಂಗದಿಂದ ಯಾರು ಯಾರು ಶುಭಾಶಯ ತಿಳಿಸಿದರು, ಏನು ಅನಿಸಿತು ಅಂದಾಗ, ಎಲ್ಲರೂ ಶುಭಾಶಯ ತಿಳಿಸಿದ್ದಾರೆ ಹೇಳುತ್ತಾ ಹೋದರೆ ತುಂಬಾ ಆಗುತ್ತದೆ. ಅವರ ಪ್ರೀತಿಗೆ ಖುಷಿಯಾಗುತ್ತದೆ ಎಲ್ಲ ನಾಯಕ ನಟರು ಹುಶಾರಾಗಿರು ಎಂದು ವಿಶ್ ಮಾಡಿದ್ದಾರೆ ಎಂದರು ಚಿಕ್ಕಣ್ಣ. ದರ್ಶನ್ ಅವರ ಜೊತೆ ತುಂಬಾ ಓಡಾಟ ಮಾಡಿದ್ದಿರಿ, ಅವರ ಸಲಹೆ ಹೇಗಿತ್ತು? ಎಂದು ಕೇಳಿದಾಗ, ದರ್ಶನ್ ಅವರು ಮೈಸೂರಿಗೆ ಬಂದಾಗ ನನಗೆ ಕಾಲ್ ಮಾಡುತ್ತಿದ್ದರು. ನಾನು ಮೈಸೂರಿನಲ್ಲಿ ಇದ್ದದ್ದರಿಂದ ಅವರೊಟ್ಟಿಗೆ ಹೋಗುತ್ತಿದ್ದೆ. ಉಪಾಧ್ಯಕ್ಷದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ ಅವರು ದರ್ಶನ್ ಅವರ ರಾಬರ್ಟ್ ಚಿತ್ರಕ್ಕೂ ನಿರ್ಮಾಪಕರು. ಅವರಿಂದ ವಿಷಯ ತಿಳಿದ ದರ್ಶನ್ ಅವರು ಒಳ್ಳೆಯದಾಗಲಿ, ಹುಷಾರಾಗಿರು, ನಿನ್ನತನ ಬಿಟ್ಟು ಬೇರೆ ಏನು ಮಾಡಿಕೊಳ್ಳಲು ಹೋಗಬೇಡ ಎಂದು ಹೇಳಿದರು ಎಂದು ಚಿಕ್ಕಣ್ಣ ಹೇಳುತ್ತಾರೆ. ಮತ್ತೆ ನಾಯಕರಾಗಿ ಕಥೆ ಒಪ್ಪಿಕೊಳ್ಳುತ್ತಿರಾ? ಯಾವಾಗ ಉಪಾಧ್ಯಕ್ಷರಾಗಿ ಚಿಕ್ಕಣ್ಣ ಅವರನ್ನು ನೋಡಲು ಸಿಗುತ್ತದೆ ಎಂದು ಕೇಳಿದಾಗ, ಉಪಾಧ್ಯಕ್ಷ ಚಿತ್ರ ಮುಗಿದ ಮೇಲೆ ಬೇರೆ ಕಥೆ ಒಪ್ಪುವುದು ಬಿಡುವುದರ ನಿರ್ಧಾರ. ಇನ್ನೊಂದು ಮೂರು ತಿಂಗಳ ಮೇಲೆ ಚಿತ್ರೀಕರಣ ಪ್ರಾರಂಭವಾಗಬಹುದು. ನಿರ್ದೇಶಕರಿಗೆ ಬಿಟ್ಟಿದ್ದು ಚಿತ್ರ ಯಾವಾಗ ಬಿಡುಗಡೆ ಮಾಡಬೇಕು ಎಂಬುದು ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಚಿಕ್ಕಣ್ಣ ಹೇಳುತ್ತಾರೆ.
ಚಿಕ್ಕಣ್ಣ ಅವರು ತಾವು ನಾಯಕ ನಟರಾಗಿ ಅಭಿನಯಿಸುತ್ತಿರುವ ಬಗ್ಗೆ ನ್ಯೂಸ್ ಫಸ್ಟ್ ಚಾನೆಲ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಒಂದು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಚಿಕ್ಕಣ್ಣ ಅವರಿಗೆ ಒಳ್ಳೆಯದಾಗಲಿ, ಒಳ್ಳೆಯ ಹೆಸರು ಕೀರ್ತಿ ಉಪಾಧ್ಯಕ್ಷ ಸಿನಿಮಾಕ್ಕೆ ಸಿಗಲಿ.