ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಿದರೆ ದೇಹಕ್ಕೆ ಬೇಕಾಗಿರುವ ನೀರಿನಾಂಶವು ಸಿಗುವುದು ಹಾಗೂ ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಅದೇ ರೀತಿಯಾಗಿ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ಕೂಡ ಬಳಕೆ ಮಾಡಬಹುದು ಇದನ್ನು ಸಲಾಡ್ ಅಥವಾ ಇತರ ರೂಪದಲ್ಲಿ ಸೇವನೆ ಮಾಡಲಾಗುತ್ತದೆ ಇದು ಬೇಸಗೆಯಲ್ಲಿ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು ರಕ್ತದಲ್ಲಿನ ಕೊಲೆಸ್ಟ್ರಾಲ್ ನಿರ್ವಹಣೆ ಮಾಡಲು ಕಲ್ಲಂಗಡಿ ತುಂಬಾ ಸಹಕಾರಿಯಾಗಿದೆ ಹೀಗಾಗಿ ಇದು ಹೃದಯದ ಕಾಯಿಲೆಯ ಅಪಾಯ ತಡೆಯುತ್ತದೆ
ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಗಳು ಹೇರಳವಾಗಿವೆ ಕಲ್ಲಂಗಡಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಖನಿಜಗಳು ಮತ್ತು ವಿಟಮಿನ್ ಬಿ ಸಿ ಮತ್ತು ಡಿ ಗಳು ಸಾಕಷ್ಟು ಪ್ರಮಾಣದಲ್ಲಿರುತ್ತವೆ .ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ದೇಹಕ್ಕೆ ತುಂಬಾ ಪ್ರಯೋಜನಕಾರಿ ಇದು ದೇಹವನ್ನು ಚೈತನ್ಯದಿಂದ ಇರುವಂತೆ ಮಾಡುತ್ತದೆ ಇದರಿಂದ ಆಯಾಸವಾಗುವುದಿಲ್ಲ ಮತ್ತು ಕೆಲಸ ಮಾಡಲು ಸಹ ಸಹಾಯ ಮಾಡುತ್ತದೆ ನಾವು ಈ ಲೇಖನದ ಮೂಲಕ ಕಲ್ಲಂಗಡಿ ಹಣ್ಣಿನ ಬೆಳೆಯನ್ನು ಬೆಳೆಯುವ ಮಾಹಿತಿಯನ್ನು ತಿಳಿದುಕೊಳ್ಳೋಣ.
ಎರಡು ಅಥವಾ ಮೂರು ತಿಂಗಳಲ್ಲಿ ಕಲಂಗಡಿ ಬೆಳೆದು ಲಾಭ ಪಡೆದುಕೊಳ್ಳಬಹುದು ಕಲ್ಲಂಗಡಿ ಬಳ್ಳಿಗೆ ಸರಿಯಾಗಿ ಗೊಬ್ಬರ ನೀರು ಹಾಕಿ ಬೆಳೆಸಬೇಕು ಡಿಸೆಂಬರ್ ತಿಂಗಳಲ್ಲಿ ಕಲಂಗಡಿ ಗಿಡವನ್ನು ನೇಡಲಾಗುತ್ತದೆ ಬೀಜವನ್ನು ನರ್ಸರಿಗೆ ಕೊಟ್ಟು ಭೂಮಿಗೆ ಅಗೆ ಹಾಕಲಾಗುತ್ತದೆ ನಂತರ ಕಲಂಗಡಿ ಸಸಿಯನ್ನು ನೆಡಲಾಗುತ್ತದೆ ಒಂದು ಎಕರೆ ಭೂಮಿಗೆ ಎಂಟು ಸಾವಿರ ಸಸಿ ಬೇಕಾಗುತ್ತದೆ ನರ್ಸರಿಯಲ್ಲಿ ಬೀಜ ಕೊಟ್ಟರೆ ಸಸಿ ಮಾಡಿ ಕೊಡುತ್ತಾರೆ
ಒಂದು ಟ್ರೈ ಸಸಿ ಗೆ ನಲವತ್ತು ರೂಪಾಯಿ ಇರುತ್ತದೆ .ಎರಡು ಎಕರೆ ಜಮೀನಿಗೆ ಹದಿನಾರು ಸಾವಿರ ಸಸಿ ಬೇಕಾಗುತ್ತದೆ ಒಂದು ಟ್ರೈ ಅಲ್ಲಿ ನೂರು ಸಸಿಗಳು ಇರುತ್ತದೆ ನೇರವಾಗಿ ಬೀಜವನ್ನು ಹಾಕಿದರೆ ಚೆನ್ನಾಗಿ ಬರುವುದಿಲ್ಲ ಸಸಿಯನ್ನು ನೆಟ್ಟು ಎರಡೂವರೆ ತಿಂಗಳಲ್ಲಿ ಫಲ ಸಿಗುತ್ತದೆ ಡಿಸೆಂಬರ್ ಅಲ್ಲಿ ಸಸಿ ನೆಟ್ಟರೆ ಪೆಬ್ರುವರಿ ಮಾರ್ಚ ರಲ್ಲಿ ಕಲ್ಲಂಗಡಿ ಹಣ್ಣು ಬಿಡುತ್ತದೆ ನೀರು ಜಾಸ್ತಿ ಹಾಕಿದರೆ ಒಳ್ಳೆಯ ಇಳುವರಿ ಬರುತ್ತದೆ ಹಾಗೂ ಕಸ ಬರದೆ ಇರಲು ಪೇಪರ್ ಹಾಕಬೇಕು .
ಬಾಂಬೆ ಪುಣ ಹೈದ್ರಾಬಾದ್ ಗಳಿಗೆ ಮಾರಾಟ ಮಾಡುತ್ತಾರೆ ಎಂಬತ್ತು ಸಾವಿರದಿಂದ ಒಂದು ಲಕ್ಷದ ವರೆಗೆ ಖರ್ಚು ಬರುತ್ತದೆ ಮೂರು ಲಕ್ಷದ ವರೆಗೆ ಆದಾಯವನ್ನು ಗಳಿಸಬಹುದು ಗೊಬ್ಬರ ಹಾಗೂ ಕಲ್ಲಂಗಡಿ ಬಳ್ಳಿಗೆ ಹಾಕುವ ಎಣ್ಣೆಗೆ ಸ್ವಲ್ಪ ಖರ್ಚು ಬೀಳುತ್ತದೆ ವಾರದಲ್ಲಿ ಎರಡು ಸಲ ಕಲ್ಲಂಗಡಿ ಬಳ್ಳಿಗೆ ಎಣ್ಣೆಯನ್ನು ಹಾಕಬೇಕು ಬಳ್ಳಿಗೆ ತಂಪು ಬಂದಾಗ ಹೆಚ್ಚು ನೀರು ಹಾಕಿದಾಗ ಕಲ್ಲಂಗಡಿ ಬಳ್ಳಿಗೆ ರೋಗ ಬರುತ್ತದೆ .
ಕಲ್ಲಂಗಡಿ ಹಣ್ಣಿನಲ್ಲಿ ಎರಡು ಮೂರು ತರ ಇರುತ್ತದೆ ಅದರಲ್ಲಿ ಕರಿ ಕಲ್ಲಂಗಡಿ ಹಣ್ಣಿಗೆ ತುಂಬಾ ಬೆಲೆ ಇದೆ ಕ್ವಿಂಟಲ್ ಲೆಕ್ಕದಲ್ಲಿ ಮಾರಾಟ ಆಗುತ್ತದೆ ಕೆಜಿಗೆ ನಾಲ್ಕು ಹಾಗೆಯೇ ಎಂಟು ರೂಪಾಯಿಯಂತೆ ಒಂದು ಕೆಜಿಗೆ ಮಾರಾಟ ಆಗುತ್ತದೆ ಎರಡು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯಲು ಒಂದು ಲಕ್ಷದಷ್ಟು ಖರ್ಜು ಬರುತ್ತದೆ ಕೇವಲ ಮೂರೇ ತಿಂಗಳಲ್ಲಿ ಆದಾಯವನ್ನು ಗಳಿಸಬಹುದು ಕಲ್ಲಂಗಡಿ ಹಣ್ಣಿಗೆ ಬೇಸಿಗೆ ಕಾಲದಲ್ಲಿ ತುಂಬಾ ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯ ಬರುತ್ತದೆ.