ಮಹಾಭಾರತ ಯಾರಿಗೆ ತಿಳಿದಿಲ್ಲ. ಇದು ನಮ್ಮ ಗ್ರಂಥಗಳಲ್ಲೇ ಶ್ರೇಷ್ಠ ಗ್ರಂಥವೆಂದು ಖ್ಯಾತಿ ಪಡೆದಿದೆ. ಇದು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಮಾನವ ಜಾತಿಗೆ ಸೀಮಿತವಾಗಿದೆ.ಇದರಿಂದ ಪ್ರತಿ ಮನುಷ್ಯನಿಗೆ ಜ್ಞಾನ ಮತ್ತು ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಜೀವನಕ್ಕೆ ಸಂಬಂಧ ಪಟ್ಟ ಎಲ್ಲಾ ರೀತಿಯ ವರ್ಣನೆ ಸಿಗುತ್ತದೆ. ಈ ಗ್ರಂಥದಲ್ಲಿ ದೇಶ, ಧರ್ಮ, ನ್ಯಾಯ, ರಾಜನೀತಿ, ಸಮಾಜ, ಯುದ್ಧ, ಪರಿವಾರ,ಜ್ಞಾನ, ವಿಜ್ಞಾನ ಇತ್ಯಾದಿ ಸಮಸ್ತ ವಿಷಯಗಳ ವರ್ಣನೆ ಸಿಗುತ್ತದೆ. ಇಲ್ಲಿ ನಾವು ಶ್ರೀ ಕೃಷ್ಣ ಪಾಂಡವರ ವನವಾಸದ ಸಂದರ್ಭದಲ್ಲಿ ಹೇಳಿದ 5 ಕಲಿಯುಗದ ಸತ್ಯವನ್ನು ತಿಳಿಯೋಣ.

ಪಾಂಡವರಿಗೆ ವನವಾಸದ ಶಿಕ್ಷೆ ಆಗಿದ್ದ ಸಮಯ ಅದಾಗಿತ್ತು. ವನವಾಸಕ್ಕೆ ಕಾಡಿಗೆ ಹೋಗುವ ಮುಂಚೆ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಪಾಂಡವರು ಕೃಷ್ಣನ ಬಳಿ ಬರುತ್ತಾರೆ.ಪಾಂಡವರು ಆಗ ಕೇಳುತ್ತಾರೆ ” ಹೇ ಮಾಧವ ಇದು ದ್ವಾಪರಯುಗದ ಅಂತ್ಯಕಾಲವಾಗಿದೆ. ಬರುವ ಕಲಿಯುಗದ ಪರಿಣಾಮ ಮತ್ತು ಪ್ರಭಾವ ಹೇಗಿರಲಿದೆ” ಎಂದು. ಶ್ರೀ ಕೃಷ್ಣ ಹೇಳುತ್ತಾನೆ “ನಾನು ಇದಕ್ಕೆ ಅವಶ್ಯವಾಗಿ ಉತ್ತರ ಕೊಡುತ್ತೇನೆ ಆದರೆ 5 ಜನ ಅಣ್ಣ ತಮ್ಮಂದಿರು ಕಾಡಿಗೆ ಹೋಗಿ ಮತ್ತು ಅಲ್ಲಿಯ ವಿಷಯವನ್ನು ಬಂದು ಹೇಳಿ” ಎಂದನು. ನಂತರ ಪಾಂಡವರು ಕಾಡಿಗೆ ಹೋಗುತ್ತಾರೆ. ಅಲ್ಲಿ ಯುಧಿಷ್ಠಿರನಿಗೆ 2ಸೊಂಡಿಲಿನ ಒಂದು ಆನೆ ಕಾಣುತ್ತದೆ. ಅರ್ಜುನನಿಗೆ ಒಂದು ಪಕ್ಷಿ ಅದರ ರೆಕ್ಕೆಗಳ ಮೇಲೆ ವೇದ, ಪುರಾಣಗಳನ್ನು ಬರೆದಿತ್ತು ಆದರೆ ಪಕ್ಷಿ ಮಾಂಸವನ್ನು ಸೇವಿಸುತ್ತಿತ್ತು. ಭೀಮನ ಕಣ್ಣಿಗೆ ಆಗ ತಾನೇ ಜನುಮ ನೀಡಿದ ಹಸು ಮತ್ತು ಕರು ಕಾಣುತ್ತದೆ. ಸಹದೇವನಿಗೆ 5 ರಿಂದ 6 ಬಾವಿಗಳು ಕಂಡರೂ ಮಧ್ಯದ ಬಾವಿಯಲ್ಲಿ ನೀರಿರಲಿಲ್ಲ. ನಕುಲನಿಗೆ ಪರ್ವತದ ಮೇಲಿಂದ ದೊಡ್ಡ ದೊಡ್ಡ ಕಲ್ಲುಗಳು ಮರಗಳನ್ನು ಉರುಳಿಸಿ ಕೆಳಗೆ ಬರುತ್ತಿದ್ದವು. ಆ ಕಲ್ಲುಗಳನ್ನು ಸಣ್ಣ ಗಿಡ ಸ್ಪರ್ಶಿಸಿ ನಿಲ್ಲಿಸುತ್ತಿತ್ತು.

ನಂತರ ಎಲ್ಲರೂ ಬಂದು ಕೃಷ್ಣನ ಬಳಿ ಎಲ್ಲವನ್ನೂ ಹೇಳುತ್ತಾರೆ. ಮೊದಲು ಯುಧಿಷ್ಠಿರ ತಾನು ನೋಡಿದ್ದನ್ನು ಹೇಳಿದಾಗ ಶ್ರೀ ಕೃಷ್ಣ “ಕಲಿಯುಗದಲ್ಲೂ ಇದೇ ತರ ಜನರು ಶೋಷಣೆ ಮಾಡುತ್ತಾರೆ. ಹೇಳುವುದು ಒಂದು ಮತ್ತು ಮಾಡುವುದು ಒಂದು. ಇದೇ ತರದ ಜನರು ಕಲಿಯುಗವನ್ನು ಆಳುತ್ತಾರೆ”ಎಂದು ಹೇಳುತ್ತಾನೆ. ನಂತರ ಅರ್ಜುನ ತನ್ನ ಸಂಗತಿಯನ್ನು ಹೇಳಿದಾಗ ಕೃಷ್ಣನು “ಕಲಿಯುಗದಲ್ಲೂ ಇದೇ ತರಹದ ಜನರಿರುತ್ತಾರೆ.ಅವರು ಜ್ಞಾನಿಗಳಾಗಿರುತ್ತಾರೆ. ಆದರೆ ಅವರ ಆಚರಣೆ ರಾಕ್ಷಸೀಯವಾಗಿರುತ್ತದೆ. ಆದರೆ ಅವರ ಮನಸ್ಸಿನಲ್ಲಿ ಯಾವ ಮನುಷ್ಯ ಯಾವಾಗ ಸಾಯುತ್ತಾನೆ, ಆಸ್ತಿ ನಮ್ಮದಾಗಲಿ, ಸಂಸ್ಥಾಪಕರು ಬೇಗ ಸತ್ತು ನಮ್ಮದಾಗಲಿ, ಎಷ್ಟೇ ದೊಡ್ಡ ಮನುಷ್ಯನಾದರೂ ಅವನ ದ್ರಷ್ಟಿ ಹಣ ಮತ್ತು ಪದವಿಯ ಮೇಲಿರುತ್ತದೆ” ಎಂದು ಹೇಳುತ್ತಾನೆ.

ನಂತರ ಭೀಮ ತಾನು ನೋಡಿದ್ದನ್ನು ಹೇಳಿದಾಗ ಶ್ರೀ ಕೃಷ್ಣ”ಕಲಿಯುಗದ ಮನುಷ್ಯ ಶಿಶುಪಾಲನಾಗುತ್ತಾನೆ. ಮಕ್ಕಳಿಗೆ ವಿಕಾಸ ಹೊಂದುವ ಅವಕಾಶವೇ ನೀಡುವುದಿಲ್ಲ. ಯಾರದ್ದೋ ಮಗ ಸಂಸಾರ ಬಿಟ್ಟು ಸಾಧುವಿನ ಅವತಾರ ತಾಳಿದರೆ ಅವನ ದರ್ಶನ ಮಾಡುತ್ತಾರೆ. ಆದರೆ ಸ್ವಂತ ಮಗ ಸಾಧು ಆಗಲು ಹೊರಟರೆ ಆಳುತ್ತಾರೆ” ಎಂದು ಹೇಳುತ್ತಾನೆ. ನಂತರ ಸಹದೇವ ಅವನು ನೋಡಿದ್ದನ್ನು ಹೇಳಿದಾಗ ಶ್ರೀ ಕೃಷ್ಣ” ಕಲಿಯುಗದಲ್ಲಿ ಜನ ಸಣ್ಣಪುಟ್ಟ ಉತ್ಸವಗಳಾದ ಮದುವೆ, ಮುಂಜಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಅಕ್ಕ ಪಕ್ಕದಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ತಿರುಗಿ ನೋಡುವುದಿಲ್ಲ. ಮತ್ತೊಂದೆಡೆ ಮೋಜು, ಮಸ್ತಿ, ಮನೆ, ಸೌಂದರ್ಯ, ಕಾಮದಲ್ಲಿ ದುಡ್ಡನ್ನು ವ್ಯರ್ಥ ಮಾಡುತ್ತಾರೆ. ಆದರೆ ಯಾರ ಕಣ್ಣೀರು ಒರೆಸಲು ಬಯಸುವುದಿಲ್ಲ”ಎಂದು ಹೇಳುತ್ತಾನೆ. ನಕುಲ ತಾನು ನೋಡಿದ್ದನ್ನು ಹೇಳಿದಾಗ ಶ್ರೀ ಕೃಷ್ಣ “ಕಲಿಯುಗದಲ್ಲಿ ಮನುಷ್ಯ ತುಂಬಾ ಕಳಪೆ ಮಟ್ಟಕ್ಕೆ ಇಳಿಯುತ್ತಾನೆ.ಅವನ ಹತ್ತಿರ ಎಷ್ಟೇ ಸುಖ ಸಂಪತ್ತು ಇದ್ದರೂ ಸುಖ ಇರುವುದಿಲ್ಲ. ಆದರೆ ಹರೀನಾಮವನ್ನು ಮಾಡುವುದರಿಂದ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ದೇವರ ಭಜನೆ,ಕೀರ್ತನೆಗಳಿಂದ ಮಾತ್ರ ಕಲಿಯುಗದ ಕೂಪದಿಂದ ಕಾಪಾಡಿಕೊಳ್ಳಬಹುದು” ಎಂದು ಹೇಳುತ್ತಾನೆ.

Leave a Reply

Your email address will not be published. Required fields are marked *