Kalasa pooja: ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತದೆ ಕಳಸ ಎನ್ನುವುದು ಲಕ್ಷ್ಮಿ ಸ್ವರೂಪವಾಗಿದ್ದು ಮನೆಯಲ್ಲಿ ನೆಲೆಸಿ ಹರಸುತ್ತಾಳೆ. ಇಂತಹ ಆಧ್ಯಾತ್ಮಿಕ ಮಹತ್ವವನ್ನು ಪಡೆದ ಕಳಸವನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಕಳಸವನ್ನು ಹೇಗೆ ಇಡಬೇಕು ಕಳಸಕ್ಕೆ ಏನೆಲ್ಲಾ ಬೇಕಾಗುತ್ತದೆ ನಂತರ ಕಳಸವನ್ನು ಕದಲಿಸುವುದು ಹೇಗೆ ಈ ಎಲ್ಲಾ ಮಾಹಿತಿಯನ್ನು ಈ ಲೇಖನವನ್ನು ಓದುವುದರಿಂದ ತಿಳಿಯುತ್ತದೆ

ಕಳಸವು ಲಕ್ಷ್ಮೀ ಸ್ವರೂಪವಾಗಿದೆ ಅದನ್ನು ಇಡುವಾಗ ಎಚ್ಚರದಿಂದ ಇಡಬೇಕಾಗುತ್ತದೆ. ಕಳಸ ಇಡುವಾಗ ಯಾವುದೆ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಚೊಂಬನ್ನು ಕಳಸಕ್ಕೆ ಬಳಸಲೆಬಾರದು. ಕಳಸ ಇಡಲು ಬೆಳಿ, ಹಿತ್ತಾಳೆ, ತಾಮ್ರದ ಚೊಂಬನ್ನು ಬಲಸುವುದು ಶ್ರೇಷ್ಠ ಹೀಗಾಗಿ ಶಕ್ತಿಗನುಸಾರವಾಗಿ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯ ಚೊಂಬನ್ನು ಬಳಸುವುದು ಒಳ್ಳೆಯದು ಹೀಗೆ ಮಾಡಿದರೆ ಮನೆಗೆ ಒಳ್ಳೆಯದಾಗುತ್ತದೆ. ಮನೆಯ ಪೂರ್ವಜರು ಮೊದಲಿನಿಂದಲೂ ಮನೆಯಲ್ಲಿ ಯಾವ ರೀತಿಯ ಚೊಂಬನ್ನು ಕಳಸಕ್ಕೆ ಇಟ್ಟು ಸ್ಥಾಪನೆ ಮಾಡಿ ಪೂಜಿಸುತ್ತಿದ್ದರು ಅದೆ ರೀತಿಯ ಕಳಸ ಇಟ್ಟು ಪೂಜಿಸುವುದು ಉತ್ತಮ ಅವರ ಮಾರ್ಗದಲ್ಲಿ ನಡೆಯುವುದು ಮನೆಗೆ ಒಳ್ಳೆಯದು.

ಕಳಸ ಇಡುವಾಗ ಕೆಲವು ಲಕ್ಷ್ಮೀ ಕಳಸ ಇಡುತ್ತಾರೆ ಇನ್ನೂ ಕೆಲವರು ಮನೆ ದೇವರ ಕಳಸ ಇಡುತ್ತಾರೆ. ಕೆಲವರು ಕಾಯಿ ಕಳಸ, ಕೆಲವರು ಎಲೆ ಕಳಸ ಯಾವ ಕಳಸ ಇಟ್ಟರೂ ಅದರ ನಿಯಮಗಳನ್ನು ಪಾಲಿಸಲೇಬೇಕು ಒಂದು ವೇಳೆ ಲಕ್ಷ್ಮಿ ಕಳಸ ಇಟ್ಟರೆ ಕಳಸಕ್ಕೆ ಮಾಂಗಲ್ಯ ಹಾಕಲೇಬೇಕು ಮಾಂಗಲ್ಯ ಇಲ್ಲದೆ ಇದ್ದರೆ ಅರಿಶಿಣದ ಕೊಂಬನ್ನು ಕಟ್ಟಲೇಬೇಕು. ಕಳಸವನ್ನು ಯಾವುದೆ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ತಟ್ಟೆಯಲ್ಲಿ ಮೂರು ಅಳತೆ ಅಥವಾ ಹಿಡಿ ಇಲ್ಲವೆ ಐದು ಅಳತೆ ಅಥವಾ ಹಿಡಿ ಅಕ್ಕಿಯನ್ನು ಹಾಕಿ ಅದರ ಮೇಲೆ ತೆಂಗಿನಕಾಯಿಯನ್ನು ಇಡಬೇಕು ಕಳಸಕ್ಕೆ ಇಡುವ ತೆಂಗಿನ ಕಾಯಿ ಹಾಳಾಗದ ಒಳ್ಳೆಯ ತೆಂಗಿನಕಾಯಿಯನ್ನು ಆರಿಸಬೇಕು ಜೊತೆಗೆ ಜುಟ್ಟು ಇರುವ ತೆಂಗಿನ ಕಾಯಿಯನ್ನು ಆರಿಸಬೇಕು ಕಣ್ಣು ಕಾಣಿಸದ ತೆಂಗಿನಕಾಯಿಯನ್ನು ಇಡಬೇಕು.

Kalasa pooja

ಕಳಸಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಎಲೆಯನ್ನು ಇಡಬಹುದು ಆದರೆ ಎಲೆ ಹರಿದಿರಬಾರದು ತೂತಾಗಿರಬಾರದು ಎಲ್ಲಾ ಎಲೆಗಳು ಒಂದೆ ಅಳತೆಯಲ್ಲಿರಬೇಕು ಕುಂಕುಮ ಅರಿಶಿಣ ಹಾಕಿ ಉಂಗುರುದ ಬೆರಳಿನಿಂದ ಅಷ್ಟದಲದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು. ಕಳಸಕ್ಕೆ ತೆಗೆದುಕೊಳ್ಳುವ ಚೊಂಬು ಶುದ್ಧವಾಗಿರಬೇಕು ನಂತರ ಚೊಂಬಿಗೆ ಅರಿಶಿಣ, ಕುಂಕುಮ, ಗಂಧ ಹಚ್ಚಿ ಶುದ್ಧವಾದ ನೀರು ಹಾಕಿ ನೀರು ತೆಂಗಿನಕಾಯಿಗೆ ತಾಕುವಂತೆ ಇರಬೇಕು ಆದರೆ ಚೊಂಬಿನಿಂದ ಹೊರಗೆ ಚೆಲ್ಲಬಾರದು ನಂತರ ಅದಕ್ಕೆ ಒಂದು ಚಿಟಿಕೆ ಅರಿಶಿಣ ಕುಂಕುಮ ಹಾಕಿ ಸ್ವಲ್ಪ ಮಂತ್ರಾಕ್ಷತೆ ಹಾಕಿ ನಂತರ ಒಂದು ಹೂವು ಹಾಗೂ ಒಂದು ನಾಣ್ಯ ಯಾವುದಾದರೂ ಹಿತ್ತಾಳೆ, ಬೆಳ್ಳಿ ಅಥವಾ ದಿನನಿತ್ಯ ಬಳಸುವ ನಾಣ್ಯವಾದರೂ ಸರಿ ಆದರೆ ನಾಣ್ಯವನ್ನು ಹಾಕಲೇಬೇಕು ಅದು ಪ್ರಾಣದ ಪ್ರತೀಕ.

ಕೆಲವರು ಕವಡೆ, ಗೋಮತಿ ಚಕ್ರ, ಕಮಲದ ಬೀಜವನ್ನು ಹಾಕುತ್ತಾರೆ ಆದರೆ ಇವುಗಳನ್ನ ಹಾಕಲೇಬೇಕು ಎಂಬ ನಿಯಮವೇನು ಇಲ್ಲ ಹಬ್ಬ ಹರಿದಿನಗಳಲ್ಲಿ ಹಾಕಿದರೆ ಒಳ್ಳೆಯದು. ಯಾವುದೆ ಕಾರಣಕ್ಕೂ ಇಟ್ಟ ಕೆಳಸವನ್ನು ಮಂಗಳವಾರ ಶುಕ್ರವಾರ ಹುಣ್ಣಿಮೆ ಅಮಾವಾಸ್ಯೆಯ ದಿನ ಕದಲಿಸಬಾರದು ಕಳಸವನ್ನು ಕದಲಿಸುವಾಗ ಮೂರು ಸಾರಿ ಬಲಕ್ಕೆ ಸರಿಸಿ ತೆಗೆಯಬೇಕು. ಕಳಸವನ್ನು ಕದಲಿಸಿದ ನಂತರ ನೀರನ್ನು ತುಳಸಿ ಗಿಡಕ್ಕೆ ಅಥವಾ ತೆಂಗಿನ ಮರಕ್ಕೆ ಹಾಕಬೇಕು ಯಾವುದೆ ಕಾರಣಕ್ಕೂ ನೀರನ್ನು ತುಳಿಯುವ ಜಾಗದಲ್ಲಿ ಹಾಕಬಾರದು. ಕಳಸ ಇಡುವ ಹಿಂದಿನ ದಿನವೆ ಕಳಸ ಇರುವ ಜಾಗ ಸ್ವಚ್ಛ ಮಾಡಬೇಕು

ಕಳಸವನ್ನು ಮಂಗಳವಾರ ಶುಕ್ರವಾರ ಇಂತಹ ಒಳ್ಳೆಯ ದಿನಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಕಳಸಕ್ಕೆ ಸಂಬಂಧಿಸಿದಂತೆ ಬಹು ಮುಖ್ಯವಾದ ವಿಷಯವೆಂದರೆ ಕಳಸವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಪದೆ ಪದೆ ಮುಟ್ಟುವುದು ಸರಿಪಡಿಸುವುದನ್ನು ಮಾಡಲೇಬಾರದು. ಹೀಗೆ ಕಳಸವನ್ನು ಪ್ರತಿಷ್ಠಾಪನೆ ಮಾಡುವಾಗ ಮೇಲೆ ಹೇಳಿದ ಎಲ್ಲಾ ನಿಯಮಗಳನ್ನು ತಪ್ಪದೆ ಪಾಲಿಸುವುದರಿಂದ ಕಳಸ ಪ್ರತಿಷ್ಠಾಪಿಸಿದ ಉದ್ದೇಶ ಈಡೇರುತ್ತದೆ ಕೈಗೊಂಡ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *