ಜಮೀನಿಗೆ ಕಾಲುದಾರಿ ಮತ್ತು ಬಂಡೆ ದಾರಿ ಅಳತೆ ಬಹಳಷ್ಟು ಜನಕ್ಕೆ ಮತ್ತು ರೈತರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಜಮೀನಿಗೆ ಕಾಲು ದಾರಿ ಅಳತೆ, ಬಂಡೆ ದಾರಿ ಅಳತೆ ಮತ್ತು ಇವುಗಳ ನಿಯಮಗಳನ್ನು ತಿಳಿಸುತ್ತೇವೆ.

ರೈತರು ತಮ್ಮ ಜಮೀನಿಗೆ ಹೋಗಿ ಬರಬೇಕಾದರೆ ಮತ್ತೊಬ್ಬರ ಜಮೀನಿಗೆ ಹಾಯ್ದು ಹೋಗುವ ಸಂದರ್ಭ ಕಂಡುಬರುತ್ತದೆ. ಕುಟುಂಬಗಳು ಹೆಚ್ಚಾದಂತೆ ಜಮೀನಿನ ಕೊರತೆಯಿಂದ ಕಾಲುದಾರಿ ಮತ್ತು ಬಂಡಿದಾರಿ ಮೇಲೆ ರೈತರ ನಡುವೆ ಜಗಳ ಆಗುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ವಿಷಯಕ್ಕೆ ಒಂದು ಮಾರ್ಗವನ್ನು ಕಂಡುಹಿಡಿದಿದ್ದಾರೆ ಇಸ್ ಮೆಂಟ್ ಆಕ್ಟ್ ( Easement act ) ಜಾರಿಗೆ ತಂದಿದ್ದಾರೆ.

ಈ ಕಾಯ್ದೆ ಉದ್ದೇಶ ಇಷ್ಟೆ ಜನರು ಹೋಗಿ ಬರಲು ದಾರಿ ಇದ್ದೇ ಇದೆ ಮತ್ತು ಜಮೀನಿಗೆ ದಾರಿ ಪಡೆಯುವುದು ಅವರ ಹಕ್ಕು ಇರುತ್ತದೆ. ಸದರಿ ಟಿಪ್ಪಣಿ ಈಗಿನ ಸರ್ವೆ ಎಲ್ಲಿ ಆಧಾರವಾಗಿ ಕಂಡುಬಂದಿದೆ. ಪ್ರತಿ ಜಮೀನಿನ ಸರ್ವೆ ಮಾಡುವಾಗ ಅದು ಕಾಲು ದಾರಿ ಯಾಗಿರಬಹುದು ಅಥವಾ ಬಂಡಿ ದಾರಿ ಯಾಗಿರಬಹುದು ಅದನ್ನು ಸ್ಪಷ್ಟವಾಗಿ ದಾಖಲಿಸುವುದು ಅದನ್ನು ಖರಾಬ್ 2 ಎಂದು ಕರೆಯುತ್ತಾರೆ. ಖರಾಬ್ 2 ರಲ್ಲಿ ಎರಡು ರೀತಿಯ ವರ್ಗಗಳು ಇರುತ್ತವೆ ಆದರೆ ನಾವು ಈ ಲೇಖನದಲ್ಲಿ ಬ – ಖರಾಬ್ ಬಗ್ಗೆ ಮಾಹಿತಿ ನೀಡುತ್ತೇವೆ.

ಬ – ಖರಾಬ್ ನಲ್ಲಿ ಕಾಲುದಾರಿ ಮತ್ತು ಬಂಡೆ ದಾರಿ ಬರುತ್ತದೆ. ಕರ್ನಾಟಕ ಭೂ ಕಂದಾಯ ಕಾಯಿದೆ 1968 ಕರ್ನಾಟಕ ಭೂ ಕಂದಾಯ ಕಾಯ್ದೆಯ ಪ್ರಕಾರ ಕಾಲುದಾರಿ ವಿಸ್ತೀರ್ಣ ಅಗಲ 8 pe (Feet) 2 2023 (inche) ಇರಬೇಕು. ಈಗ ಬಂಡಿದಾರಿ ಬಗ್ಗೆ ಹೇಳುವುದಾದರೆ 20 ಫೀಟ್ (Feet) ಇರಬಹುದು. ಇದರ ಉದ್ದ ನಿಮ್ಮ ಸರ್ವೇ ನಂಬರ್ ಮುಗಿಯುವವರೆಗೂ ಇರಬಹುದು ಎಂದು ನೀವು ತಿಳಿದುಕೊಳ್ಳಬೇಕು. ಕಾಲು ಮತ್ತು ಬಂಡಿ ದಾರಿ ಮುಖ್ಯ ಮಾಹಿತಿಗಳು: ಸಾರ್ವಜನಿಕ ಸ್ವತ್ತು ಆಗಿದ್ದರಿಂದ ಜನರು ಇದನ್ನು ಉಪಯೋಗಿಸುವುದು.

ಕರಾಬಿನ ವಿವರಣೆ ಪಹಣಿಯ ಮೂರನೇ ಕಾಲಂನಲ್ಲಿ ಲಭ್ಯವಿದೆ. ಕಾಲು ಮತ್ತು ಬಂಡೆ ದಾರಿಯ ಉದ್ದ ಅಗಲ ಕರಾಬಿನ ಎಕ್ಸಾಕ್ಸ್ (extract) ಪ್ರತಿನಲ್ಲಿ ನೋಡಬಹುದು. ನಕ್ಷೆಯಲ್ಲಿ ದಾರಿ ಇಲ್ಲದಿದ್ದಾಗ ನೀವು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು. ನಕ್ಷೆಯಲ್ಲಿ ದಾರಿ ಇಲ್ಲದಿದ್ದಾಗ ಇಸ್ ಮೆಂಟ್ ಆಕ್ಟ್ ಪ್ರಕಾರ ನಿಮ್ಮ ಎಲ್ಲಾ ದಾಖಲೆಗಳನ್ನು ಡಿ ಡಿ ಎಲ್ ಆರ್ (DDLR) ಅವರಿಗೆ ಸಲ್ಲಿಸಿ ಕಾಲು ಮತ್ತು ಬಂಡೆ ದಾರಿ ಪಡೆಯಬಹುದು. ಸಿವಿಲ್ ನ್ಯಾಯಾಲಯದಲ್ಲಿ ಇಸ್ ಮೆಂಟ್ ಆಕ್ಟ್ ಮೂಲಕ ನೀವು ಕಾಲು ಮತ್ತು ಬಂಡಿದಾರಿಗೆ ಅರ್ಜಿ ಸಲ್ಲಿಸಬಹುದು. ಖರಾಬು ಎಂದರೇನು ಉಳುಮೆಗೆ ಯೋಗ್ಯವಲ್ಲದಂತಹ ಮತ್ತು ವ್ಯವಸಾಯ ಮಾಡಲು ಅನರ್ಹವಾಗಿರುವ ಜಮೀನನ್ನು ಖರಾಬು ಜಮೀನು ಎಂದು ಕರೆಯುತ್ತಾರೆ.

ಇಂತಹ ಜಮೀನು ಊರ ಹೊರಗಡೆ, ಕೆರೆ ಕಟ್ಟೆಗಳ ಪಕ್ಕದಲ್ಲಿ ಜಮೀನು ನೋಡಿರುತ್ತೀರಿ. ಇಂತಹ ಖರಾಬು ಜಮೀನಿನಲ್ಲಿಯೂ ಎರಡು ವಿಧವಿದೆ. ಒಂದನೇಯದ್ದು ಅ ಖರಾಬು ಎರಡನೇಯದ್ದು ಬ ಖರಾಬು ಜಮೀನು. ಬ ಖರಾಬು ಎಂದರೇನು ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿರುವ ಜಮೀನನ್ನು ಬ ಖರಾಬು ಜಮೀನು ಎಂದು ಕರೆಯುತ್ತಾರೆ. ಉದಹರಣೆಗೆ ರಸ್ತೆ, ಬಂಡಿದಾರಿ, ಕಾಲುದಾರಿ, ಹಳ್ಳ, ಸ್ಮಶಾನ ಭೂಮಿ ಹೀಗೆ ಅನೇಕ ಜಮೀನುಗಳು ಬರುತ್ತವೆ. ಬ ಖರಾಬು ಜಮೀನು ಸರ್ಕಾರದ ಅಡಿಯಲ್ಲಿ ಬರುತ್ತದೆ. ಜಮೀನುಗಳಲ್ಲಿ ಪ್ರಕೃತ್ತಿದತ್ತವಾಗಿ ಹರಿಯುವ ಹಳ್ಳ ಕೊಳ್ಳ, ರಾಜಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ ಬಿ ಖರಾಬು ಭೂಮಿ ಎನಿಸಿದೆ.

ಜತೆಗೆ ಉಳುಮೆ ಮಾಡಲಾಗದ ಪಾಳು ಭೂಮಿ ಕೂಡ ಈ ವರ್ಗಕ್ಕೆ ಸೇರಿದೆ. ಇಂತಹ ಭೂಮಿ ಆಯಾ ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ ಕೆಲ ಗುಂಟೆಗಳಷ್ಟು ಪ್ರಮಾಣದಲ್ಲಿ ಇರುತ್ತವೆ. ಇವುಗಳ ಸ್ವರೂಪ ಬದಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ವೈಯಕ್ತಿಕ ಅಭಿಪ್ರಾಯ ವಾಗಿರುತ್ತದೆ ಯಾವುದೇ ವ್ಯಕ್ತಿ ಅಥವಾ ನಮಗೆ ಸಂಬಂಧಿತ ವಾಗಿರುವುದಿಲ್ಲ ನೀವು ಸರ್ವೆ ಕಚೇರಿಗೆ ಹೋಗಿ ಕಾಲುದಾರಿ ಮತ್ತು ಬಂಡಿದಾರಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!