ಭವಿಷ್ಯ ಹೇಳುವುದರಲ್ಲಿ, ವ್ಯಕ್ತಿತ್ವ ಹೇಳುವುದರಲ್ಲಿಯೂ ಹಲವು ಪ್ರಕಾರಗಳಿವೆ. ಜಾತಕ ನೋಡಿ ಹೇಳುವುದು, ಸಂಖ್ಯೆಯ ಆಧಾರದ ಮೇಲೆ ಹೇಳುವುದು, ಹಸ್ತ ನೋಡಿ ಹೇಳುವುದು ಹೀಗೆ ತುಂಬಾ ವಿಧಾನಗಳಿವೆ. ಅದರಲ್ಲಿ ಒಂದು ಹೆಸರಿನ ಮೊದಲ ಅಕ್ಷರದಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಹೇಳುವುದು.

ಇಲ್ಲಿ K ಅಕ್ಷರದಿಂದ ಶುರುವಾದ ಹೆಸರಿನವರ ವ್ಯಕ್ತಿತ್ವದ ಪರಿಚಯ ಮಾಡಿಕೊಡಲಾಗಿದೆ. ಹೆಸರಿನ ಮೊದಲ ಅಕ್ಷರ K ಉಳ್ಳವರು ದೃಢವಾದ ಮನಸ್ಸುಳ್ಳವರು ಆಗಿರುತ್ತಾರೆ. ಕಷ್ಟವಾದರೂ ಗುರಿಯನ್ನು ಸಾಧಿಸುವ ಛಲ ಹೊಂದಿರುತ್ತಾರೆ. ಕೋಪ ಮುಗಿನ ತುದಿಯಲ್ಲೆ ವಾಸವಾಗಿರುತ್ತದೆ.. ನಿಷ್ಠುರವಾದ ನೇರ ಮಾತುಗಳನ್ನು ಆಡುವವರಾಗಿರುತ್ತಾರೆ. ಯಾರನ್ನು ಸುಲಭಕ್ಕೆ ನಂಬದ ವ್ಯಕ್ತಿತ್ವ. ನಂಬಿದ ಮೇಲೆ ಎಲ್ಲಾ ವಿಷಯವನ್ನು ಹಂಚಿಕೊಳ್ಳುವ ಮನಸ್ತತ್ವ ನಿಮ್ಮದಾಗಿರುತ್ತದೆ.

ಮುಂದಿನ ಪರಿಣಾಮಗಳ ಮೇಲೆ ಯೋಚಿಸದೆ, ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡು ಮಾತನಾಡುತ್ತಾರೆ. ಕೋಪಿಷ್ಟರು ಎಂದೆ ಕರೆಯಲ್ಪಡುವ ಇವರು ಬೇಗ ಕೋಪಗೊಳ್ಳುವವರಾಗಿರುತ್ತಾರೆ. ರಿಸ್ಕ್ ಅನ್ನು ಹೆಚ್ಚು ಇಷ್ಟ ಪಡುವ ಇವರು ಬಹು ಬೇಗ ಉನ್ನತ ಮಟ್ಟಕ್ಕೆ ಏರುತ್ತಾರೆ. ಹಣಕಾಸು ವಲಯವನ್ನು ಉತ್ತಮವಾಗಿ ನಿಭಾಯಿಸುವ ಇವರು ಖ್ಯಾತಿ ಹಾಗೂ ಪ್ರತಿಷ್ಠೆಯ ವಿಷಯದಲ್ಲಿ ಅಷ್ಟಕಷ್ಟೆ ಯಾಕೆಂದರೆ ಇವರು ಅಂತರ್ಮುಖಿಯಾಗಿದ್ದು ನಾಲ್ಕು ಜನರಲ್ಲಿ ಬೆರೆಯಲು ಮನಸ್ಸು ಮಾಡುವುದಿಲ್ಲ. K ಅಕ್ಷರದಿಂದ ಶುರುವಾಗುವ ಹೆಸರುಳ್ಳವರು ಜೀವನದಲ್ಲಿ ಹೆಚ್ಚು ನೋವು ಹಾಗೂ ಕಷ್ಟಗಳನ್ನು ಅನುಭವಿಸುತ್ತಾರೆ. ಆದರೂ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಒಂದೊಂದಾಗಿ ಏರುವ ಸ್ವಭಾವ ಇವರದು. ಅದೃಷ್ಟವು ಹಾಗೆಯೆ ಕೂಡಿ ಬರುತ್ತದೆ. ಪ್ರೀತಿಯನ್ನು ಹಂಚುವ ಇವರು ತಮ್ಮನ್ನು ಪ್ರೀತಿಸಿವವರನ್ನು ಅತಿ ಹೆಚ್ಚು ಪ್ರೀತಿಸುತ್ತಾರೆ.

ಇವರು ಬೇರೆಯವರಿಂದ ಪ್ರೇಮ, ಅಂತಃಕರಣ, ಅನುಕಂಪ ಹೊಂದುತ್ತಾರೆ ಹೊರತು ಬೇರೆಯವರಿಗೆ ನೀಡಲು ಬಯಸುವುದಿಲ್ಲ. ಬುದ್ದಿಯ ಮಾತನ್ನು ಕೇಳುವುದೆ ಹೆಚ್ಚು ಮನಸ್ಸಿನ ಮಾತನ್ನು ನಿರ್ಲಕ್ಷ್ಯ ಮಾಡುತ್ತಾರೆ. ಈ ತರಹದ ವ್ಯಕ್ತಿತ್ವ ಹೊಂದಿರುವುದರಿಂದ ಕೆಲವೊಮ್ಮೆ ಪ್ರೀತಿ ಕೈ ತಪ್ಪಿ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇವರ ಜೀವನದಲ್ಲಿ ಇವರನ್ನು ಪ್ರೀತಿಸುವ ಜನರು ಹೆಚ್ಚಾಗಿರುತ್ತಾರೆ ಆದರೆ ಇವರು ಕೆಲವು ಜನರನ್ನು ಮಾತ್ರ ಪ್ರೀತಿಸುತ್ತಾರೆ. ಇವರ ಸಂಗಾತಿಯಾಗುವವರು ಇವರ ಪ್ರತಿ ಮಾತಿಗೆ ಒಪ್ಪಿಕೊಂಡು ನಡೆಯುವವರು ಆಗಿರುತ್ತಾರೆ. ಇವರನ್ನು ಅಮಿತವಾಗಿ ಪ್ರೀತಿಸುತ್ತಾರೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ಕೆಲಸ ಸಾಧಿಸುವ ಇವರಿಗೆ ಪರಿಸ್ಥಿತಿ ಸಂಭಾಳಿಸುವುದು ತಿಳಿದಿರುತ್ತದೆ. ಒಳ್ಳೆಯ ಹೆಸರನ್ನು ಸಹ ಗಳಿಸಿಕೊಳ್ಳುತ್ತಾರೆ. ಜೀವನದಲ್ಲಿ ಸುಖ ದುಃಖಗಳು ಬರುತ್ತಲೆ ಇರುತ್ತವೆ. ಏಳು ಬೀಳುಗಳನ್ನು ಕಾಣುತ್ತಾರೆ. ಇವರು ಬಯಸುವುದು ಕೆಲವು ಜೀವನದಲ್ಲಿ ನಡೆಯುವುದಿಲ್ಲ. ಆದರೂ ಯಾವುದು ಎದುರಾದರೂ ಒಪ್ಪಿಕೊಂಡು ನಡೆಯುವ ಮನಸ್ಥಿತಿ ಹೊಂದಿರುತ್ತಾರೆ. K ಅಕ್ಷರದಿಂದ ಹೆಸರು ಇರುವ ವ್ಯಕ್ತಿಗಳ ವ್ಯಕ್ತಿತ್ವ ಈ ತೆರೆನಾಗಿರುತ್ತದೆ.

By

Leave a Reply

Your email address will not be published. Required fields are marked *