ನಿಜಕ್ಕೂ ಈ ಸ್ಟೋರಿ ನೋಡಿದ್ರೆ ಮನಮಿಡಿಯುತ್ತದೆ, ಕೆಲಸಕ್ಕೆ ಬಾರದ ಪೋಸ್ಟ್ಗಳಿಗೆ ಲೈಕ್ ಕೊಡುವುದರ ಜೊತೆಗೆ ಶೇರ್ ಮಾಡ್ತೀರ, ಆದ್ರೆ ಇಂತಹ ಸುದ್ದಿಗಳನ್ನು ಶೇರ್ ಮಾಡೋದ್ರಲ್ಲಿ ಯಾವುದೇ ತಪ್ಪು ಇಲ್ಲ ಅನಿಸುತ್ತೆ, ಯಾಕೆಂದರೆ ತನ್ನ ತಂದೆಯನ್ನು 1200 ಕಿ.ಮೀ ಅಷ್ಟು ದೂರದ ತಮ್ಮ ಹುಟ್ಟೂರಿಗೆ ಸೈಕಲ್ನಲ್ಲಿ ಕೂರಿಸಿ ಕರೆದುಕೊಂಡು ಹೋದ ಈ ಹೆಣ್ಣು ಮಗಳಿಗೆ ನಿಜಕ್ಕೂ ಒಂದು ಸಲ್ಯೂಟ್ ಅನ್ನಲೇಬೇಕು.
ಯಾಕೆಂದರೆ ದೇಶದಲ್ಲಿ ಸದ್ಯಕ್ಕೆ ಕೊರೋನಾ ಪ್ರಭಾವದಿಂದ ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲದೆ ಹಣಕಾಸು ಇಲ್ಲದೆ ಊಟವಿಲ್ಲದೆ ಜನರು ಪರದಾಡುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಈ ಹೆಣ್ಣು ಮಗಳು ತಾನು ಮಾಡಿದಂತ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಈಕೆಯ ಹೆಸರು ಜ್ಯೋತಿ ಕುಮಾರಿ ಎಂಬುದಾಗಿ ಇವರು ತನ್ನ ತಂದೆ ಬದುಕು ಕಟ್ಟಿಕೊಳ್ಳಲು ದೆಹಲಿಯ ಗುರುಗ್ರಾಮಕ್ಕೆ ಬಂದಿರ್ತಾರೆ. ಆದ್ರೆ ಈ ಲಾಕ್ಡೌನ್ ಆದ ವೇಳೆ, ರಸ್ತೆ ಅಪಘಾತಕ್ಕೀಡಾಗಿ ದೆಹಲಿಯಲ್ಲಿಯೇ ಸಿಕ್ಕಿಹಾಕಿಕೊಳ್ತಾರೆ. ಬಾಡಿಗೆ ಕಟ್ಟೋದಿಕ್ಕೆ ಹಣವಿಲ್ಲದ ಕಾರಣ ಮನೆಯ ಮಾಲೀಕರು ಮನೆಯಿಂದ ಹೊರಹಾಕ್ತಾರೆ. ಬದುಕು ಅಕ್ಷರಶಃ ಬೀದಿಗೆ ಬಂದು ಬೀಳುತ್ತೆ.
ಆದ್ದರಿಂದ ತನ್ನ ಹುಟ್ಟೂರಿಗೆ ಹೋಗಲು ತಂದೆಯ ನೆರವಿಗೆ ಬರುತ್ತಾಳೆ ಈ ಹೆಣ್ಣು ಮಗಳು, ಸಾಮಾನ್ಯವಾಗಿ ಈ ರೀತಿಯ ಕೆಲಸಕ್ಕೆ ಹೆಣ್ಣು ಮಕ್ಕಳು ಅಷ್ಟೊಂದು ಸುಲಭವಾಗಿ ಮುಂದೆ ಬರೋದಿಲ್ಲ ಆದ್ರೆ ಈಕೆಯ ಧೈರ್ಯ ಸಾಹಸಕ್ಕೆ ಮೆಚ್ಚಲೇಬೇಕು ಅಲ್ಲವೇ? ೭ ದಿನದಲ್ಲಿ ೧೨೦೦ ಕಿಮಿ ನಷ್ಟು ದೂರ ಕ್ರಮಿಸಿ ತಮ್ಮ ಹುಟ್ಟೂರು ತಲುಪಿದ್ದಾರೆ, ರಸ್ತೆಯ ಉದ್ದಗಲಕು ಜನರ ಮಾನವೀಯತೆ ಮೇರೆಗೆ ಊಟ ನೀರು ಸಿಕ್ಕಿದರಿಂದ ಸುರಕ್ಷಿತವಾಗಿ ತಲುಪಿದ್ದಾರೆ. ಇನ್ನು ಇದರ ಕುರಿತು ಇವಾಂಕ ಟ್ರಂಪ್ ರ ಒಂದು ಟ್ವೀಟ್ ಈ ವಿಚಾರ ಜಗತ್ತಿಗೆ ತಿಳಿಯುವಂತೆ ಮಾಡಿದೆ. ಒಟ್ಟಾರೆ ಈಕೆ ಪ್ರತಿಯೊಬ್ಬರಿಗೂ ಮಾದರಿಯಂತೂ ನಿಜ.