ಕೆಲವೊಮ್ಮೆ ನಮ್ಮ ದೇಹದ ಬೇರೆ ಬೇರೆ ಭಾಗಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಅದನ್ನು ಮರೆಮಾಚಲು ನಾವು ಕೆಲವು ಪೆನ್ ಕಿಲ್ಲರ್ ಗಳನ್ನೂ ಬಳಸುತ್ತೇವೆ ಆದರೆ ಅವು ಆ ಕ್ಷಣಕ್ಕೆ ಪರಿಹಾರ ನೀಡಿದರು ಕೆಲವೊಮ್ಮೆ ಅವುಗಳಿಂದ ಅಡ್ಡ ಪರಿಣಾಮಗಳುಂಟಾಗುತ್ತದೆ. ನಾವು ದೇಹದ ಬೇರೆ ಬೇರೆ ಭಾಗಗಳಲ್ಲಿ ಉಂಟಾಗುವ ಸೊಂಟನೋವು ಮಂಡಿನೋವು ಈ ರೀತಿಯ ನೋವುಗಳನ್ನು ಸರಳವಾಗಿ ನೈಸರ್ಗಿಕವಾಗಿ ಹೇಗೆ ನಿವಾರಣೆ ಮಾಡುವುದು ಎಂಬುದನ್ನು ಇಂದು ತಿಳಿದುಕೊಳ್ಳೋಣ
ಲವಂಗ ಹಲ್ಲು ನೋವನ್ನು ಕಡಿಮೆ ಮಾಡಲು ಬಹಳ ಉತ್ತಮವಾದದ್ದು ಇದನ್ನು ಬಹಳ ಹಿಂದಿನಿಂದಲೂ ಬಳಸುತ್ತಿದ್ದರು ಲವಂಗದ ಎಣ್ಣೆಯನ್ನು ಹಲ್ಲು ನೋವಿರುವ ಜಾಗಕ್ಕೆ ಬಿಡುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ
ಜೇಷ್ಠ ಮದ್ದು ಇದು ಉತ್ತಮ ನೋವು ನಿವಾರಕ ಹೊಟ್ಟೆ ನೋವನ್ನು ನಿವಾರಿಸುವುದಕ್ಕೆ ಜೇಷ್ಠ ಮದ್ದು ತುಂಬಾ ಉಪಯುಕ್ತ ವಾಗಿದೆ ಕೆಲವೊಮ್ಮೆ ಅಸಿಡಿಟಿಯಿಂದ ಹೊಟ್ಟೆನೋವು ಬರುತ್ತದೆ ಕೆಲವೊಮ್ಮೆ ಅಲ್ಸರ್ ನಿಂದಾಗಿ ಹೊಟ್ಟೆನೋವು ಬರುತ್ತದೆ ಇದಕ್ಕೆ ಜೇಷ್ಠ ಮದ್ದಿನ ಕ್ಷೀರ ಪಾಕವನ್ನು ತೆಗೆದುಕೊಳ್ಳಬೇಕು.
ಜೇಷ್ಠ ಮದ್ದಿನ ಕ್ಷೀರ ಪಾಕ ಮಾಡಿಕೊಳ್ಳುವ ವಿಧಾನ ಮೂರು ಗ್ರಾಂ ಜೇಷ್ಠ ಮದ್ದಿನ ಚೂರ್ಣವನ್ನು ಮತ್ತು ನೂರು ಎಂ ಎಲ್ ನೀರು ಮತ್ತು ಇಪ್ಪತ್ತೈದು ಎಂ ಎಲ್ ಹಾಲನ್ನು ತೆಗೆದುಕೊಂಡು ಈ ಮೂರನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದು ಇಪ್ಪತ್ತೈದು ಎಂ ಎಲ್ ಆಗುವ ವರೆಗೆ ಕುದಿಸಬೇಕು ಆಗ ಅದರಲ್ಲಿರುವ ನೀರಿನ ಅಂಶ ಹೋಗಿ ಕೇವಲ ಔಷಧೀಯ ಅಂಶ ಉಳಿದುಕೊಳ್ಳುತ್ತದೆ ನಂತರ ಅದನ್ನು ಸೋಸಿ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
ಒಮೆಗಾ ತ್ರಿ. ಇದನ್ನು ಬಹಳ ಹಿಂದಿನಿಂದಲೂ ನೋವು ನಿವಾರಕವಾಗಿ ಬಳಸುತ್ತಿದ್ದರು ಇದು ಮಂಡಿ ನೋವು ಮತ್ತು ಸಂಧಿವಾತ ನಿವಾರಣೆಗೆ ಸಹಕಾರಿ ಇದನ್ನು ಬೆಳಿಗ್ಗೆ ಮತ್ತು ರಾತ್ರಿ ಆಹಾರದ ನಂತರ ತೆಗೆದು ಕೊಳ್ಳುವುದರಿಂದ ಇದು ನೈಸರ್ಗಿಕನೋವು ನಿವಾರಕವಾಗಿ ಕೆಲಸಮಾಡುತ್ತದೆ.
ಶುಂಠಿ. ಇದು ಸ್ನಾಯು ನೋವು ಹೊಟ್ಟೆ ನೋವು ಎದೆ ಕೀಲು ಉರಿಯೂತ ಮತ್ತು ಇತರೆ ಕೆಲವು ನೋವುಗಳನ್ನು ನಿವಾರಿಸುವ ಗುಣವನ್ನು ಶುಂಠಿ ಹೊಂದಿದೆ ಶುಂಠಿ ಚಹಾ ವನ್ನು ಕುಡಿಯುವುದರಿಂದ ಮೈಗ್ರೇನ್ ಗೆ ತ್ವರಿತ ಪರಿಹಾರ ಸಿಗುತ್ತದೆ ಮತ್ತು ಶುಂಠಿಯನ್ನು ಅಗಿಯುವುದರಿಂದ ಅನಿಲವನ್ನು ನಿವಾರಿಸಬಹುದು ಎಂದು ಅಧ್ಯಯನಗಳು ಹೇಳುತ್ತವೆ.
ಬೆಳ್ಳುಳ್ಳಿ ಇದು ಬ್ಯಾಕ್ಟೀರಿಯಾ ವಿರೋಧಿ ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ ಮತ್ತು ಕಿವಿ ಸೋಂಕನ್ನು ಗುಣಪಡಿಸುತ್ತದೆ ಕರುಳಿನ ಪರಾವಲಂಬಿಗಳು ಮತ್ತು ಸಂಧಿವಾತದ ನೋವಿಗೆ ಚಿಕಿತ್ಸೆ ನೀಡುತ್ತದೆ. ಇದನ್ನು ಕಚ್ಚಾ ಸೇವಿಸಿದಾಗ ಬೆಳ್ಳುಳ್ಳಿ ಗರಿಷ್ಠ ಪ್ರಯೋಜನ ನೀಡುತ್ತದೆ ಹಲ್ಲು ನೋವು ಗುಣಪಡಿಸಲು ಬೆಳ್ಳುಳ್ಳಿಯನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಅನ್ವಯಿಸಿ ನಿಮ್ಮ ಕೀಲುಗಳು ಮತ್ತು ಸ್ನಾಯುಗಳು ನೋಯುತ್ತಿದ್ದರೆ ಬಿಸಿ ಬೆಳ್ಳುಳ್ಳಿ ಎಣ್ಣೆಯನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ ನೋವು ಕಡಿಮೆಯಾಗುತ್ತದೆ.
ತೆಂಗಿನೆಣ್ಣೆ ನಿಮಗೆ ಕೈ ಕಾಲು ಮಂಡಿಗಳಲ್ಲಿ ನೋವು ಕಾಣಿಸಿಕೊಂಡರೆ ಒಂದು ಕಪ್ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಹಚ್ಚುವುದರಿಂದ ಅಲ್ಲಿ ರಕ್ತ ಸಂಚಲನವಾಗಿ ನೋವು ಕಡಿಮೆಯಾಗುತ್ತದೆ.
ಯೋಗ ಇದು ದೈಹಿಕ ಧ್ಯಾನಅಭ್ಯಾಸ ಅದು ನೋವನ್ನು ನೈಸರ್ಗಿಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಇದು ಉಸಿರಾಟದ ವ್ಯಾಯಾಮ ಸ್ವ ಆರೈಕೆ ಮತ್ತು ವಿಶ್ರಾಂತಿ ವಿಧಾನಗಳನ್ನು ಒಳಗೊಂಡಿದೆ ಆದ್ದರಿಂದ ಯೋಗ ಮಾಡುವುದರಿಂದ ಒತ್ತಡ ಅಥವಾ ಆತಂಕಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸಬಹುದು.
ಈ ರೀತಿಯಾದ ನೈಸರ್ಗಿಕ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಮತ್ತು ಇವುಗಳು ಮನೆಯಲ್ಲಿಯೇ ಇರುವ ವಸ್ತುಗಳಾದ್ದರಿಂದ ನೋವು ಕಾಣಿಸಿಕೊಂಡಾಗ ಸುಲಭವಾಗಿ ಮತ್ತು ಬೇಗನೆ ಇವುಗಳನ್ನು ಬಳಸಿ ನೊವುಗಳಿಂದ ಮುಕ್ತಿ ಪಡೆಯಬಹುದಾಗಿದೆ.