ಬಹು ಮುಖ್ಯವಾಗಿ ಬಾಳೆಹಣ್ಣನ್ನು ಪೂರ್ಣ ಫಲ ಅಥವಾ ದೈವ ಫಲ ಎಂದೇ ಕರೆಯಲಾಗುತ್ತದೆ, ಯಾಕಂದ್ರೆ ನಾವು ಯಾವುದೇ ದೇವರುಗಳ ಪೂಜೆಗೆ ಅಥವಾ ಯಾವುದೇ ಶುಭ ಕಾರ್ಯಗಳ ಪೂಜೆಯಲ್ಲಿ ತೆಂಗಿನ ಕಾಯಿಯ ಜೊತೆಗೆ ಬಾಳೆಹಣ್ಣನ್ನು ಹೊರತು ಮತ್ಯಾವ ಹಣ್ಣನ್ನು ಕೂಡಾ ಬಳಸುವುದಿಲ್ಲ. ಪುರಾಣಗಳ ಪ್ರಕಾರ ಬಾಳೆಹಣ್ಣಿಗೆ ವಿಶೇಷ ಸ್ಥಾನಮಾನವಿದೆ ಯಾಕಂದ್ರೆ ಬಾಳೆ ಹಣ್ಣು ಒಂದು ದೈವ ಸ್ವರೂಪವಾಗಿದೆ, ಅಲ್ಲದೇ ಅದು ದೇವಲೋಕದ ರಂಬೆಯ ಮತ್ತೊಂದು ಸ್ವರೂಪವಾಗಿದೆ.
ಒಮ್ಮೆ ರಂಬೆಯು ತಾನೇ ಅತೀ ಸೌಂದರ್ಯವತಿ ಎಂದು ವಿಷ್ಣುವಿನ ಮುಂದೆ ಬಹಳ ಜಂಭದಿಂದ ಮಾತನಾಡುವುದನ್ನು ಕಂಡ ವಿಷ್ಣುವು ಅವಳಿಗೆ ನೀನು ಭೂಲೋಕದಲ್ಲಿ ಬಾಳೆ ಹಣ್ಣಿನ ಗಿಡವಾಗಿ ಹುಟ್ಟು ಎಂದು ಅವಳಿಗೆ ಶಾಪ ನೀಡುತ್ತಾನೆ. ಈ ಸಂದರ್ಭದಲ್ಲಿ ರಂಬೆಯು ವಿಷ್ಣುವನ್ನು ಮೊರೆ ಹೋದಾಗ ವಿಷ್ಣುವು ದೇವರ ಪೂಜೆಯಲ್ಲಿ ಬಾಳೆಹಣ್ಣನ್ನು ಮೊದಲು ಪೂರ್ಣ ಫಲವಾಗಿ ಬಳಸುವಂತೆ ವರವನ್ನು ನೀಡುತ್ತಾನೆಂಬುದನ್ನು ಸ್ಪಷ್ಟವಾಗಿ ಉಲ್ಲೇಖ ಪಡಿಸಿದ್ದಾರೆ.
ಬಾಳೆ ಹಣ್ಣಿಗೆ ಪುರಾಣಗಳಲ್ಲಿ ಬಹಳ ಹಿಂದಿನಿಂದಲೂ ಮತ್ತು ಇಂದಿಗೂ ಕೂಡಾ ಅಷ್ಟೇ ಮಹತ್ವವಿದೆ ಆದರೆ ನಾವು ಜೋಡಿ ಬಾಳೆ ಹಣ್ಣನ್ನು ತಿನ್ನುವುದಿಲ್ಲ, ಇದು ಬಹಳ ಹಿಂದಿನಿಂದಲೂ ಬಂದಂತಹ ರೂಡಿ ನಮ್ಮ ಹಿರಿಯರು ಹೇಳಿರುವಂತಹ ಮಾತು ನಾವು ಯಾವ ಸಂದರ್ಭದಲ್ಲೇ ಆಗಲಿ ಬಾಳೆ ಹಣ್ಣನ್ನು ತಿನ್ನುವ ಸಂದರ್ಭದಲ್ಲಿ ಆ ಬಾಳೆ ಗೊನೆಯಲ್ಲಿ ಜೋಡಿ ಬಾಳೆಹಣ್ಣು ಏನಾದರೂ ಕಂಡು ಬಂದರೆ ಹಿರಿಯರು ಅದನ್ನು ತಿಂದು ನಮಗೆ ಬೇರೆಯ ಹಣ್ಣು ಕೊಡುತ್ತಾರೆ.
ಮದುವೆಯಾಗದವರಿಗೆ ಈ ರೀತಿಯ ಜೋಡಿ ಬಾಳೆ ಹಣ್ಣುಗಳನ್ನು ತಿನ್ನಲು ಬಿಡುವುದಿಲ್ಲ, ಯಾಕಂದ್ರೆ ನಮ್ಮ ಹಿರಿಯರ ಪ್ರಾಕಾರ ಮದುವೆಯಾಗದವರು ಈ ರೀತಿಯ ಜೋಡಿ ಬಾಳೆ ಹಣ್ಣುಗಳನ್ನು ತಿನ್ನುವುದರಿಂದ ಮದುವೆಯ ನಂತರದಲ್ಲಿ ಅವರಿಗೆ ಜೋಡಿ ಮಕ್ಕಳು ಅಂದರೆ ಅವಳಿ ಜವಳಿ ಮಕ್ಕಳು ಜನಿಸುತ್ತಾರೆಂಬುದು ಅವರ ನಂಬಿಕೆ ಅಷ್ಟೇ ಹೊರತು ಜೋಡಿ ಬಾಳೆ ಹಣ್ಣನ್ನು ತಿನ್ನುವುದರಿಂದ ಮತ್ಯಾವ ಹಾನಿಕಾರಕ ಸಮಸ್ಯೆಗಳು ಜರುಗಲಾರವು.