ನಮ್ಮ ಸುತ್ತ ಮುತ್ತ ನಮಗೆ ತಿಳಿದಿರುವ ಹಾಗು ತಿಳಿಯದಿರುವ ಅನೇಕ ವಿಚಾರಗಳು ಇವೆ.ಎಲ್ಲಾ ವಿಷಯಗಳ ಕುರಿತಾದ ಜ್ಞಾನ ಹೊಂದಿರುವುದು ಇಂದಿನ ದಿನಮಾನದಲ್ಲಿ ತುಂಬಾ ಮುಖ್ಯವಾಗಿದೆ.ನಾವಿಂದು ನಿಮಗೆ ಕೆಲವು ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೊದಲನೇಯದಾಗಿ ಭಾರತ ದೇಶದಲ್ಲಿ ಅತಿ ಹೆಚ್ಚು ಬಂಗಾರ ಉತ್ಪಾದಿಸುವ ರಾಜ್ಯ ಯಾವುದು ಎಂದರೇನು ಅದು ನಮ್ಮ ಕರ್ನಾಟಕ ರಾಜ್ಯವಾಗಿದೆ. ಎರಡನೆಯದಾಗಿ ಯಾರಾದರೂ ನಿಮ್ಮನ್ನು ಹತ್ತು ಮಿಲಿಯನ್ ಎಂದರೆ ಎಷ್ಟು ಎಂದು ಕೇಳಿದರೆ ಒಂದು ಕೋಟಿ ಎಂದು ಹೇಳಬೇಕು.
ಮೂರನೆಯದಾಗಿ ರಷ್ಯಾ ದೇಶದ ಕರೆನ್ಸಿ ಯಾವುದು ಎಂದರೆ ರೂಬಲ್ ನಾಲ್ಕನೆಯದಾಗಿ ಗುಜರಾತ್ ರಾಜ್ಯದ ರಾಜ್ಯಧಾನಿ ಯಾವುದು ಎಂದರೆ ಗಾಂಧಿನಗರ. ಐದನೆಯದಾಗಿ ಬಾಸ್ಕೆಟ್ ಬಾಲ್ ಟೀಮಿನಲ್ಲಿ ಎಷ್ಟು ಜನ ಆಟಗಾರರು ಇರುತ್ತಾರೆ ಎಂದರೆ ಬಾಸ್ಕೆಟ್ ಬಾಲ್ ಟೀಮಿನಲ್ಲಿ ಐದು ಜನ ಆಟಗಾರರು ಇರುತ್ತಾರೆ. ಆರನೆಯದಾಗಿ ಅಮೆರಿಕಾದಲ್ಲಿ ಮದುವೆಯಾಗಲು ಪುರುಷರಿಗೆ ಎಷ್ಟು ವರ್ಷ ವಯಸ್ಸಾಗಿರಬೇಕು ಎಂದರೆ ಹದಿನೆಂಟು ವರ್ಷ ವಯಸ್ಸಾಗಿರಬೇಕು.
ಭಾರತದಲ್ಲಿ ಪುರುಷರು ವಿವಾಹವಾಗಬೇಕು ಎಂದರೆ ಕಾನೂನು ಪ್ರಕಾರವಾಗಿ ಇಪ್ಪತ್ತೊಂದು ವರ್ಷ ವಯಸ್ಸಾಗಿರಬೇಕು ಆದರೆ ಅಮೆರಿಕಾದಲ್ಲಿ ಹದಿನೆಂಟು ವರ್ಷ ವಯಸ್ಸಾದರೆ ಪುರುಷರು ವಿವಾಹವಾಗಬಹುದು. ಏಳನೆಯದಾಗಿ ಬುಲೆಟ್ ಟ್ರೈನ್ ನನ್ನು ಮೊದಲಿಗೆ ಪರಿಚಯಿಸಿದ ದೇಶ ಯಾವುದು ಎಂದರೆ ಅದು ಜಪಾನ್ ದೇಶವಾಗಿದೆ.
ಎಂಟನೆಯದಾಗಿ ಡಿಜೆ ವಿಸ್ತೃತ ರೂಪ ಏನು ಎಂದರೆ ಡಿಸ್ಕ್ ಜಾಕಿ ಎಂದು ಡಿಜೆ ಮ್ಯೂಸಿಕ್ ಅನ್ನು ಸಾವಿರದ ಒಂಬೈನೂರಾ ನಲವತ್ಮೂರರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ನಲ್ಲಿ ಪ್ರಾರಂಭಿಸಲಾಯಿತು. ಒಂಬತ್ತನೇಯದಾಗಿ ಮೂರು ಹೃದಯ ಹೊಂದಿರುವ ಏಕೈಕ ಪ್ರಾಣಿ ಯಾವುದು ಎಂದರೆ ಅಕ್ಟೋಪಸ್. ಹತ್ತನೆಯ ದಾಗಿ ಒಬ್ಬ ವ್ಯಕ್ತಿ ನಡೆಯುವ ದೂರವನ್ನು ಯಾವ ಮಾಪನ ಅಳೆಯುತ್ತದೆ ಎಂದರೆ ಪೆಡೋಮೀಟರ್ ಎಂಬ ಮಾಪನದಿಂದ ಅಳೆಯಲಾಗುತ್ತದೆ.
ಹನ್ನೊಂದನೆಯದಾಗಿ ಪ್ರಸಿದ್ಧ ಜೋಗ ಜಲಪಾತ ಯಾವ ನದಿಯಿಂದ ಸೃಷ್ಟಿಯಾಗಿದೆ ಎಂದರೆ ಅದು ಶರಾವತಿ ನದಿಯಿಂದ ಸೃಷ್ಟಿಯಾಗಿದೆ.ಇದು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವು ಸಾಮಾನ್ಯ ಜ್ಞಾನದ ವಿಷಯಗಳು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗು ತಿಳಿಸಿರಿ.