jobs in chitradurga district: ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಇರುತ್ತವೆ. ಇವುಗಳ ಮೇಲ್ವಿಚಾರಣೆ ನಡೆಸಲು ನಿರ್ವಾಹಕರು ಇರುತ್ತಾರೆ. ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರ ಹುದ್ದೆ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಈಗ ಸರ್ಕಾರ ಅಧಿಸೂಚನೆ ನೀಡಿದೆ. ಆಸಕ್ತಿ ಇರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಸಂಬಂಧಿಸಿದ ಹಾಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಚಿತ್ರದುರ್ಗ ಜಿಲ್ಲೆಯ ಮದಕರಿಪುರ, ಗೋಡಬನಾಳ್​, ಚಳ್ಳಕೆರೆಯ ಕಾಲುವೇಹಳ್ಳಿ, ಎನ್​ ದೇವರಹಳ್ಳಿ, ಗೌರ ಸಮುದ್ರ ಮತ್ತು ಮೊಳಕಾಲ್ಮೂರಿನ ಜೆಬಿ ಹಳ್ಳಿ ಈ 6 ಊರುಗಳಲ್ಲಿ 6 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. 6 ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಅರ್ಜಿ ಸಲ್ಲಿಕೆಗೆ ಕೆಲವು ಅರ್ಹತೆಗಳು ಮತ್ತು ಮಾನದಂಡಗಳಿವೆ, ಅವುಗಳು ಏನೇನು ಎಂದು ನೋಡಿವುದಾದರೆ, ಅರ್ಜಿ ಸಲ್ಲಿಸುವವರು ಪಿಯುಸಿ ಪಾಸ್ ಮಾಡಿರುವುದು ಕಡ್ಡಾಯ ಆಗಿದೆ.

ಹಾಗೆಯೇ ಲೈಬ್ರರಿ ಸೈನ್ಸ್ ಕೋರ್ಸ್ ಮಾಡಿರುವ ಸರ್ಟಿಫಿಕೇಟ್ ಕೂಡ ಇರುವುದು ಕಡ್ಡಾಯ. ಹಾಗೆಯೇ 3 ತಿಂಗಳ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು. ಲೈಬ್ರರಿ ಸೈನ್ಸ್ ಪದವಿ ಅಥವಾ ಸರ್ಟಿಫಿಕೇಶನ್ ಕೋರ್ಸ್ ಮಾಡಿರಬೇಕು ಇವರನ್ನು ಪರಿಗಣಿಸಲಾಗುತ್ತದೆ. ಈ ಕೆಲಸಕ್ಕೆ 18 ರಿಂದ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗೆಯೇ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವವರು ಅರ್ಜಿ ಸಲ್ಲಿಸಬಹುದು.

ಹಾಗೆಯೇ ವಯೋಮಿತಿ ಸಡಿಲಿಕೆ ನೀಡಲಾಗಿದೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಮತ್ತು ಪ್ರವರ್ಗ 1ಕ್ಕೆ ಬರುವವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಅವಶ್ಯಕತೆ ಇರುವ ದಾಖಲೆಗಳನ್ನು ನೀಡಿದ ಬಳಿಕ ಮುಂದಿನ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 26 ಕೊನೆಯ ದಿನಾಂಕ ಆಗಿದೆ. ಚಿತ್ರದುರ್ಗ ಜಿಲ್ಲಾಡಳಿತ ವೆಬ್ಸೈಟ್ ನಲ್ಲಿ ನೀಡಿರುವ ಅರ್ಜಿಯನ್ನು ಅಭ್ಯರ್ಥಿಗಳು ಫಿಲ್ ಮಾಡಬೇಕು.

ಅರ್ಜಿಯನ್ನು ಪತ್ರಾಂಕಿತ ಅಧಿಕಾರಿಗಳು ದೃಢೀಕರಿಸಬೇಕು..
ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ಈ ಅಡ್ರೆಸ್ ಗೆ ಅರ್ಜಿ ಸಲ್ಲಿಸಬಹುದು. ಪೂರ್ತಿ ಮಾಹಿತಿಗೆ chitradurga.nic.in ಈ ವೆಬ್ಸೈಟ್ ಗೆ ಭೇಟಿ ನೀಡಬಹದು.

By AS Naik

Leave a Reply

Your email address will not be published. Required fields are marked *