Bescom recruitment 2023 Karnataka: ಬೆಸ್ಕಾಮ್ ನಲ್ಲಿ ಖಾಲಿ ಇರುವ ಸುಮಾರು 400 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಿ. ಅಪ್ರೆಂಟಿಸ್ ಹುದ್ದೆಗಳಿಗೆ 9008 ರೂಪಾಯಿಯವರೆಗು ಸ್ಟೈಪಂಡ್ ಇರಲಿದ್ದು, 1961 ಅಪ್ರೆಂಟಿಸ್ ಕಾಯ್ದೆಯ ಅನುಸಾರ 1 ವರ್ಷಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಪೂರ್ತಿ ಮಾಹಿತಿ ನೋಡುವುದಾದರೆ.

ಒಟ್ಟಾರೆಯಾಗಿ ಸುಮಫು5 400 ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಬೇಕಾಗಿರುವ ಅರ್ಹತೆಗಳು, ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸು 18 ವರ್ಷ ದಾಟಿರಬೇಕು. ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 143 ಹುದ್ದೆಗಳು ಖಾಲಿ ಇದೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ 116 ಹುದ್ದೆಗಳು ಖಾಲಿ ಇದೆ, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ 36 ಹುದ್ದೆಗಳು ಖಾಲಿ ಇದೆ.

ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ 20 ಹುದ್ದೆಗಳು, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5 ಹುದ್ದೆಗಳು, ಇನ್ಫರ್ಮೇಷನ್ ಟೆಕ್ನಾಲಜಿ ವಿಭಾಗದಲ್ಲಿ 5 ಹುದ್ದೆಗಳು ಖಾಲಿ ಇದೆ. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ವಿಭಾಗದ ಡಿಪ್ಲೊಮಾ 54 ಹುದ್ದೆಗಳು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ 10 ಹುದ್ದೆಗಳು, ಕಂಪ್ಯೂಟರ್ ಸೈನ್ಡ್ 5 ಹುದ್ದೆಗಳು ಖಾಲಿ ಇವೆ.

ಇದು ಅಪ್ರೆಂಟಿಸ್ ಹುದ್ದೆ ಆಗಿದ್ದು, ಆಯ್ಕೆಯಾದವರಿಗೆ ಸ್ಟೈಪಂಡ್ ಕೊಡಲಾಗುತ್ತದೆ. ಇಂಜಿನಿಯರಿಂಗ್ ಪದವಿ ಮಾಡಿರುವ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ ₹9,008 ರೂಪಾಯಿ ಸ್ಟೈಪಂಡ್ ಹಾಗೆಯೇ ಡಿಪ್ಲೊಮಾ ಮಾಡಿರುವ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ ₹8000 ಸ್ಟೈಪಂಡ್ ಕೊಡಲಾಗುತ್ತದೆ. ಅಧಿಸೂಚನೆಯ ಪ್ರಕಾರ ಈ ಆರೆಂಟಿಸ್ಶಿಪ್ 1 ವರ್ಷಗಳ ಕಾಲ ಇರುತ್ತದೆ..

ಅಪ್ಲೈ ಮಾಡುವವರು ಸರ್ಕಾರದ ಮಾನ್ಯತೆ ಪಡೆದಿರುವ ಕಾಲೇಜಿನಿಂದ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಮ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.

By AS Naik

Leave a Reply

Your email address will not be published. Required fields are marked *