ಯೇಸು ಅಥವಾ ಜೀಸಸ್ ಕ್ರೈಸ್ತ ಧರ್ಮದ ಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು ದೇವರಕುಮಾರನೆಂದು ವಿಶ್ವಾಸಿಸುತ್ತಾರೆ. ಯೇಸು ಹುಟ್ಟಿದ್ದು ಬೆತ್ಲೆಹೆಮ್ನಲ್ಲಿ ಅವರು ಬೆಳೆದದ್ದು ಮಾತ್ರ ಆದರೆ ಅವರ ತಂದೆ ಮತ್ತು ತಾಯಿ ನಜರತ್ ಎಂಬ ಊರಿನಲ್ಲಿ ವಾಸವಾಗಿದ್ದರು. ಹಾಗಾಗಿ ಯೇಸುವನ್ನು ನಜರತ್ನ ಯೇಸುವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ. ತಾಯಿ ಸಂತ ಮೇರಿ. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನಡೆಸುತ್ತಾಳೆ. ಆದ್ದರಿಂದ ನಾವು ಇಲ್ಲಿ ಯೇಸು ಕ್ರಿಸ್ತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗೃಹದಿಂದ, ಪವಿತ್ರ ಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು. ಇವತ್ತಿಗು ಮುಂಜಾನೆ, ಸಾಯಂಕಾಲ ಆಕಾಶದಲ್ಲಿ ಚುಕ್ಕೆ ಕಾಣಿಸುತ್ತದೆ.
ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಢ್ಯ, ಶೋಷಣೆ, ಕಂದಾಚಾರಗಳ ವಿರುದ್ಧ ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ಅಥವಾ ಪ್ರತೀಕಾರದ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಂಗೆ ಎಡಗೆನ್ನೆ ತೋರು ಎಂಬ ಉದಾತ್ತತೆಯ ಮಾತುಗಳನ್ನಾಡುತ್ತಿದ್ದರು .ಯೇಸುವಿನ ಸಿದ್ಧಾಂತವು ಬಹಳ ಅದ್ಭುತವಾಗಿ ಇರುತ್ತಿತ್ತು. ದೇವ ಮಾನವನಾದ ಯೇಸುವಿನ ಸಮಾಧಿಯು ಜೆರುಸಲೆಂನಲ್ಲಿದೆ.
ವಿಶ್ವದಲ್ಲಿಯೇ ಅತಿ ಹೆಚ್ಚು ಜನರು ಪೂಜಿಸಲ್ಪಡುವ ದೇವಮಾನವರಾಗಿದ್ದಾರೆ. ಜೀಸಸ್ ಅವರ ಪ್ರಸಿದ್ಧ ಚರ್ಚನ್ನು ಜೆರುಸಲೆಂನಲ್ಲಿ ನಿರ್ಮಿಸಿದ್ದಾರೆ. ಆ ಚರ್ಚನ್ನು ನವೀಕರಿಸುವ ಸಲುವಾಗಿ ಮೊದಲ ಬಾರಿಗೆ ಜೀಸಸ್ನ ಸಮಾಧಿಯನ್ನು ತೆರೆಯಲಾಗಿದೆ. ಹಿರಿಯ ಚರ್ಚ್ ಫಾದರ್, ಭೌಗೋಳಿಕ ಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಇವರೆಲ್ಲರ ಸಮ್ಮುಖದಲ್ಲಿ ಸಮಾಧಿಯ ಮೇಲಿನ ಹೊದಿಕೆಯನ್ನು ತೆರೆಯುತ್ತಾರೆ. ಅದನ್ನು ತೆರೆದಾಗ ಎಲ್ಲರೂ ಆಶ್ಚರ್ಯ ದಾಯಕರಾಗುತ್ತಾರೆ. ಕಾರಣವೇನೆಂದರೆ ನಾಲ್ಕು ನೂರು ವರ್ಷಗಳ ಹಿಂದೆ ಜೀಸಸ್ ಸಮಾಧಿ ಯಲ್ಲಿರುವ ಚರ್ಚೆ ಬೆಂಕಿಗೆ ಆಹುತಿಯಾಗಿರುತ್ತದೆ.
ಬೆಂಕಿಯ ಅವಘಡ ಸಂಭವಿಸಿಯು ಸಹ ಜೀಸಸ್ ಸಮಾಧಿಯ ಬಳಿ ಇಟ್ಟಿದ್ದ ವಸ್ತುಗಳಿಗೆ ಏನೂ ಆಗಿರುವುದಿಲ್ಲ. ಹಾಗೆ ಆ ವಸ್ತುಗಳು ಇನ್ನೂವರೆಗೂ ಅದೇ ಹೊಳಪಿನಿಂದ ಕಂಗೊಳಿಸುತ್ತಿದೆ. ಈ ವಿಸ್ಮಯವನ್ನು ಅಲ್ಲಿ ಅಧಿಕಾರಿಗಳು ಕಣ್ಣಾರೆ ಕಂಡಿದ್ದಾರೆ. ಈ ವಿಸ್ಮಯವನ್ನು ನೋಡಲು ಅಲ್ಲಿಯ ಜನಸಾಮಾನ್ಯರಿಗೂ ಕೂಡಾ ಅವಕಾಶವನ್ನು ಕಲ್ಪಿಸಲಾಗಿದೆ. ಸಮಾಧಿಯನ್ನು ದರ್ಶನ ಮಾಡಿಕೊಂಡ ಜನರು ದೇವಮಾನವನನ್ನು ಪ್ರತ್ಯಕ್ಷವಾಗಿ ನೋಡಿದಷ್ಟೇ ಆನಂದ ಪಡುತ್ತಿದ್ದಾರೆ. ಈ ಪುಣ್ಯ ಸ್ಥಳವನ್ನು ಜನರಿಗೆ ಸಂದರ್ಶನಕ್ಕೆ ಅನುವಾಗುವಂತೆ ಮಾಡಲು ಅಲ್ಲಿಯ ಅಧಿಕಾರಿಗಳು ಹಗಲುರಾತ್ರಿ ಸುತ್ತಿದ್ದಾರೆ.