ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಅವರಿಲ್ಲ ಎಂಬ ಕೊರಗಿನಲ್ಲಿಯೇ ಅಪ್ಪು ನಾಯಕನಾಗಿ ನಟಿಸಿದ ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17ರಂದು ತೆರೆಗೆ ಬಂದಿದೆ ವಿಶ್ವಾದ್ಯಂತ ಪ್ರೇಕ್ಷಕರು ಜೇಮ್ಸ್’ಗೆ ಭರ್ಜರಿ ಸ್ವಾಗತ ಕೋರಿದ್ದಾರೆ ರಾಜ್ಯಾದ್ಯಂತ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ ಮಹಿಳಾ ಅಭಿಮಾನಿಗಳು ಪುಟ್ಟ ಮಕ್ಕಳ ಜತೆ ಸಿನಿಮಾ ವೀಕ್ಷಣೆಗೆ ಬರುತ್ತಿದ್ದಾರೆ ಹಲವರು ಪುನೀತ್ ನೆನೆದು ಭಾವುಕರಾಗಿದ್ದಾರೆ ತುಮಕೂರು ಬಳ್ಳಾರಿ ಕೊಪ್ಪಳದಲ್ಲಿ ಜೇಮ್ಸ್‌ಗೆ ಭರ್ಜರಿ ಸ್ವಾಗತ ಸಿಕ್ಕಿದ್ದು , ಚಿತ್ರದುರ್ಗ ಚಿಕ್ಕಬಳ್ಳಾಪುರದಲ್ಲಿ ಜೇಮ್ಸ್‌ಗೆ ಅದ್ದೂರಿಯಾಗಿ ವೆಲ್ಕಂ ಮಾಡಲಾಗಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್‌ಔಟ್ ಆಗುತ್ತಿದೆ. ಚಾಮರಾಜನಗರ, ಮೈಸೂರು, ದಾವಣಗೆರೆ, ಕೋಲಾರ, ಕಲಬುರಗಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಜೇಮ್ಸ್ ರಿಲೀಸ್ ಹಬ್ಬ ಭರ್ಜರಿಯಾಗಿ ನಡೆದಿದೆ.

ರಾಜ್ಯದೆಲ್ಲೆಡೆ ಜೇಮ್ಸ್ ಸಿನಿಮಾ ಒಳ್ಳೆಯ ಒಪನಿಂಗ್ ಪಡೆದುಕೊಂಡಿದೆ. ಕರುನಾಡ ಯುವರತ್ನ ಪುನೀತ್ ರಾಜ್‌ಕುಮಾರ್ ಇಲ್ಲದೇ ಅಭಿಮಾನಿಗಳು ನೋವಿನಲ್ಲಿದ್ದರು ಸಹ. ಜೇಮ್ಸ್ ಚಿತ್ರವನ್ನು ತುಂಬಾ ಆದರದಿಂದ ಬರಮಾಡಿಕೊಂಡರು. ಕರ್ನಾಟಕದ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ಈ ನಡುವೆ ಶಿವಣ್ಣ ಸಹೋದರ ಪುನೀತ್ ನಾಯಕನಾಗಿ ಕಾಣಿಸಿಕೊಂಡಿರುವ ಕೊನೆಯ ಸಿನಿಮಾಜೇಮ್ಸ್’ ಅನ್ನು ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ ಸ್ನೇಹಿತರ ಜತೆ ಮಾರ್ಚ್ 17ರ ಸಂಜೆ 4 ಗಂಟೆಗೆ ಶಿವಣ್ಣ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಿಸಲು ಸೀಟ್ ಇಲ್ಲದೆ ಪ್ರೇಕ್ಷಕರ ನಡುವೆ ಬದಿಯಲ್ಲಿ ಕೂತು ಸಿನೆಮಾ ನೋಡಿದರು. ಈ ವೇಳೆ ಸಹೋದರ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತರು.

ಈ ವೇಳೆ ಮಾತನಾಡಿದ ನಟ ಶಿವರಾಜ್‌ಕುಮಾರ್, ಡಬ್ಬಿಂಗ್ ಮಾಡುವ ವೇಳೆ ನನಗೆ ತುಂಬಾ ನೋವು ಆಗುತ್ತಿತ್ತು. ಅಪ್ಪು ಇಲ್ಲದ ಹುಟ್ಟುಹಬ್ಬ ಆಚರಣೆ ತುಂಬಾ ದುಃಖದ ವಿಚಾರ ಏನಿದೆ ಅದನ್ನು ನೋಡಿಕೊಂಡು ಮುಂದೆ ಹೋಗುತ್ತಿರಬೇಕು. ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್ಗಳನ್ನು ಶೇರ್ ಮಾಡುತ್ತಿದ್ದೆವು. ಅಪ್ಪುಗೆ ಬ್ರಾಂಡೆಡ್ ವಾಚ್ ಬೆಲ್ಟ್ ಗಾಗಲ್ ಹೀಗೆ ಸಾಕಷ್ಟು ಗಿಫ್ಟ್ಗಳನ್ನು ಕೊಡುತ್ತಿದ್ದೆ. ಎಲ್ಲರ ಹೃದಯದಲ್ಲಿ ಅಪ್ಪು ಇದ್ದಾನೆ. ಅವನ ಸಿನಿಮಾ ಬಿಡುಗಡೆ ಆಗಿದೆ ಅವನಿಲ್ಲದ ವೇಳೆ ಸಿನಿಮಾ ಬಿಡುಗಡೆ ಹೆಚ್ಚು ನೋವು ತರುತ್ತಿದೆ’ ಎಂದು ಹೇಳಿದರು.

ಶಿವಣ್ಣ ತಮ್ಮ ಪುನೀತ್ ರಾಜ್‌ಕುಮಾರ್ ಮಾಡಿದ ಸಾಧನೆ ಬಗ್ಗೆ ಮಾತಾಡಿದರು. ಪುನೀತ್ ಇಷ್ಟೆಲ್ಲಾ ಸಾಧನೆ ಮಾಡಲು ಕಾರಣನೇ ಅಪ್ಪಾಜಿ ಡಾ.ರಾಜ್ ಕುಮಾರ್. ಮೂಲನೇ ಅಪ್ಪಾಜಿ, ತಮ್ಮನಾಗಿ ಅಪ್ಪಾಜಿಗಿಂತ ದೊಡ್ಡ ಹೆಸರು ಮಾಡಿದ್ದು ನಮ್ಮ ಪುಣ್ಯ ಅದು ಅಪ್ಪಾಜಿಗಿಂತ ದೊಡ್ಡ ಮನುಷ್ಯ ಆಗಿಬಿಟ್ಟ ಅವನು ಯಾವಾಗಲೂ ತಂದೆಯಾದವನು, ಇಲ್ಲ ಅಣ್ಣನಾದವನು ನನಗಿಂತ ಒಂದು ಮೆಟ್ಟಿಲು ಮೇಲಿರಬೇಕು ಅಂತ ಬಯಸುತ್ತಾರೆ. ಶಿವಣ್ಣ ಮಾಧ್ಯಮಗಳಿಗೆ ಹೇಳಿದರು.

ಅಪ್ಪಾಜಿಗಂತೂ ಅವನನ್ನು ಕಂಡರೆ ಪ್ರಾಣ ಅಪ್ಪು ಹುಟ್ಟಿದ ಘಳಿಗೆನೇ ಬೇರೆ. ಅವನು ಚಿಕ್ಕ ಮಗು ಇದ್ದಾಗಿನಿಂದ ನೋಡಿ ಹೇಗೆ ಕಾಣಿಸುತ್ತಾನೆ. ಅದೇ ತರಾನೇ ಆ ನಗು ಇನ್ನೂ ಇದೆ. ಆ ನಗು ಯಾವತ್ತೂ ಹೋಗಿಲ್ಲ. ಕರ್ನಾಟಕದಲ್ಲಿ ಅಷ್ಟೊಂದು ಪ್ರೀತಿ ಕೊಟ್ಟಿದ್ದು ನೋಡಿ ತುಂಬಾನೇ ಖುಷಿ ಆಯ್ತು. ಆ ಅಭಿಮಾನವನ್ನು ಕಾಪಾಡಿಕೊಂಡು ಹೋಗಿ ಅಂತ ಹೇಳುತ್ತೇನೆ. ಥಿಯೇಟರ್ ಒಳಗೆ ಪಟಾಕಿ ಹೊಡೆಯ ಬೇಡಿ. ಪಿರಿಯಾಪಟ್ಟಣದಲ್ಲಾದ ಘಟನೆ ನೋಡಿ. ಎಲ್ಲರಿಗೂ ಇದು ಅಪಾಯ, ಬೇಡ, ಪ್ರಾಣ ತುಂಬಾ ಮುಖ್ಯ.ಅಂತಾರೆ ಶಿವಣ್ಣ .

ಕ್ಯಾಮರಾ ಮುಂದೆ ದುಃಖ ತಡೆದಿಟ್ಟುಕೊಳ್ಳಲು ಅದೆಷ್ಟೇ ಪ್ರಯತ್ನ ಪಟ್ಟರೂ ಶಿವಣ್ಣನಿಗೆ ಸಾಧ್ಯವಾಗಲೇ ಇಲ್ಲ ಶಿವಣ್ಣ ತಮ್ಮ ಪುನೀತ್ ರಾಜ್‌ಕುಮಾರ್‌ರನ್ನು ನೆನೆದು ಕಣ್ಣೀರು ಹಾಕಿದ ದೃಶ್ಯಗಳು ಎಂತಹವರ ಮನಕಲುಕುವಂತಿದೆ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಆಗಿದ್ದು ಈ ಸಿನಿಮಾಕ್ಕೆ ವಿಶ್ವದಾದ್ಯಂತ ಅದ್ಧೂರಿ ಸ್ವಾಗತ ದೊರೆತಿದೆ. ಸಿನೆಮಾ ನೋಡಿದ ಪ್ರತಿಯೊಬ್ಬ ಅಪ್ಪು ಅಭಿಮಾನಿ ಭಾವುಕರಾಗಿದ್ದರು. ಅಪ್ಪು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರೂ ಮಾಡಿದ ಸಿನೆಮಾ, ಅವರು ಬದುಕಿದ ರೀತಿ ಎಲ್ಲರಿಗೂ ಆದರ್ಶ.

ಒಟ್ಟಾರೆ ರಾಜ್ಯಾದ್ಯಂತ ಪುನೀತ್ ಜನ್ಮದಿನದ ಹರ್ಷಾಚರಣೆ ಜೋರಾಗಿತ್ತು. ಹಲವೆಡೆ ಅಭಿಮಾನಿಗಳು ಸಮಾಜಮುಖಿ ಕಾರ್ಯದ ಮೂಲಕ ಮಾದರಿಯಾದರು . ರಾಘಣ್ಣ ಹಾಗೂ ಶಿವಣ್ಣ ಅಭಿಮಾನಿಗಳೊಂದಿಗೆ ಬೆರೆತು ಚಿತ್ರದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ . ಹಲವೆಡೆ ನೇತ್ರದಾನ ಹಾಗೂ ದೇಹದಾನಕ್ಕೆ ಜನರು ನೋಂದಾಯಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!