ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಚಿರಪರಿಚಿತವಾದ ಈ ಗಿಡದ ಹೆಸರು ಅಡಿಕೆ ಸೊಪ್ಪಿನ ಗಿಡ ಅಥವಾ ಜಯಂತಿ ಗಿಡ ಎಂದು. ಹಳ್ಳಿಗಳಲ್ಲಿ ಈ ಗಿಡದ ಎಲೆಗಳನ್ನು ಸಾಕಷ್ಟು ರೀತಿಯಲ್ಲಿ ಔಷಧೀಯ ಗಿಡವಾಗಿ ಬಳಕೆ ಮಾಡಲಾಗುತ್ತದೆ. ಈ ಗಿಡವನ್ನು ಒಂದು ರೀತಿಯಲ್ಲಿ ಹಳ್ಳಿಯ ಜನರ ಆಯಿಟ್ಮೆಂಟ್ ಗಿಡ ಎಂದೇ ಹೇಳಬಹುದು.

ಭಾರತದಾದ್ಯಂತ ಕಾಣಸಿಗುವ ಈ ಜಯಂತಿ ಗಿಡ ಉಷ್ಣ ವಲಯಗಳಲ್ಲಿ ಹೆಚ್ಚು ಬೆಳೆಯುತ್ತದೆ. ಸುಮಾರು ಒಂದೂವರೆ ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯದ ಎಲೆಗಳು ಗಾಢ ಹಸಿರು ಬಣ್ಣದಲ್ಲಿ ಇರುತ್ತವೆ ಹಾಗೂ ಈ ಎಲೆಗಳು ನೋಡುವುದಕ್ಕೆ ಸ್ವಲ್ಪ ಗರಗಸದ ಹಲ್ಲಿನ ಆಕಾರದಲ್ಲಿ ಇರುತ್ತವೆ. ಈ ಎಲೆಗಳು ನೆಲದ ಮೇಲೆ ಹರಡಿಕೊಂಡು ಇರುತ್ತವೆ ಹಾಗೆ ಇದರ ಮೃದುವಾದ ಕಾಂಡ ಮಾತ್ರ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಇದರ ತುದಿಯಲ್ಲಿ ಪುಟ್ಟದಾದ ಹೂವು ಬೆಳೆಯುತ್ತದೆ.

ಇವು ಪ್ರತಿಯೊಂದು ಕಾಂಡದಲ್ಲಿಯೂ ಕೇವಲ ಒಂದೇ ಹೂವುಗಳನ್ನು ಬಿಡುತ್ತವೆ. ಇವು ಆರರಿಂದ ಎಂಟು ದಳಗಳನ್ನು ಹೊಂದಿದ್ದು ಅಸಂಖ್ಯಾತ ಕೇಸರಗಳನ್ನು ಹೊಂದಿರುತ್ತವೆ. ಈ ಹೂವುಗಳು ಪಕ್ವವಾದ ಬಳಿಕ ಕೂದಲಿನ ಎಳೆಗಳ ಹಾಗೆ ಆಗಿ ಗಾಳಿಯಲ್ಲಿ ಹಾರಿಹೋಗುವ ಮೂಲಕ ಬೀಜಗಳ ಪ್ರಸರಣ ಉಂಟಾಗುತ್ತದೆ. ಸಾಂಪ್ರದಾಯಿಕ ಔಷಧೀಯ ಸಸ್ಯ ಆಗಿರುವ ಈ ಜಯಂತಿ ಗಿಡ ಆಂಟಿ ಇನ್ಫ್ಲಾಮೇಟರಿ, ಆಂಟಿ ಫಂಗಲ್ ಮುಂತಾದ ಗುಣಗಳನ್ನು ಹೊಂದಿದ್ದು ಈ ಸಸ್ಯದ ಎಲೆಗಳು , ಹೂವುಗಳು ಹಾಗೂ ಕಾಂಡವನ್ನೂ ಔಷಧೀಯ ಸಸ್ಯವಾಗಿ ಬಳಕೆ ಮಾಡಲಾಗುತ್ತದೆ.

ಜಾಯಂಡೀಸ್ , ಹೊಟ್ಟೆಯುರಿ, ಶ್ವಾಸ ನಾಳದ ಸಮಸ್ಯೆ , ಅತಿಸಾರ , ಫೈಲ್ಸ್ ಮುಂತಾದ ಕಾಯಿಲೆಗಳಿಗೆ ಈ ಸಸ್ಯದ ಉಪಚಾರ ಮಾಡಬಹುದು. ಅದೇ ರೀತಿ ನಮಗೆ ಆಗಾಗ ಕಾಣಿಸಿಕೊಳ್ಳುವ ಗಂಟಲು ನೋವಿಗೆ ಈ ಸಸ್ಯ ಹೇಗೆ ಪ್ರಯೋಜನಕಾರಿ? ಇದನ್ನು ಬಳಸುವ ರೀತಿ ಹೇಗೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಅನೇಕರಿಗೆ ಗಂಟಲಿನ ಸೋಂಕು ಬಾಧಿಸುತ್ತದೆ. ಇದರಿಂದ ಆಹಾರ ಸೇವಿಸುವುದು ಇರಲಿ, ನೀರು ಕುಡಿಯುವುದು ಕೂಡ ಕಷ್ಟವಾಗುತ್ತದೆ. ಇಂತಹ ಸಮಸ್ಯೆ ಕಾಣಿಸಿಕೊಂಡರೆ ನೀವು ಕೆಲವೊಂದು ಮನೆಮದ್ದುಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಗಂಟಲು ನೋವು ಸಮಸ್ಯೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಕೂದಲಿಗೆ ಸಂಬಂಧಿಸಿದ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ನಮ್ಮ ಪರಿಸರದಲ್ಲಿ ಹಲವಾರು ಆಯುರ್ವೇದ ಗಿಡಗಳ ಸಸ್ಯಗಳು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾ ಗಿರುತ್ತದೆ. ಸಾಕಷ್ಟು ಆಯುರ್ವೇದ ಗಿಡಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಉತ್ತಮವಾಗಿ ಸಹಾಯ ಮಾಡುತ್ತದೆ.

ಅದೇ ರೀತಿ ಈ ಜಯಂತಿ ಗಿಡ ಕೂಡ ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಅದು ಯಾವುದೆಂದರೆ ಹಳ್ಳಿಗಳಲ್ಲಿ ಸಿಗುತ್ತದೆ ಅದರ ಹೆಸರು ಜಯಂತಿ ಗಿಡ ಈ ಗಿಡ ನೀವು ಆಕ್ಸಿಡೆಂಟ್ ಆಗಿ ಬಿದ್ದಾಗ ಗಾಯಗಳಾದರೆ ನಿಮ್ಮ ದೇಹದಲ್ಲಿ ರಕ್ತ ಸುರಿಯುತ್ತಿದ್ದರೆ ಜಯಂತಿ ಗಿಡದ ರಸವನ್ನು ಹಾಕುವುದರಿಂದ ತಕ್ಷಣದಲ್ಲಿ ರಕ್ತ ನಿಲ್ಲುತ್ತದೆ ಹಾಗೂ ದೇಹದಲ್ಲಿ ಯಾವುದೇ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾದರೆ ಇದು ನಿವಾರಣೆ ಮಾಡುತ್ತದೆ ಹಾಗೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯ ಗಿಡವಾಗಿದೆ. ಜಯಂತಿ ಗಿಡದ ಎಲೆಗಳು ಪ್ರತಿಯೊಬ್ಬರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ.

ಗಂಟಲು ನೋವು ಮತ್ತು ಕೂದಲು ಉದುರುವ ಸಮಸ್ಯೆ ಇರುವವರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ಜಯಂತಿ ಗಿಡದ ಎಲೆಗಳ ರಸವನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ರೋಗನಿರೋಧಕ ಶಕ್ತಿ ಇದರಲ್ಲಿದೆ ಸಾಕಷ್ಟು ಜನರಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ ಈ ಮನೆಮದ್ದು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಇದರಲ್ಲಿ ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುವ ಗುಣವಿದೆ ಹಾಗೂ ಯಾವುದೇ ಅಡ್ಡಪರಿಣಾಮ ಕೂಡಾ ಇಲ್ಲದ ಕಾರಣ ಪ್ರತಿಯೊಬ್ಬರು ಜಯಂತಿ ಗಿಡದ ಎಲೆಗಳನ್ನು ಬಳಸಬಹುದು. ಇದು ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ ಆಯುರ್ವೇದ ಆಗಿದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ ಯಾವುದೇ ತೊಂದರೆ ಆಗುವುದಿಲ್ಲ

ಸೂಚನೆ: ಯಾವುದೇ ಆಯುರ್ವೇದ ಅಥವಾ ಮನೆಮದ್ದು ಮಾಡುವ ಮುನ್ನ ಒಮ್ಮೆ ಆಯುರ್ವೇದ ಪಂಡಿತರು ಅಥವಾ ವೈದ್ಯರ ಸಲಹೆ ಮೇರೆಗೆ ಅದನ್ನು ಅನುಸರಿಸುವುದು ಸೂಕ್ತ ಯಾಕೆಂದರೆ, ಕೆಲವರಿಗೆ ಕೆಲವು ಮನೆಮದ್ದು ಅಥವಾ ನಾಟಿ ಔಷಧಿಗಳು ಆಗದೆ ಇರಬಹುದು ಇದರಿಂದ ಯಾವುದೇ ಬಿನ್ನಾಭಿಪ್ರಾಯ ಅಥವಾ ಗೊಂದಲ ಆಗಿದ್ದಲ್ಲಿ ನಾವು ಜವಾಬ್ದಾರರಲ್ಲ ನಾವುಗಳು ಆರೋಗ್ಯದ ಸಲುವಾಗಿ ಸಂಗ್ರಹ ಮಾಹಿತಿಯನ್ನು ನಿಮ್ಮ ಮುಂದೆ ತಿಳಿಸಿದ್ದೇವೆ ಧನ್ಯವಾದಗಳು ಶುಭವಾಗಲಿ

Leave a Reply

Your email address will not be published. Required fields are marked *