ಜನುಮದ ಜೋಡಿ ಶಿಲ್ಪಾ ಅವರು ಮೊದಲು ನಟನೆ ಮಾಡಿದ್ದು ಕನ್ನಡ ಚಲನಚಿತ್ರದಲ್ಲಿ. ಹಾಗೆಯೇ ಕೊನೆಯದಾಗಿ ನಟನೆ ಮಾಡಿದ್ದು ಕನ್ನಡ ಚಲನಚಿತ್ರದಲ್ಲಿಯೇ. ‘ಓಂ’ ತೆರೆಕಂಡ ಮರುವರ್ಷವೇ ರಿಲೀಸ್ ಆದ ಶಿವರಾಜ್‌ಕುಮಾರ್ ಅಭಿನಯದ ಮತ್ತೊಂದು ಸೂಪರ್ ಹಿಟ್‌ ಸಿನಿಮಾವೇ ಜನುಮದ ಜೋಡಿ. ಈ ಸಿನೆಮಾದಲ್ಲಿ ಶಿಲ್ಪ ಅವರು ನಾಯಕಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಶಿಲ್ಪಾ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜನುಮದ ಜೋಡಿ’ ತೆರೆಕಂಡು 24 ವರ್ಷಗಳ ಕಳೆದರೂ, ಸಿನಿಪ್ರಿಯರು ಈಗಲೂ ಆ ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಾರೆ. ಅದರ ಹಾಡುಗಳನ್ನು ಗುನುಗುತ್ತಾರೆ. ಈ ಚಿತ್ರಕ್ಕೆ ಸ್ಫೂರ್ತಿ ಗುಜರಾತಿನ ಪನ್ನಲಾಲ್ ಪಟೇಲ್‌ ಅವರ ಮಲೇಲಾ ಜೀವ್ ಕಾದಂಬರಿ. ಹಳ್ಳಿಯ ಮುಗ್ಧ ಯುವಕ ಕೃಷ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡರೆ, ಮಲಯಾಳಂ ನಟಿ ಶಿಲ್ಪಾ ಚಿಪ್ಪಿ ‘ಜನುಮದ ಜೋಡಿ’ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದರು. ಆನಂತರ ಅವರು ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಈಗ ಇತಿಹಾಸ.

ನಟಿ ಶಿಲ್ಪಾ ಮೊದಲ ಯತ್ನದಲ್ಲೇ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡರು. ನಿರ್ದೇಶನಕ್ಕಾಗಿ ನಾಗಾಭರಣ, ಸಂಗೀತ ನಿರ್ದೇಶನಕ್ಕಾಗಿ ವಿ. ಮನೋಹರ್ ಹಾಗೂ ನಿರ್ಮಾಣಕ್ಕಾಗಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತ್ತು. ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ಸಂಗೀತ, ಗಾಯನ, ಗೀತ ಸಾಹಿತ್ಯ, ಸ್ಪೆಷಲ್ ಜ್ಯೂರಿ ಪ್ರಶಸ್ತಿಗಳು ಜನುಮದ ಜೋಡಿಗೆ ಸಿಕ್ಕಿದ್ದವು. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಮುಂತಾದ ಕಡೆ 1 ವರ್ಷಕ್ಕೂ ಅಧಿಕ ದಿನ ಪ್ರದರ್ಶನ ಕಂಡರೆ, ಬೆಂಗಳೂರಿನ 5ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 25 ವಾರ ಪ್ರದರ್ಶವಾಗಿತ್ತು.

ಇವರ ಜೀವನದ ಬಗ್ಗೆ ಹೇಳುವುದಾದರೆ ಇವರು ಕೇರಳದಲ್ಲಿ ಹುಟ್ಟಿದರು. ನಿರ್ಮಾಪಕ ರಚಿತ್ ಅವರನ್ನು ಇವರು ವಿವಾಹವಾಗಿದ್ದಾರೆ. ಇವರಿಗೆ ಆವಂತಿಕಾ ಎಂಬ ಮಗಳಿದ್ದಾಳೆ. ಈಗ ತಿರುವನಂತಪುರಂನಲ್ಲಿ ಇವರು ವಾಸವಿದ್ದಾರೆ. ಹಾಗೆಯೇ ಇವರು ಎರಡು ಧಾರಾವಾಹಿಗಳ ನಿರ್ದೇಶಕರಾಗಿದ್ದಾರೆ. ತೆಲುಗುದಲ್ಲಿ ಒಂದು ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಾಗೆಯೇ ಮಲಯಾಳಂದಲ್ಲಿ ಒಂದು ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವರು ವಾಸವಾಗಿರುವ ಮನೆ ಬಹಳ ಸುಂದರವಾಗಿ ಇದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!