ಸೂರ್ಯ ಮತ್ತು ಶನಿ ಎರಡು ಗ್ರಹಗಳು ಬೇರೆ ಗ್ರಹಗಳಿಗೆ ಹೋಲಿಕೆ ಮಾಡಿದರೆ ತುಂಬಾ ಪ್ರಮುಖ್ಯತೆ ಹೊಂದಿರುವ ಗ್ರಹಗಳು. 2024ರಲ್ಲಿ ಅವು ಒಟ್ಟಿಗೆ ಸಂಚಾರ ಮಾಡುವ ಮೂಲಕ ರಾಶಿಗಳಲ್ಲಿ ತುಂಬ ಆಳವಾದ ಮತ್ತು ಪ್ರಬಲವಾದ ಪರಿಣಾಮಗಳನ್ನು ಬೀರುತ್ತವೆ.

ಇನ್ನು 2024ರ ಹೊಸ ವರ್ಷದಲ್ಲಿ ಜನವರಿ 11ದು ಅಮಾವಾಸ್ಯೆ ದಿನದಂದು ಸೂರ್ಯ ಉತ್ತರಾಷಾಡ ನಕ್ಷತ್ರದಲ್ಲಿ ಸಂಕ್ರಮಣ ಆಗ್ತಾನೆ ಮತ್ತು ಶನಿ ದೇವರು ಶತಭಿಷಾ ನಕ್ಷತ್ರದ ಎರಡನೇ ಅಂತದಲ್ಲಿ ಸಾಗ್ತಾರೆ. ಅಂತಹ ಸಮಯದಲ್ಲಿ ಸೂರ್ಯ ಮತ್ತು ಶನಿ ದೇವರು ಎಲ್ಲಾ 12ಡು ರಾಶಿಯ ಮೇಲೆ ತಮ್ಮ ಪರಿಣಾಮ ಬೀರುತ್ತಾರೆ. ಯಾವ ರಾಶಿಯ ಮೇಲೆ ಯಾವ ರೀತಿ ಪ್ರಭಾವ ಅದು ಕೆಟ್ಟದಾ ಇಲ್ಲ ಒಳ್ಳೆಯದ್ದಾ ಎಂದು ನೋಡೋಣ.

ಮೇಷ ರಾಶಿ : ಕೆಲಸ ಕಾರ್ಯಗಳನ್ನು ಯಾರ ಜೊತೆಯಾದರು ವ್ಯವಹರಿಸಲು ತಯಾರಿರಬೇಕು ಮತ್ತು ಜಾಗೃತೆ ವಹಿಸುವುದು ಒಳ್ಳೆಯದು. ಕೆಲವು ಸಂದರ್ಭಗಳಲ್ಲಿ ಮನೆಯವರಿಂದ ಕೆಲವು ವಿಷಯಗಳ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುತ್ತಿರಿ. ಪರಿವಾರ ಮತ್ತು ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆಯುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಜಾಸ್ತಿ ಗಮನ ಕೊಡಬೇಕು. ಇನ್ನು ಹಣ ಕಾಸಿನ ವಿಚಾರದಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುವುದು ಮತ್ತು ಭವಿಷ್ಯದ ಉಳಿತಾಯದ ಕುರಿತು ಗಮನ ಹರಿಸುವುದು ಕ್ಷೇಮಕರ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಯೋಗ ಮತ್ತು ಧ್ಯಾನ ಮಾಡಬೇಕು ಇದರಿಂದ ಸಕರಾತ್ಮಕ ಮತ್ತು ಖುಷಿಯ ಜೀವನ ಸಾಗಿಸಬಹುದು.

ವೃಷಭ ರಾಶಿ : ಈ ರಾಶಿಯವರಿಗೆ ಇದು ಅನುಕೂಲಕರ ಮತ್ತು ಶುಭಕರ ಸಂಬಂಧಗಳನ್ನು ಬೆಸೆಯುವ ಕೆಲಸಕ್ಕೆ ಕುಟುಂಬದ ಜೊತೆ ಸಮಯ ಕಳೆಯಬೇಕು ಜೊತೆಗೆ ಸಾಮಾಜಿಕ ಸಂಬಂಧಗಳು ಕೂಡ ಗಟ್ಟಿಯಾಗುತ್ತವೆ. ಸಂಗಾತಿ ಜೊತೆ ಯಾವುದೇ ವಿಷಯದಲ್ಲಿ ಪಾಲುದಾರರಾಗಲ್ಲೂ ಇದು ಉತ್ತಮ ಕಾಲ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ ಕೆಲಸಗಳನ್ನು ಎಲ್ಲರ ಜೊತೆ ಸೇರಿ ಮಾಡುವುದರಿಂದ ಯಶಸ್ಸು ಸಿದ್ಧಿಯಾಗುತ್ತದೆ. ನಿಮ್ಮ ವಾಣಿಜ್ಯ ತಂತ್ರವನ್ನು ಬಳಸಲು ಇದು ಒಳ್ಳೆ ಸಮಯ ಅದರ ಜೊತೆ ನೀವು ಯಾವುದೇ ಕಾಂಪಿಟೇಷನ್’ನಲ್ಲಿ ಭಾಗವಹಿಸಿದರೆ ಗೆಲವು ಸಾಧಿಸಬಹುದು. ಹೊಸ ಪ್ರಯೋಗಗಳನ್ನು ಮತ್ತು ಹೊಸ ಯೋಜನೆಗಳನ್ನು ನಿಮ್ಮ ವ್ಯಾಪಾರದಲ್ಲಿ ಅಳವಡಿಸಿಕೊಂಡರೆ ಉತ್ತಮ.

ಮಿಥುನ ರಾಶಿ : ಈ ರಾಶಿಯವರಿಗೆ ಈ ತಿಂಗಳಿನಲ್ಲಿ ಕುಟುಂಬದಲ್ಲಿ ಮತ್ತು ಆರೋಗ್ಯದಲ್ಲಿ ಸುಧಾಹರಣೆ ಕಾಣಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ವಲ್ಪ ಕಷ್ಟ ಎದುರಿಸ ಬೇಕಾಗುತ್ತದೆ ಆದ್ರೆ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಅದನ್ನು ಮೆಟ್ಟಿ ನಿಲ್ಲುವ ಸಾಧ್ಯತೆ ಇದೆ. ಕೆಲಸದಲ್ಲಿ ಪ್ರಗತಿ ಕಾಣಲು ಶ್ರಮಪಟ್ಟು ಕೆಲಸ ಮಾಡಬೇಕು ಮತ್ತು ನಿಮ್ಮ ಆತ್ಮಸ್ಥೈರ್ಯದಿಂದ ನಿಮಗೆ ಜಯ ಲಭ್ಯ, ದುಡ್ಡಿನ ವಿಷಯದಲ್ಲಿ ಗಮನ ಕೊಡಿ. ಸವಿಂಗ್ಸ್ ಮಾಡುವುದಕ್ಕೆ ಅದ್ಯತೆ ನೀಡಿ ಮತ್ತು ಖರ್ಚನ್ನು ಕಡಿಮೆ ಮಾಡಿ.

ಕಟಕ ರಾಶಿ : ಕರ್ಕಾಟಕ ರಾಶಿಯ ಮೇಲೆ ಈ ತಿಂಗಳು ಮಕ್ಕಳ ವಿದ್ಯಾಭ್ಯಾಸ ಮತ್ತು ಪ್ರೀತಿ ಪ್ರೇಮದ ಬಗ್ಗೆ ಸಕರಾತ್ಮಕ ಪರಿಣಾಮ ಕಾಣಬಹುದು ಮತ್ತು ಅದರಲ್ಲಿ ಯಶಸ್ಸು ಕೂಡಾ ಸಿದ್ಧಿಯಾಗುತ್ತದೆ. ಈ ರಾಶಿಯವರಿಗೆ ಪ್ರೀತಿ ಪ್ರೇಮದ ವಿಷಯದಲ್ಲಿ ಸಂಬಂಧ ಕಂಟಿನ್ಯೂ ಆಗುತ್ತೇ. ಹಣಕಾಸಿನ ವಿಚಾರದಲ್ಲಿ ಹೂಡಿಕೆಯನ್ನು ಸರಿಯಾಗಿ ಮಾಡಿ ಅದ್ರಲ್ಲಿ ಉಳಿತಾಯ ಮಾಡುವುದು ಉತ್ತಮ. ಇನ್ನು ಆರೋಗ್ಯದ ಬಗ್ಗೆ ಗಮನ ಕೊಡುವುದು ಪೌಷ್ಠಿಕ ಆಹಾರ ಸೇವನೆ ಮಾಡುವುದು ಒಳ್ಳೆಯದು. ವೃತ್ತಿಯಲ್ಲಿ ಗೆಲುವು ಕಾಣಲು ಹೊಸ ದಾರಿಗಳನ್ನು ಅನ್ವೇಷಣೆ ಮಾಡಬೇಕು. ಕೌಟುಂಬಿಕ ಕಲಹಗಳು ಇದ್ದರೆ ಬಗೆಹರಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಸಿಂಹ ರಾಶಿ : ಈ ರಾಶಿಯವರಿಗೆ ಸೂರ್ಯ ಮತ್ತು ಶನಿ ದೇವರು ತುಂಬ ಹೆಚ್ಚಿನ ಪರಿಣಾಮ ಬೀರುತ್ತಾರೆ. ದುಡ್ಡಿನ ವಿಷಯದಲ್ಲಿ ಉತ್ತಮವಾಗಿರುವುದು ಒಳ್ಳೆಯದು ಅದರಲ್ಲಿ ಕೂಡ ನಿಮ್ಮ ಹೂಡಿಕೆಯ ಮೇಲೆ ನಿಗಾ ವಹಿಸಬೇಕು ಮತ್ತು ಬುದ್ದಿವಂತಿಕೆ ತೋರಬೇಕು. ಕಠಿಣವಾದ ಹಾದಿಯನ್ನು ಸುಲಭ ಮಾಡಿಕೊಳ್ಳಲು ಒಂದು ಒಳ್ಳೆ ಅವಕಾಶ ಹೆಚ್ಚಿನ ಹೊರಟ ಮತ್ತು ಪರಿಶ್ರಮ. ಇನ್ನು ಹೇಳಬೇಕು ಎಂದರೆ ಗುರಿ ಸಾಧನೆಗೆ ಮುಖ್ಯ ಅಸ್ತ್ರ ಬುದ್ದಿ ಚತುರತೆ. ಯಾವುದೇ ಸಮಸ್ಯೆಗಳು ಎದುರಾದರು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಮತ್ತು ಅದರ ಪ್ರಭಾವದಿಂದ ಹೊರಬರುವುದು ನಮ್ಮ ಕೈಯಲ್ಲೇ ಇರುತ್ತದೆ.

ಕನ್ಯಾ ರಾಶಿ : ಇನ್ನು ಕನ್ಯಾ ರಾಶಿಯವರು ಸೂರ್ಯ ಮತ್ತು ಶನಿ ಮಹಾತ್ಮನ ಅನುಗ್ರಹದಿಂದ ವೃತ್ತಿ ಜೀವನದಲ್ಲಿ ಜಯವನ್ನು ಪಡೆಯುತ್ತಾರೆ. ಹೊಸ ಹೊಸ ಅವಕಾಶಗಳು ನಿಮಗೆ ಸಿಗಲಿವೆ ಅದನ್ನು ನೀವು ಗಣನೆಗೆ ತೆಗೆದುಕೊಳ್ಳಬೇಕು. ಸಂಬಂಧಗಳಲ್ಲಿ ತಿಳುವಳಿಕೆ ಇಲ್ಲದೆ ಹೋದರೆ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹೆಚ್ಚು ಪರಿಶ್ರಮದ ಸಹಾಯದಿಂದ ಸಫಲತೆ ಕಾಣಬಹುದು. ಕೆಲಸದಲ್ಲಿ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದರೆ ಯಶಸ್ಸು ಪ್ರಾಪ್ತಿ.

ತುಲಾ ರಾಶಿ : ತುಲಾ ರಾಶಿಯವರಿಗೆ ಆತ್ಮವಿಶ್ವಾಸ ಜಾಸ್ತಿ ಆಗುತ್ತೆ. ಪರಿವಾರ ಮತ್ತು ಆರೋಗ್ಯದಲ್ಲಿ ಅಭಿವೃದ್ದಿ ಕಾಣಬಹುದು. ಹಣಕಾಸಿನ ವ್ಯವಹಾರದಲ್ಲಿ ಖರ್ಚಿಗೆ ಹೆಚ್ಚು ಒತ್ತು ಕೊಡುವುದು ಒಳ್ಳೆಯದು. ವ್ಯವಹಾರದಲ್ಲಿ ಲಾಭವಿರುತ್ತದೆ ಮತ್ತು ಪ್ರಗತಿ ಕೂಡ ಆದ್ರೆ ಅದನ್ನು ಉಪಯೋಗ ಮಾಡುವ ವಿಧಾನ ತಿಳಿದಿರಬೇಕು. ಪ್ರೀತಿ ಪ್ರೇಮದ ವಿಚಾರದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ ನೀವು ನಿಮ್ಮ ಪ್ರೇಮಿಯ ಜೊತೆ ಮಾತಾಡುವಾಗ ಜಾಗೃತೆ ವಹಿಸುವುದು ಅಗತ್ಯ ಮತ್ತು ಅವರ ಭಾವನೆಗಳನ್ನು ಹಂಚಿಕೊಳ್ಳುವ ಮತ್ತು ಗೌರವಿಸುವ ಕಾರ್ಯ ಮಾಡಬೇಕು.

ವೃಶ್ಚಿಕ ರಾಶಿ : ಈ ರಾಶಿಯವರಿಗೆ ಉದ್ಯೋಗದಲ್ಲಿ ಮತ್ತು ವೃತ್ತಿಯಲ್ಲಿ ಗೆಲುವು ಸಾಧಿಸುವ ಸಮಯ. ಸ್ವಾವಲಂಬನೆ ಮತ್ತು ಸಂಘಟನೆಯ ವಿಚಾರದಲ್ಲಿ ಜಾಸ್ತಿ ಎಚ್ಚರಿಕೆ ವಹಿಸಬೇಕು, ಇನ್ನು ಹಣ ಕಾಸಿನ ವ್ಯವಹಾರದಲ್ಲಿ ಕೂಡ ಗಮನ ಕೊಡಬೇಕು, ಹೂಡಿಕೆಯನ್ನು ಹೆಚ್ಚು ಮಾಡಿ, ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಕೌಟುಂಬಿಕ ಜೀವನದಲ್ಲಿ ತಿಳುವಳಿಕೆ ಕಾಪಾಡಿಕೊಂಡು ಮುಂದೆ ಸಾಗಬೇಕು ಮತ್ತು ಒಪ್ಪಂದಗಳಿಗೆ ಬೆಲೆ ಕೊಡಬೇಕು ಅದರಿಂದ ಶಾಂತಿ ಸಿಗಲಿದೆ. ಯಾವುದೇ ರೀತಿಯ ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಮುಂದುವರೆಯುವುದು ಒಳ್ಳೆಯದು. ಸೂಕ್ತವಾದ ಬಾಳ ಸಂಗಾತಿ ಆವಿವಾಹಿತರಿಗೆ ದೊರಕುವರು. ಯಾವುದೇ ವೃತ್ತಿಯಲ್ಲಿ ಯಶಸ್ಸು ಸಿಗುವುದು ಖಚಿತ.

ಧನು ರಾಶಿ : ಈ ರಾಶಿಯವರಿಗೆ ಸೂರ್ಯ ಮತ್ತು ಶನಿ ಮಹಾತ್ಮರಿಂದ ತೀವ್ರವಾದ ವಿರೋಧ ವ್ಯಕ್ತವಾಗುತ್ತದೆ. ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಇದು ಪ್ರಶಸ್ತ ಸಮಯ. ಸವಾಲುಗಳ ಕಠಿಣವಾಗಿ ಇದ್ದರು ಸಹನೆಯಿಂದ ಅದನ್ನು ಎದುರಿಸಬೇಕು. ಇನ್ನು ಹಣಕಾಸು ಕೂಡ ಚೆನ್ನಾಗಿ ಒದಗಿ ಬರುತ್ತದೆ ಆದರೆ ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿ. ಪರಿವಾರ ಮತ್ತು ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆದರೆ ಅದು ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸ್ವಯಂ ಅಧ್ಯಯನ ಮಾಡುವವರಿಗೆ ಇದು ಧನಾತ್ಮಕ ಸಮಯ. ವೃತ್ತಿಯಲ್ಲಿ ಯಶಸ್ಸು ಕಾಣಲು ಸ್ಥಿರತೆ ಮುಖ್ಯ.

ಮಕರ ರಾಶಿ : ಈ ರಾಶಿಯವರಿಗೆ ಸೂರ್ಯ ಮತ್ತು ಶನಿ ಮಹಾತ್ಮನ ಕೃಪೆ ಇರುತ್ತದೆ ಮತ್ತು ಯಾವುದೇ ಕೆಲಸಕ್ಕೆ ಕೈ ಹಾಕಿದರು ಒಳ್ಳೆ ಫಲ ಪ್ರಾಪ್ತಿಯಾಗುವುದು. ನಿಮ್ಮ ಕಾರ್ಯಗಳಿಗೆ ಕುಟುಂಬ ಮತ್ತು ಹಿತೈಷಿಗಳ ಸಹಕಾರ ಸಿಗುವುದು. ಕಹಿ ಘಟನೆಗಳನ್ನು ತಪ್ಪಿಸಲು ಯತ್ನ ಮಾಡಬೇಕು. ಕ್ರೀಡಾ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಮತ್ತು ಸಾಮರ್ಥ್ಯ ಇದೆ ಅದರ ಬಗ್ಗೆ ಹೆಚ್ಚು ಗಮನ ನೀಡಿ. ಆರೋಗ್ಯ ವೃದ್ಧಿಗಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಹೊಸ ಕೌಶಲ್ಯಗಳನ್ನು ನಿಮ್ಮ ಜೀವನಕ್ಕೆ ಅಡವಳಿಸಿಕೊಳ್ಳಬೇಕು.

ಕುಂಭ ರಾಶಿ : ಈ ರಾಶಿಯಲ್ಲಿ ಶನಿ ದೇವರು ಮತ್ತು ಸೂರ್ಯರ ಪ್ರಭಾವದಿಂದ ವೃತ್ತಿಯಲ್ಲಿ ಯಶಸ್ಸು ಮತ್ತು  ಗೌರವವನ್ನು ಸಾಧಿಸಲು ಸಕಾಲ. ಕೆಲಸಗಳಲ್ಲಿ ಶ್ರದ್ಧೆ ಮತ್ತು ಭಕ್ತಿ ಇರಬೇಕು, ಪ್ರಾಮಾಣಿಕತೆ ಮತ್ತು  ಪ್ರಬುದ್ಧತೆ ಕೂಡ ಸೇರಿಕೊಂಡರೆ ಗೆಲುವು ಸುಲಭ. ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ ಮತ್ತು ಸಫಲವಾಗುತ್ತವೆ.ಇನ್ನು ಆರೋಗ್ಯ ಮತ್ತು ಪರಿವಾರಕ್ಕೆ ಸಮಯ ನೀಡುವುದರಲ್ಲಿ ಅಡೆ ತಡೆಯಾಗಬಹುದು ಅದರಿಂದ ಒತ್ತಡ ಹೆಚ್ಚಾಗಿ. ಅದು, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.  ಹಣ ಕಾಸು ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ. ವಿವಾದಗಳು ಏನೇ ಇರಲಿ ಅವುಗಳಿಗೆ ಮುಕ್ತಿ ಸಿಗುತ್ತದೆ.

ಮೀನ ರಾಶಿ : ಸೂರ್ಯ ಮತ್ತು ಶನಿ ದೇವರ ಪ್ರಭಾವದಿಂದ ಮೀನ ರಾಶಿಯವರು ತಮ್ಮ ಅದ್ಯತ್ಮಿಕ ಮತ್ತು ಜ್ಞಾನ ಕ್ಷೇತ್ರದಲ್ಲಿ ವಿಶ್ವಾಸವನ್ನು ಹೆಚ್ಚಿಸಿಕೊಂಡು ಮುಂದೆ ಸಾಗುತ್ತಾರೆ. ಅವರ ಹೆಚ್ಚಿನ ಗಮನ ತಮ್ಮ ಗುರಿಯನ್ನು ಸಾಧಿಸುವ ಕಡೆ ಇರುತ್ತದೆ. ಪರಿವಾರದ ವಿಚಾರಗಳ ಕಡೆ ಗಮನ ಕೊಡಿ, ಮಕ್ಕಳ ಜೊತೆ ಜಾಸ್ತಿ ಸಮಯ ಕಳೆಯುವುದು ಉತ್ತಮ. ಯೋಚನೆಗಳು ಮತ್ತು ನಂಬಿಕೆಗಳು ಬಗ್ಗೆ ಹೆಚ್ಚು ಜಾಗರೂಕರಾಗಿ ಇರಿ. ಮನಸ್ಸಿನ ಶಾಂತಿಗಾಗಿ ಸ್ವಯಂ ಅಧ್ಯಯನದ ಮೋರೆ ಹೋಗುವುದು ಉತ್ತಮ. ಸಂಗಾತಿ ಜೊತೆಗಿನ ಸಂಬಂಧ ಇನಷ್ಟು ಬಲವಾಗುತ್ತೆ. ನಿರಂತರ ಶದ್ದೆ ಭಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅದರಲ್ಲಿ ಉತ್ತಮ ಜೀವ ಶೈಲಿಗೆ ಯೋಗ ಮತ್ತು ಧ್ಯಾನ ಸೇರಿಕೊಂಡರೆ ಮನಸ್ಸಿನಲ್ಲಿ ಪ್ರಶಾಂತತೆ ನೆಲೆಸುತ್ತೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!