ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಮಂತ್ರಿ ಜನೌಷಧಿ ಯೋಜನೆಯ ಮೂಲಕ ಮೋದಿ ಮೆಡಿಕಲ್ ಶಾಪ್ ಗಳನ್ನು ಓಪನ್ ಮಾಡಬಹುದು. ಈ ಮೆಡಿಕಲ್ ಶಾಪ್ ಗಳಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಔಷಧಿ ಸಿಗುತ್ತದೆ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಲು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಎಲ್ಲರಿಗೂ ಗೊತ್ತಿರುವಂತೆ ಕೊರೋನ ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಲ್ಲಾ ರೀತಿಯ ಬಿಸಿನೆಸ್ ವ್ಯವಹಾರಗಳು ನಿಧಾನವಾಗಿದೆ ಆದರೆ ಈ ಸಮಯದಲ್ಲಿ ಮೆಡಿಕಲ್ ಶಾಪ್ ಅತಿ ಹೆಚ್ಚಿನ ಲಾಭವನ್ನು ಗಳಿಸಿದೆ. ಕೊರೋನ ಬಂದ ಸಮಯದಲ್ಲಿ ಬಹಳಷ್ಟು ಜನರು ಮೆಡಿಸನ್ ವ್ಯವಹಾರವನ್ನು ಪ್ರಾರಂಭಿಸಿದರೆ ಲಾಭ ಗಳಿಸಬಹುದು ಎಂದು ತಿಳಿದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಪ್ರಾರಂಭಿಸಲು ಬಹಳಷ್ಟು ಜನರು ಅರ್ಜಿ ಸಲ್ಲಿಸಿದರು. ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ವಿತರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಿದವರು ಅಂಗವಿಕಲರು, ಎಸ್ಸಿ, ಎಸ್ಟಿ ಆಗಿದ್ದರೆ ಅಡ್ವಾನ್ಸ್ ಆಗಿ 50,000 ರೂಗಳನ್ನು ಕೊಡುತ್ತಾರೆ. ಜನೌಷಧ ಕೇಂದ್ರಗಳ ಮೂಲಕ ಮಾರಾಟ ಮಾಡುವ ಔಷಧಿಗಳ ಮೇಲೆ 20% ಮಾರ್ಜಿನ್ ಮನಿಯನ್ನು ಕೊಡಲಾಗುತ್ತದೆ. ಇದರ ಜೊತೆಗೆ ಯೋಜನೆಯಡಿಯಲ್ಲಿ ಸಾಮಾನ್ಯ ಮತ್ತು ವಿಶೇಷ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ.
ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಲು ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಲು ಅಫೀಷಿಯಲ್ ವೆಬ್ಸೈಟ್ ಓಪನ್ ಮಾಡಿ ಪಿಎಂಬಿಜೆಪಿ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಕೆಳಗಡೆ ಪಿಎಂಬಿಜೆಪಿ ಯೋಜನೆ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ರಾಜ್ಯ ಸರ್ಕಾರದ ಯಾವುದೇ ಸಂಸ್ಥೆ, ಪ್ರತಿಷ್ಟಿತ NGO, ಟ್ರಸ್ಟ್ ಗಳು, ಖಾಸಗಿ ಆಸ್ಪತ್ರೆಗಳು, ದತ್ತಿ ಸಂಸ್ಥೆಗಳು, ವೈದ್ಯರು, ನಿರುದ್ಯೋಗಿಗಳು, ವೈಯಕ್ತಿಕ ಉದ್ಯಮಿಗಳು ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ತಾವು ಪ್ರಾರಂಭಿಸುವ ಅಂಗಡಿಗಳಲ್ಲಿ ಬಿ ಫಾರ್ಮಾ ಮತ್ತು ಡಿ ಫಾರ್ಮಾ ಪದವಿ ಪಡೆದವರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಹುದು. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ, ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ಅಥವಾ ಇನ್ನಿತರ ಯಾವುದೇ ಸ್ಥಳದಲ್ಲಿ ಪ್ರಾರಂಭಿಸಬಹುದು. ಈ ಕೇಂದ್ರಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿದ ನಂತರ ಜಾಗಗಳನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ ಮತ್ತು ಎರಡುವರೆ ಲಕ್ಷ ರೂಪಾಯಿಯನ್ನು ಬಂಡವಾಳವನ್ನಾಗಿ ನೀಡಲಾಗುತ್ತದೆ. ಜನೌಷಧಿ ಕೇಂದ್ರಗಳಲ್ಲಿ ಬೇಕಾಗುವ ಪೀಠೋಪಕರಣ ಇನ್ನಿತರ ವಸ್ತುಗಳಿಗೆ ಒಂದುವರೆ ಲಕ್ಷ ರೂಪಾಯಿ ನೀಡಲಾಗುತ್ತದೆ. ಕಂಪ್ಯೂಟರ್ ಇನ್ನಿತರ ವಸ್ತುಗಳಿಗೆ 50,000 ರೂಪಾಯಿ ನೀಡಲಾಗುತ್ತದೆ. ಜನೌಷಧಿ ಕೇಂದ್ರ ಪ್ರಾರಂಭಿಸಲು ಆಫ್ಲೈನ್ ಅರ್ಜಿ ಸಲ್ಲಿಸುವುದಾದರೆ ವೆಬ್ಸೈಟ್ ನಲ್ಲಿ ಪಿಎಂಬಿಜೆಕೆಗೆ ಅರ್ಜಿ ಸಲ್ಲಿಸುವುದು ಎಂಬ ಆಪ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿದರೆ ಅಪ್ಲಿಕೇಷನ್ ಫಾರ್ಮ್ ಪಿಡಿಎಫ್ ಇದೆ ಅದನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದು ಕೇಳಿರುವ ಮಾಹಿತಿಯನ್ನು ತುಂಬಿ ಕೊಟ್ಟಿರುವ ಅಡ್ರೆಸ್ ಗೆ ಕಳುಹಿಸಬೇಕಾಗುತ್ತದೆ.
ಆನ್ಲೈನ್ ಅರ್ಜಿ ಸಲ್ಲಿಸುವುದಾದರೆ ಆನ್ಲೈನ್ ನಲ್ಲಿ ಅನ್ವಯಿಸಿ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಕೆಳಗಡೆ ರಿಜಿಸ್ಟರ್ಡ್ ನೌ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿದಾಗ ರಿಜಿಸ್ಟ್ರೇಷನ್ ಫಾರ್ಮ್ ಕಾಣಿಸುತ್ತದೆ ಅವರು ಕೇಳಿದ ಮಾಹಿತಿಯನ್ನು ಹಾಕಿದ ನಂತರ ಸಬ್ಮಿಟ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದರೆ, ಜಿಮೇಲ್ ಐಡಿಗೆ ಒಂದು ಲಿಂಕ್ ಕಳುಹಿಸಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅದು ಓಪನ್ ಆಗುತ್ತದೆ ಅಲ್ಲಿ ಯೂಸರ್ ಐಡಿ, ಪಾಸ್ವರ್ಡ್ ಹಾಕಿ ಲಾಗಿನ್ ಮಾಡಬೇಕು. ನಂತರ ಆನ್ಲೈನ್ ಮೂಲಕ 5,000 ರೂ ಪೇ ಮಾಡಬೇಕು. ಅರ್ಜಿ ಸಲ್ಲಿಸುವವರು ಮಹಿಳೆ, ಅಂಗವಿಕಲರು, ಎಸ್ಸಿ-ಎಸ್ಟಿ, ಹಿಮಾಲಯ ಪ್ರದೇಶ, ದ್ವೀಪ ಪ್ರಾಂತ್ಯದವರಾಗಿದ್ದರೆ 5,000ರೂ ಪೇ ಮಾಡಬೇಕಾಗಿಲ್ಲ. ನಂತರ ಆಪ್ಷನ್ಸ್ ಗಳು ಬರುತ್ತದೆ ಗೌರ್ಮೆಂಟ್ ಸೆಕ್ಟರ್ ಆಗಿದ್ದರೆ ಗೌರ್ಮೆಂಟ್ ಎಂದು, NGOದವರಾಗಿದ್ದರೆ NGO ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು.
ನಂತರ ಕೆಟಗರಿ ಸೆಲೆಕ್ಟ್ ಮಾಡಬೇಕು, ಹೆಸರು, ಅಡ್ರೆಸ್ ಹಾಕಿದ ನಂತರ ರಾಜ್ಯವನ್ನು ಸೆಲೆಕ್ಟ್ ಮಾಡಬೇಕು, ಜಿಲ್ಲೆ, ಮೊಬೈಲ್ ನಂಬರ್, ಆಧಾರ್ ನಂಬರ್, ಪಾನ್ ನಂಬರ್ ಹಾಕಿ ನಂತರ ಗೋ ಟು ನೆಕ್ಸ್ಟ್ ಸ್ಟೆಪ್ ಅನ್ನು ಕ್ಲಿಕ್ ಮಾಡಿದರೆ ರಿಕ್ವೆಸ್ಟ್ ನಂಬರ್, ರಿಕ್ವೆಸ್ಟ್ ಡೇಟ್ ಹಾಗೂ ನಿಮ್ಮ ಅಪ್ಲಿಕೇಷನ್ ನಂಬರ್ ಬರುತ್ತದೆ ಅದನ್ನು ಬರೆದಿಟ್ಟುಕೊಳ್ಳಬೇಕು. ನಂತರ ಫಿಲ್ ರಿಜಿಸ್ಟರ್ ಫಾರ್ಮ್ ಎಂದು ಇದ್ದು ಏರೋ ಮಾರ್ಕ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನೀವು ಕೊಟ್ಟ ಮಾಹಿತಿ ಕಾಣಿಸುತ್ತದೆ ನಿಮ್ಮ ಹೆಸರು, ಅಡ್ರೆಸ್ ಇನ್ನಿತರ ಮಾಹಿತಿಗಳು. ನಂತರ ಯಾವ ಸ್ಥಳದಲ್ಲಿ ಕೇಂದ್ರವನ್ನು ಪ್ರಾರಂಭಿಸುತ್ತಿರೋ ಅದರ ಅಡ್ರೆಸ್ ಹಾಕಬೇಕು. ಜನೌಷಧ ಕೇಂದ್ರ ಪ್ರಾರಂಭಿಸುವ ಜಾಗದ ಬಗ್ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಕೊನೆಯದಾಗಿ ಸಬ್ಮಿಟ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಪ್ರಿಂಟೌಟ್ ಬರುತ್ತದೆ ಅದನ್ನು ಇಟ್ಟುಕೊಳ್ಳಬೇಕು. ಸ್ವಲ್ಪ ದಿನದ ನಂತರ ಈ ವೆಬ್ಸೈಟ್ ಮೂಲಕ ನಿಮ್ಮ ಅಪ್ಲಿಕೇಷನ್ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಸಹ ನೋಡಬಹುದು.