ನೇರಳೆ ಹಣ್ಣು ನೋಡುವುದಕ್ಕೆ ಪುಟ್ಟದಾಗಿ ನೀಲಿ ಬಣ್ಣದಲ್ಲಿ ಇರುತ್ತದೆ. ಇದು ಪುಟ್ಟದಾಗಿ ಇದ್ದರೂ ಸಹ ಇದರ ಉಪಯೋಗಗಳು ಮಾತ್ರ ಹಲವಾರು. ಈ ಹಣ್ಣನ್ನು ಹಿಂದಿನ ಕಾಲದಿಂದಲೂ ತಿನ್ನುತ್ತಾ ಇದ್ದರಂತೆ. ನೇರಳೆ ಹಣ್ಣು ವಾಸ್ತವದಲ್ಲಿ ಕಾಡಿನ ಬೆಳೆ ಆಗಿದ್ದು ಯಾವುದೇ ಪೋಷನಣೆ ಇಲ್ಲದೆಯೇ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಇದನ್ನು ತಮ್ಮ ತಮ್ಮ ತೋಟದಲ್ಲಿ ಬೆಳೆಸುವವರೂ ಸಹ ಇದ್ದಾರೆ. ಆದರೆ ಇದನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುವುದಿಲ್ಲ. ಇದನ್ನು ತಿನ್ನುವುದರಿಂದ ನಮಗೆ ಆಗುವಂತಹ ಪ್ರಯೋಜನಗಳು ಏನು ಈ ಹಣ್ಣನ್ನು ಯಾರೆಲ್ಲ ತಿನ್ನಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನೇರಳೆ ಹಣ್ಣು ಸ್ವಲ್ಪ ಹುಳಿಯಾಗಿ, ಒಗರೊಗರಾಗಿ ಇರುವುದರಿಂದ ಅಷ್ಟೊಂದು ಜನರು ಇದನ್ನು ತಿನ್ನೋಕೆ ಇಷ್ಟ ಪಡಲ್ಲ. ಆದರೆ ಇದರಲ್ಲಿ ಇರುವಂತಹ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡರೆ ಯಾರೆಲ್ಲ ನೇರಳೆ ಹಣ್ಣನ್ನು ತಿನ್ನೋಕೆ ಇಷ್ಟ ಪಡಲ್ಲವೋ ಅವರೆಲ್ಲರೂ ತಿನ್ನುತ್ತಾರೆ. ನೇರಳೆ ಹಣ್ಣಿನಲ್ಲಿ ಹೆಚ್ಜಾಗಿ ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಸಿ ಹಾಗೂ ವಿಟಮಿನ್ ಡಿ ಖನಿಜಗಳು, ಮೆಗ್ನಿಶಿಯಂ, ಪೊಟ್ಯಾಶಿಯಂ , ಹಾಗೂ ಕರಗುವ ನಾರಿನ ಅಂಶಗಳು ಇದ್ದು, ಉಳಿದ ಹಣ್ಣುಗಳಿಗೆ ಹೋಲಿಸಿದರೆ ಎಷ್ಟೋ ಅಧಿಕ ಪೋಷಕಾಂಶಗಳನ್ನು ಹೊಂದಿದೆ. ಆಯುರ್ವೇದ ನೀಡುವ ಮಧುಮೇಹ ಚಿಕಿತ್ಸೆಗೆ ನೇರಳೆ ಹಣ್ಣು ಪ್ರಮುಖವಾಗಿರುತ್ತದೆ. ನೇರಳೆ ಹಣ್ಣು ಮಧುಮೇಹ ಕಾಯಿಲೆಯ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ. ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಆಯುರ್ವೇದದಲ್ಲಿ ಮಧುಮೇಹ ನಿಯಂತ್ರಣಕ್ಕೆ ಎಂದೇ ನೇರಳೆ ಹಣ್ಣಿನ ಬೀಜಗಳನ್ನು ಬಳಕೆ ಮಾಡಲಾಗುತ್ತದೆ. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಆಯುರ್ವೇದದ ವಿವಿಧ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಪುಡಿಗಳನ್ನ ಮಧುಮೇಹಿಗಳು ಪ್ರತೀ ದಿನ ಉಟಕ್ಕೂ ಮೊದಲು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ನೇರಳೆ ಬೀಜದಲ್ಲಿ ಇರುವಂತಹ ಹೈಪೋ ಗ್ಲೈಸೆನಿಕ್ ಅಂಶವು ರಕ್ತದಲ್ಲಿ ಇರುವಂತಹ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯಕಾರಿ ಆಗುತ್ತದೆ. ನೇರಳೆ ಹಣ್ಣಿನಲ್ಲಿ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಇರುವುದರಿಂದ ಹೃದಯದ ತೊಂದರೆಗಳನ್ನು ದೂರ ಮಾಡುತ್ತದೆ.ಇದು ರಕ್ತದೊತ್ತಡ , ಹೃದಯ ಸಂಬಂಧಿ ಕಾಯಿಲೆಗಳನ್ನು ಶಾಶ್ವತವಾಗಿ ಮತ್ತು ಇತರ ಹೃದಯ ನಾಡಿಯ ಕಾರ್ಯಗಳನ್ನು ಸರಿಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನೇರಳೆ ಹಣ್ಣನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಣ ಮಾಡಬಹುದು.
ನೇರಳೆ ಹಣ್ಣು ತಿನ್ನುವುದರಿಂದ ಕ್ಯಾನ್ಸರ್ ವಿರುದ್ಧವೂ ಹೋರಾಡಲು ನೆರವಾಗುತ್ತದೆ. ನೇರಳೆ ಹಣ್ಣನ್ನು ಆಗಾಗ ತಿನ್ನುವುದರಿಂದ ಕ್ಯಾನ್ಸರ್ ವಿರುದ್ಧ ಹೋರಾಡಬಹುದು. ಇದರಲ್ಲಿ ವಿಟಮಿನ್ ಎ ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಅತಿಸಾರ, ಬೇಧಿ, ವಾಂತಿ , ಕರುಳಿನ ಉರಿ ಊತ ಇರುವಂತಹ ಲಕ್ಷಣಗಳನ್ನು , ಜೀರ್ಣಕಾರಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ನೇರಳೆಯಲ್ಲಿರುವ ತಂಪು ಮಾಡುವ ಮತ್ತು ಶಮನ ಗೊಳಿಸುವ ಕರುಳುಗಳ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶ ಇದ್ದು ರಕ್ತವನ್ನು ಶುದ್ಧಿಗೊಳಿಸುವ ಮೂಲಕ ಚರ್ಮವನ್ನು ಸ್ವಚ್ಛವಾಗಿಸಲು ಹಾಗೂ ಸುಂದರವಾಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಶುದ್ಧ ರಕ್ತದ ಕಾರಣದಿಂದ ಮೊಡವೆಗಳು , ಸುಕ್ಕುಗಳು , ಕಲೆಗಳು , ಗುಳ್ಳೆಗಳು ಆಗದಂತೆ ತಡೆಯಲು ಸಹ ಇದು ಸಹಾಯ ಮಾಡುತ್ತದೆ.
ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನೇರಳೆ ಹಣ್ಣು ವಿಟಮಿನ್ ಸಿ ಇಂದ ಸಮೃದ್ಧವಾಗಿರುವ ಕಾರಣ ಕಣ್ಣಿನ ದೃಷ್ಠಿಗೆ ಉತ್ತಮ. ಇದು ಕಣ್ಣಿನ ಪಾಪೆಯಲ್ಲಿರುವಂತಹ ಕೊಲೆಜಿನ್ ಸೇರಿ, ಇತರ ಸಂಯೋಜಕ ಅಂಶಗಳನ್ನು ರೂಪಿಸಲು ಮತ್ತು ನಿರ್ವಹಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ಈ ಎಲ್ಲಾ ಅಂಶಗಳು ಇರುವಂತಹ ನೇರಳೆ ಹಣ್ಣನ್ನು ನಿತ್ಯವೂ ಸೇವಿಸುವುದರಿಂದ ಆಹಾರ ಕ್ರಮದೊಂದಿಗೆ ಜೀವನ ಶೈಲಿಯೂ ಸಹ ಉತ್ತಮ ಗೊಳ್ಳುತ್ತದೆ ಎಂದು ಸೂಚಿಸಲಾಗಿದೆ. ಇದು ಅಪ್ಪಟ ಬೇಸಿಗೆಯ ಫಲ ಆಗಿದ್ದು ಮಾರ್ಚ್ ಏಪ್ರಿಲ್ ನ ಕೆಲವು ದಿನಗಳು ಮಾತ್ರ ಸಿಗುತ್ತವೆ. ಹಾಗಾಗಿ ಇದರ ರಸವನ್ನು ಸಂಗ್ರಹಿಸಿ ಇಡೀ ವರ್ಷವೂ ಸೇವಿಸಬಹುದು. ಹಾಗೂ ಹಣ್ಣಿನ ಬಹುತೇಕ ಪ್ರಯೋಜನಗಳನ್ನೂ ಸಹ ಹಣ್ಣಿನ ರಸದಿಂದಲೂ ಪಡೆಯಬಹುದು. ಈ ಈ ನೇರಳೆ ಹಣ್ಣನ್ನು ಗರ್ಭಿಣಿ ಸ್ತ್ರೀಯರು ತಿನ್ನಬಹುದು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ನ್ಯೂಟ್ರಿಯಂಟ್ಸ್ ಹೆಚ್ಚಾಗಿ ಇರುವುದರಿಂದ ಗರ್ಭಿಣಿಯರಿಗೆ ಒಳ್ಳೆಯದು. ಇವು ಮಗುವಿನ ಬೆಳವಣಿಗೆಗೆ ಬಹಳ ಒಳ್ಳೆಯದು ಹಾಗಾಗಿ ಗರ್ಭಿಣಿ ಸ್ತ್ರೀಯರು ಆಗಾಗ ನೇರಳೆ ಹಣ್ಣನ್ನು ಸೇವಸುವುದು ತುಂಬಾ ಒಳ್ಳೆಯದು. ಇವಿಷ್ಟು ನೇರಳೆ ಹಣ್ಣಿನಿಂದ ನಮ್ಮ ದೇಹಕ್ಕೆ ಹಾಗೂ ಚರ್ಮಕ್ಕೆ ಆಗುವಂತಹ ಪ್ರಯೋಜನಗಳು