ನಮ್ಮ ದೇಶದಲ್ಲಿ ಕೆಲವರಿಗೆ ಸ್ವಂತ ಜಮೀನು ಇರುವುದಿಲ್ಲ ಅವರಿಗೆ ಸರ್ಕಾರದ ಕೆಲವು ಸೌಲಭ್ಯಗಳು ಸಿಗುತ್ತವೆ. ಸರ್ಕಾರದಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಬೇಕಾಗುತ್ತದೆ. ದೃಢೀಕರಣ ಪ್ರಮಾಣ ಪತ್ರ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೊ ನೋಡಿ
ಸರ್ಕಾರದಿಂದ ಯಾವುದಾದರೂ ರೀತಿಯಲ್ಲಿ ಜಮೀನು ಪಡೆಯುತ್ತಿದ್ದರೆ ಅಥವಾ ಅಭಿವೃದ್ಧಿ ನಿಗಮದಡಿ ಸ್ವಯಂ ಭೂಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸುವುದಾದರೆ ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಅವಶ್ಯವಾಗಿ ಬೇಕಾಗುತ್ತದೆ. ಸರ್ಕಾರದ ಸಾಲ ಸೌಲಭ್ಯ ಪಡೆಯುವಾಗಲೂ ಈ ಪ್ರಮಾಣ ಪತ್ರ ಬೇಕಾಗುತ್ತದೆ.
ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರವನ್ನು ಲ್ಯಾಂಡ್ ಲೆಸ್ ಸರ್ಟಿಫಿಕೇಟ್ ಎಂದು ಕೂಡ ಕರೆಯುತ್ತಾರೆ. ಜಮೀನು ಇಲ್ಲದಿರುವ ಬಗ್ಗೆ ಧೃಡೀಕರಣ ಪತ್ರವನ್ನು ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ನಲ್ಲಿ ಸೇವಾಸಿಂದು ಸರ್ವಿಸ್ ಪೋರ್ಟಲ್ ಅನ್ನು ಓಪನ್ ಮಾಡಿ ಎಡಗಡೆ ಅಪ್ಲೈ ಫಾರ್ ಸರ್ವೀಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ವ್ಯೂ ಆಲ್ ಅವಿಲೇಬಲ್ ಸರ್ವಿಸ್ ಎಂಬ ಆಪ್ಷನ್ ಕಾಣಿಸುತ್ತದೆ.
ಅದನ್ನು ಕ್ಲಿಕ್ ಮಾಡಬೇಕು ಆಗ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಸರ್ಚ್ ಬಾರ್ ನಲ್ಲಿ ಲ್ಯಾಂಡ್ ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ಲೆಸ್ ಎಂದು ಟೈಪ್ ಮಾಡಿದಾಗ ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ ಎಂಬ ಆಪ್ಶನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಆಗ ಒಂದು ಫಾರ್ಮ್ ಓಪನ್ ಆಗುತ್ತದೆ ನಿಮಗೆ ಯಾವ ಭಾಷೆಯಲ್ಲಿ ಅಂದರೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಪ್ರಮಾಣ ಪತ್ರ ಬೇಕಾಗುತ್ತದೆಯೋ ಆ ಭಾಷೆಯನ್ನು ಸೆಲೆಕ್ಟ್ ಮಾಡಬೇಕು.
ನಗರ ಅಥವಾ ಗ್ರಾಮೀಣ, ನಿಮ್ಮ ಜಿಲ್ಲೆ, ತಾಲೂಕು, ಹೋಬಳಿಗಳನ್ನು ಸೆಲೆಕ್ಟ್ ಮಾಡಿ ತಾಯಿ ಹೆಸರು, ವಿಳಾಸ, ಆಧಾರ ಐಡಿ, ಮೊಬೈಲ್ ನಂಬರ್, ಪಿನ್ ಕೋಡ್, ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಪಡೆಯುವ ಉದ್ದೇಶ, ನಿಮ್ಮ ಕುಟುಂಬದ ವಾರ್ಷಿಕ ವರಮಾನ ಹಾಕಿ ರೂಪಾಯಿ25 ಶುಲ್ಕವನ್ನು ತುಂಬಬೇಕಾಗುತ್ತದೆ.
ನಂತರ ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ ಪ್ರಿಂಟ್ ತೆಗೆದು ಆಧಾರ್ ಕಾರ್ಡ್ ನೊಂದಿಗೆ ನಾಡಕಚೇರಿಗೆ ಸಬ್ ಮಿಟ್ ಮಾಡಬೇಕು. ನಂತರ 25 ದಿನಗಳ ಒಳಗೆ ನಿಮ್ಮ ಕೈಗೆ ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಸಿಗುತ್ತದೆ. ಜಮೀನು ಇಲ್ಲದಿರುವವರು ಈ ಪ್ರಮಾಣಪತ್ರವನ್ನು ಹೊಂದಿರಲೆ ಬೇಕಾಗುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ಜಮೀನು ಇಲ್ಲದಿರುವವರಿಗೆ ಈ ಪ್ರಮಾಣ ಪತ್ರದ ಬಗ್ಗೆ ಹಾಗೂ ಅದನ್ನು ಪಡೆಯಲು ಹೇಗೆ ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದನ್ನು ತಿಳಿಸಿ.