ಕನ್ನಡ ಚಿತ್ರರಂಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ನಟರಲ್ಲಿ ನವರಸ ನಾಯಕ ಜಗ್ಗೇಶ್ ಸಹ ಪ್ರಮುಖರು. ಚಿಕ್ಕ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟ ನವರಸ ನಾಯಕ ಜಗ್ಗೇಶ್ ಅವರು ನಂತರ ದೊಡ್ಡ ಮಟ್ಟದಲ್ಲಿ ಬೆಳೆದದ್ದು ಒಂದು ಇತಿಹಾಸವೇ ಸರಿ. ಜಗ್ಗೇಶ್ ಅವರು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಾಧಿಸಲು ತಮ್ಮ ಸ್ವಂತ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಫಲ ಎಂದು ಹೇಳುತ್ತಿರುತ್ತಾರೆ. ಜಗ್ಗೇಶ್ ಅವರ ಪರಿಶ್ರಮದ ಹಿಂದೆ ತಂದೆ-ತಾಯಿಯ ಆಶೀರ್ವಾದದ ಜೊತೆಗೆ ಜಗ್ಗೇಶ್ ಅವರ ಮೆಚ್ಚಿನ ಆರಾಧ್ಯದೈವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹವು ಇದೆ.ಪ್ರತಿಯೊಂದು ಯಶಸ್ವಿ ಕೆಲಸದ ಹಿಂದೆಯೂ ಗುರುರಾಯರ ಆಶೀರ್ವಾದ ಇದೆ ಎಂದು ನಂಬಿರುವ ನವರಸ ನಾಯಕ ಜಗ್ಗೇಶ್ ಅವರಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧ್ಯದೈವ. ವರ್ಷಕ್ಕೆ ಹಲವಾರಿ ಬಾರಿ ಜಗ್ಗೇಶ್ ಅವರು ಕುಟುಂಬ ಸಮೇತ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಬರುತ್ತಿರುತ್ತಾರೆ.
ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದ ಜಗ್ಗೇಶ್ ಮೊದ ಮೊದಲಿಗೆ ಸಣ್ಣ ಪುಟ್ಟ ಹಾಸ್ಯ, ಖಳ ಪಾತ್ರಧಾರಿಯಾಗಿ ನಟಿಸಿ ಮುಂದೆ ಪ್ರಸಿದ್ಧ ನಟರಾಗಿ ಬೆಳೆದಿದ್ದಾರೆ. ಇವರ ಮೊದಲನೆಯ ಚಿತ್ರ ಇಬ್ಬನಿ ಕರಗಿತು. ಮಠ ನೂರನೆಯ ಚಿತ್ರ ಆಗಿದ್ದು ಮೇಕಪ್ ಎಂಬ ಚಿತ್ರ ನಿರ್ಮಿಸಿ ಇದರ ಮೂಲಕ ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ ಕೂಡಾ. ಇನ್ನೂ ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ.
ನವರಸನಾಯಕ’ ಜಗ್ಗೇಶ್ ನಟನೆ, ಮಿಮಿಕ್ರಿ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು. ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿ ಇರುತ್ತಾರೆ. ಇತ್ತೀಚೆಗೆ ಅಷ್ಟೇ ತಮ್ಮ ಮಡದಿಯ ಹುಟ್ಟುಹಬ್ಬವನ್ನು ಆಚರಿಸಿ ಭಾವನಾತ್ಮಕ ಹೇಳಿಕೆಯನ್ನು ಸಹ ಬರೆದುಕೊಂಡಿದ್ದರು. ಜಗ್ಗೇಶ್ ಹಾಗೂ ಪರಿಮಳ ಅವರದ್ದು ಪ್ರೇಮ ವಿವಾಹ ಆಗಿದ್ದು ಇವರು ಬಹಳ ಸುಂದರ ಸಂಸಾರ ನಡೆಸುತ್ತಾ ಬಂದಿದ್ದಾರೆ. ಇನ್ನು ಸಿನಿಮಾ ಬಗ್ಗೆ ಮಾತನಾಡಿದ ಜಗ್ಗೇಶ್, ಈ ವರ್ಷ ನಾನು ಹಲವಾರು ಚಿತ್ರಗಳನ್ನು ಮಾಡಲಿದ್ದೇನೆ. ರಂಗನಾಯಕ ಸೇರಿ ಮೂರು ಸಿನಿಮಾ ಕೆಲಸಗಳ ಕೆಲಸ ನಡೆಯುತ್ತಿದೆ ಎಂದಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿ ಜನಮನ ಗೆದ್ದಿದ್ದ ಜಗ್ಗೇಶ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಡಲ್ಲಿ ಜಡ್ಜ್ ಆಗಿ ಬರುವ ಮೂಲಕ ಮತ್ತೆ ಪ್ರೇಕ್ಷಕರ ಮನ ಗೆದ್ದಿದ್ದರು.
ಇಷ್ಟೊಂದು ಸಾಧನೆ ಮಾಡಿರುವ ಜಗ್ಗೇಶ್ ಅವರು ಇತ್ತೀಚೆಗೆ ಅಷ್ಟೇ ತಮ್ಮ ಮನೆಗೆ ಒಂದು ಹೊಸದಾಗಿ ರೂಪು ರೇಷೆಗಳನ್ನು ನೀಡಿದ್ದಾರೆ. ಇದಕ್ಕೆ ಸಹಾಯಕರಾಗಿ ನಿಂತಿದ್ದು ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್. ಗಂಡನ ಪ್ರತಿಯೊಂದು ಕ್ಷಣಗಳಲ್ಲಿಯೂ ಬೆನ್ನೆಲುಬಾಗಿ ನಿಂತು ಈಗ ಮನೆಗೆ ಹೊಸ ರೂಪ ನೀಡಿ ಮನೆಯ ಡೈನಿಂಗ್ ಹಾಲ್ , ರೂಂ ಹೀಗೆ ಎಲ್ಲಾ ಕಡೆ ತಮ್ಮ ಹಾಗೂ ಮನೆಯವರ ಅಭಿರುಚಿಗೆ ತಕ್ಕಂತೆ ಹೇಳಿ ಮಾಡಿಸಿದ್ದಾರೆ ಪರಿಮಳ ಜಗ್ಗೇಶ್. ಮನೆಯೇ ಮಂತ್ರಾಲಯ ಎನ್ನುವ ಜಗ್ಗೇಶ್ ತಮ್ಮ ಕೈಯ್ಯಲ್ಲಿ ಆದಷ್ಟು ಬಡವರಿಗೆ ಸಹಾಯ ಮಾಡುವ ಮೂಲಕ ತಮ್ಮ ಸರಳತೆಯನ್ನು ಮೆರೆಯುತ್ತಾರೆ. ಈ ವಿಡಿಯೋದಲ್ಲಿ ಜಗ್ಗೇಶ್ ಅವರ ಮನೆಯ ಒಳಾಂಗಣ ರೂಪು ರೇಷೆಗಳನ್ನು ನೋಡಬಹುದು.