ನಮ್ಮ ಹಿರಿಯರು ಹೆಚ್ಚು ಶಕ್ತಿಶಾಲಿಗಳು ಹಾಗೂ ಆರೋಗ್ಯವಂತರಾಗಿರುತ್ತಿದ್ದರು ಯಾಕೆಂದರೆ ಅವರ ಆಹಾರ ಶೈಲಿ ಉತ್ತಮ ರೀತಿಯಲ್ಲಿರುತ್ತಿತ್ತು.ಇನ್ನು ಅವರು ಹೆಚ್ಚು ಕೆಲಸ ಮಾಡುತ್ತಿದ್ದರು ಹಾಗೂ ಅವರು ಬೆಳೆದು ಬಂದ ವಾತಾವರಣ ಯಾವುದೇ ಒತ್ತಡ ಇಲ್ಲದೆ ನಡೆಸುತ್ತಿದ್ದ ಜೀವನ ಎಲ್ಲವು ಕೂಡ ಅವರ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಇನ್ನು ನಾವುಗಳು ನಮ್ಮ ಆಹಾರ ಶೈಲಿಯಲ್ಲಿ ಹಾಗೂ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ವಿಷ್ಯಕ್ಕೆ ಬರೋಣ ಶರೀರಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ಟಾನಿಕ್ ನಂತೆ ಕೆಲಸ ಮಾಡುವ ಮನೆಮದ್ದು ಅಂದ್ರೆ ಇದು ಬೆಲ್ಲದ ಪಾನಕ. ಹೌದು ಈಗಲೂ ಕೂಡ ಹಳ್ಳಿಗಳಲ್ಲಿ ಈ ಬೆಲ್ಲದ ಪಾನಕವನ್ನು ಕುಡಿಯುತ್ತಾರೆ. ಈ ಬೆಲ್ಲದ ಪಾನಕವನ್ನು ಹೇಗೆ ತಯಾರಿಸಬೇಕು ಹಾಗೂ ಇದರಿಂದ ನಮ್ಮ ಶರೀರಕ್ಕೆ ಏನು ಲಾಭ ಅನ್ನೋದನ್ನ ಇಲ್ಲಿ ನೋಡುವುದಾದರೆ ಇದು ಯಾವುದೇ ಗ್ಯಾಸ್ ಅಂಶವನ್ನು ಹೊಂದಿರೋದಿಲ್ಲ ಹಾಗೂ ದೇಸಿ ಪಾನಕವಾಗಿದ್ದು, ಬೆಲ್ಲ ಕಾಳುಮೆಣಸು ಭರಿತವಾದ ಪಾನಕವಾಗಿದೆ.

ದೇಹಕ್ಕೆ ಬೆಲ್ಲ ಹಾಗೂ ಕಾಳುಮೆಣಸು ಎರಡು ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುವ ಗುಣಗಳನ್ನು ಹೊಂದಿದೆ ಅಲ್ಲದೆ ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ, ಆದ್ದರಿಂದ ಬೇಗನೆ ಶರೀರಕ್ಕೆ ರೋಗಗಳು ತಗಲುವುದಿಲ್ಲ. ಬೆಲ್ಲದ ಪಾನಕವನ್ನು ಹೇಗೆ ಮಾಡೋದು ಅನ್ನೋದನ್ನ ತಿಳಿಯೋಣ.

ಬೆಲ್ಲದ ಪಾನಕ ತಯಾರಿಸಲು ಬೇಕಾಗುವ ಪದಾರ್ಥಗಳು: ಬೆಲ್ಲ ಒಂದು ಹೆಚ್ಚು ಅಥವಾ ನಿಮಗೆ ಸಿಹಿ ಎಷ್ಟು ಬೇಕು ಅಷ್ಟು ಬಳಸಿ ಕೊಳ್ಳಬಹುದು, ನಂತರ ಒಂದು ನಿಂಬೆಹಣ್ಣು ಹಾಗು ಒಂದು ಟೀ ಚಮಚ ಕಾಳುಮೆಣಸು, ಕೇಸರಿ ದಳ ಮತ್ತು ಏಲಕ್ಕಿ ಪುಡಿ ಸ್ವಲ್ಪ ಇಷ್ಟು ಬೇಕಾಗುತ್ತದೆ. ಇನ್ನು ಇದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ನೋಡುವುದಾದರೆ, ಮೊದಲು ಒಂದು ಲೀಟರ್‌ ನೀರಿಗೆ ಬೆಲ್ಲ ಪುಡಿ ಮಾಡಿ ಹಾಕಿ, ಜೋನಿ ಬೆಲ್ಲವಾದರೆ ಚೆನ್ನಾಗಿ ಕರಗಿಸಿ. ಇದಕ್ಕೆ ಕಾಳು ಮೆಣಸಿನ ಪುಡಿಯನ್ನೂ ಸೇರಿಸಿ. ನಂತರ ಕೇಸರಿ ದಳ ಹಾಗೂ ನಿಂಬೆ ರಸ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ನೀವು ಸೇವಿಸಲು ಬಯಸುವ ಆರೋಗ್ಯಕಾರಿ ಪಾನಕ ಕುಡಿಯಲು ರೆಡಿ ಇರುತ್ತದೆ. ನಿಮಗೆ ಈ ಆರೋಗ್ಯಕಾರಿ ಮಾಹಿತಿ ಇಷ್ಟವಾದಲ್ಲಿ ಒಂದು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ, ಶುಭವಾಗಲಿ

By

Leave a Reply

Your email address will not be published. Required fields are marked *