ನಾವು ರಸ್ತೆಯಲ್ಲಿ ಸಾಗುವಾಗ ಒಂದು ಅಥವಾ ನಾಲ್ಕು ಐದು ಬಾತು ಕೋಳಿಗಳು ಓಡಾಡುವುದನ್ನು ನೋಡಿರುತ್ತೇವೆ. ಆದರೆ ಒಂದೇ ಬಾರಿಗೆ ರಸ್ತೆಯಲ್ಲಿ ಸಾವಿರಾರು ಬಾತುಕೋಳಿಗಳು ಓಡಾಡುವುದನ್ನ ನೋಡಿರುವುದಿಲ್ಲ. ಈ ಒಂದು ಘಟನೆ ನಡೆದಿದ್ದು ಥೈವಾನ್ ದೇಶದಲ್ಲಿ. ಇಲ್ಲಿ ಒಬ್ವ ವ್ಯಕ್ತಿ ತನ್ನ ಬಳಿ ಇರುವಂತಹ ಬಾತುಕೋಳಿಗಳನ್ನು ಮೆಯಿಸೋಕೆ ರಸ್ತೆಯಲ್ಲಿ ಒಂದು ಕಿಲೋಮೀಟರ್ ವರೆಗೆ ಕರೆದುಕೊಂಡು ಹೋಗುತ್ತಾನೆ. ಈ ದೃಶ್ಯ ನೋಡಲು ಬಹಳ ಸುಂದರವಾಗಿ ಕಂಡರೂ ರಸ್ತೆಯಲ್ಲಿ ಬಹಳ ಟ್ರಾಫೀಕ್ ಜಾಮ್ ಆಗುವುದರಿಂದ ವಾಹನ ಚಾಲಕರಿಗೆ ಕಿರಿ ಕಿರಿ ಅನಿಸುತ್ತೆ. ಈಗಿರುವ ವೈರಸ್ ಗೂ ಮೊದಲು ಪಾಕಿಸ್ತಾನದಿಂದ ಲಕ್ಷಾಂತರ ಮಿಡತೆಗಳು ಗುಂಪು ಗುಂಪಾಗಿ ಬಂದವು. ನಮ್ಮ ದೇಶದಲ್ಲಿ ತುಂಬಾ ಬೆಳೆಗಳನ್ನು ನಾಶ ಮಾಡಿವೆ. ಇವು ಒಂದು ಬಾರಿಗೆ 350 ಕಿಲೋಮೀಟರ್ ದೂರ ಪ್ರಯಾಣ ಬೆಳೆಸುವ ಶಕ್ತಿಯನ್ನು ಹೊಂದಿವೆ. ಅಷ್ಟೇ ಅಲ್ಲದೆ ಕೋಟ್ಯಾಂತರ ಮಿಡತೆಗಳು ಆಫ್ರಿಕಾದಲ್ಲಿ ಸಾಕಷ್ಟು ಬೆಳೆಗಳನ್ನು ಹಾಳು ಮಾಡಿದವು. ಇವು ಗುಂಪು ಗುಂಪಾಗಿ ಬರವುದನ್ನ ನೋಡೋಕೆ ಏನೋ ಚಂದ ಆದರೆ ರೈತರಿಗೆ ತುಂಬಲಾಗದ ನಷ್ಟವನ್ನು ತಂದುಕೊಡುತ್ತವೆ.
ನಾವು ಯಾವಾಗಲೋ ಒಮ್ಮೆ ಒಂದು ಚಿಟ್ಟೆಯನ್ನು ನೋಡೋರುತ್ತೇವೆ ಆದರೆ ಒಂದೆಬಾರಿಗೆ ಲಕ್ಷಾಂತರ ಚಿಟ್ಟೆಗಳನ್ನು ನೋಡಿರಲು ಸಾಧ್ಯವಿಲ್ಲ. ಪ್ರತೀ ವರ್ಷ ಲಕ್ಷಾಂತರ ಚಿಟ್ಟೆಗಳು ಯುಎಸ್ , ಕೆನಡಾ ಹಾಗೂ ಮೆಕ್ಸಿಕೋ ಕಡೆ ಹಾರುತ್ತವೆ. ಇವು ಒಂದು ಬಾರಿಗೆ 4500 ಕಿಲೋಮೀಟರ್ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇವುಗಳನ್ನು ಗುಂಪು ಗುಂಪಾಗಿ ನೋಡಲು ಬಹಳ ಸೊಗಸಾಗಿ ಕಾಣಿಸತ್ತೆ. ಇನ್ನು ಕೋಳಿ ಫಾರಂ ಗಳನ್ನು ನಾವು ನೋಡಿರುತ್ತೇವೆ. ಫಾರಂ ಗಳ ಶೆಡ್ ಗಳಲ್ಲಿ ಕೋಳಿಗಳನ್ನ ಸಾಕಲಾಗುತ್ತೆ. ಆದರೆ ಚೀನಾ ದೇಶದ ಒಬ್ಬ ವ್ಯಕ್ತಿ ಸುಮಾರು 10 ಕಿಲೋಮೀಟರ್ ಪ್ರದೇಶದಲ್ಲಿ ಲಕ್ಷಾಂತರ ಕೋಳಿಗಳನ್ನು ಸಾಕುತ್ತಿದ್ದಾನೆ. ಇವುಗಳಿಗೆ ಒಂದು ಗಾಡಿಯ ಮುಖಕ ನೆಲದ ಮೇಲೆ ಆಹಾರವನ್ನು ಹಾಕಲಾಗುತ್ತೆ. ಈ ದೃಶ್ಯವೂ ಸಹ ನೋಡಲು ಬಹಳ ಸೊಗಸಾಗಿರತ್ತೆ. ಅಮೇರಿಕದ ಒಂದು ಪ್ರದೇಶಕ್ಕೆ ನೀರಿನ ಮಿಡತೆಗಳು ವಲಸೆ ಬರುತ್ತವೆ. ಇವು ಬಂದು ಕುಳಿತ ಜಾಗದಲ್ಲಿ ಕಾಲು ಇಡಲೂ ಸಹ ಜಾಗ ಇರುವುದಿಲ್ಲ. ಜೇನು ನೊಣಗಳು ನಾವು ಮರದ ಮೇಲೆ ಅಥವಾ ಯಾವುದೋ ಹಳೆಯ ಮನೆಗಳಲ್ಲಿ ನೋಡಿರುತ್ತೇವೆ. ಅಮೆರಿಕಾದ ಒಂದು ಶಾಪಿಂಗ್ ಮಾಲ್ ಬಳಿ ಎರಡು ವರ್ಷಗಳಿಂದ ಜೇನು ನೊಣಗಳು ಒಂದು ಕಾರಿಗೇ ಅಂಟಿಕೊಂಡಿವೆ. ಎಷ್ಟೇ ಓಡಿಸಿದರೂ ಸಾಯಿಸಿದರೂ ಮತ್ತೆ ಮತ್ತೆ ಅದೇ ಕಾರಿಗೆ ಬಂದು ಅಂಟಿಕೊಳ್ಳುತ್ತೇ. ಇದಕ್ಕೆ ಕಾರಣ ಆ ಕಾರಿನಲ್ಲಿರುವ ಮೈಗ್ರೇಷನ್. ರೆಡ್ ಬುಲ್ ಕಂಪನಿಯವರು ಒಂದು ಅಡ್ವಟೈಸ್ಮೆಂಟ್ ಶೂಟ್ ಮಾಡಲು ಕ್ಯಾನ್ಬ್ಬೇರಿ ಹಣ್ಣುಗಳನ್ನು ಒಂದು ಹೊಲದಲ್ಲಿ ನೀರಿನಲ್ಲಿ ಬಿಡುತ್ತಾರೆ. ಇದರ ಮೇಲೆ ಒಬ್ಬ ವ್ಯಕ್ತಿ ಸ್ಕೇಟಿಂಗ್ ಮಾಡ್ತಾನೆ. ಈ ದೃಶ್ಯ ನೋಡಲು ಅದ್ಭುತವಾಗಿದ್ದರೂ ಸಹ ತಿನ್ನುವ ಪದಾರ್ಥಗಳನ್ನು ವ್ಯರ್ಥ ಮಾಡುವುದು ಸರಿಯಲ್ಲ. ಈ ಮುಂದಿನ ವಿಡಿಯೋ ನೋಡಿ