ಇಂದಿನ ಆಧುನಿಕ ಯುಗದಲ್ಲಿ ಸಾಮಾನ್ಯವಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯಗಳಿಂದ ಹೊಂದಾಣಿಕೆ ಸಾಧ್ಯವಾಗದೆ ವಿಚ್ಛೇದನ ನೀಡುವ ಬಗ್ಗೆ ನಮಗೆಲ್ಲಾ ತಿಳಿದಿರುವ ವಿಷಯ ಆದರೆ ಹಿಂದಿನ ಕಾಲದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಸುತ್ತಿದ್ದರು ಯಾಕೆಂದರೆ ಹೆಣ್ಣು ಸಂಸಾರದ ಕಣ್ಣು ತವರು ಮನೆಯನ್ನು ತೊರೆದು ಗಂಡನ ಮನೆಗೆ ಬಂದ ಹೆಣ್ಣು ಗಂಡನ ಮನೆಯವರೆಲ್ಲರ ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುತ್ತ ಹಾಗೂ ತನ್ನ ಗಂಡನ ಬೇಕು-ಬೇಡಗಳನ್ನು ಕೂಡ ನೋಡಿಕೊಳ್ಳುವ ಜವಾಬ್ದಾರಿ ಆಕೆಯ ಮೇಲಿರುತ್ತದೆ ಇನ್ನು ಪುರಾಣಗಳಲ್ಲಿ ಅನುಸೂಯ ಸತಿ ಸಾವಿತ್ರಿ ಅರುಂಧತಿ ತನ್ನ ಪತಿಗೋಸ್ಕರ ಹಲವಾರು ಕಷ್ಟಗಳನ್ನು ಎದುರಿಸಿ ಆತನ ಜೀವವನ್ನು ಉಳಿಸಲು ಹಲವಾರು ಸಂದರ್ಭಗಳನ್ನು ಎದುರಿಸಿರುತ್ತಾರೆ ಎಂದು ಪುರಾಣಗಳ ಮೂಲಕ ತಿಳಿದುಕೊಂಡಿರುತ್ತೇವೆ

ಇಂದಿನ ಈ ಲೇಖನದಲ್ಲಿ ಆಧುನಿಕ ಯುಗದಲ್ಲಿಇಂತಹವರು ಇದಾರೆ ಎಂಬುದೇ ಸೋಜಿಗದ ಸಂಗತಿ ತಮ್ಮ ಇಳಿವಯಸ್ಸಿನಲ್ಲಿಯೂ ತಮ್ಮ ಗಂಡನ ಪ್ರಾಣವನ್ನು ಕಾಪಾಡಲು ಆತನಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಲು ಮೂರು ಕಿಲೋಮೀಟರ್ ಬರಿಗಾಲಲ್ಲಿ ಓಡಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಇವರು ಮೂಲತ ಮಹಾರಾಷ್ಟ್ರದ ಬುದ್ಧನ ಎಂಬ ಕುಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗಳು ಇವರಿಗೆ ಮೂರು ಹೆಣ್ಣು ಮಕ್ಕಳಿದ್ದು ಅವರು ಪ್ರಾಯಕ್ಕೆ ಬಂದ ನಂತರ ತಮ್ಮ ಶಕ್ತಿ ಅನುಸಾರವಾಗಿ ಅವರಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿರುತ್ತಾರೆ

ತಮ್ಮ ಜೀವನವನ್ನು ಸಾಗಿಸಲು ಶ್ರೀಮಂತರ ಮನೆಯ ಹೊಲಗದ್ದೆಗಳಲ್ಲಿ ಕೂಲಿ ಮಾಡಿಕೊಂಡು ಗಂಡ-ಹೆಂಡತಿ ಜೀವನವನ್ನು ಸಾಗಿಸಲು ಅವರ ಬಳಿ ಒಂದು ರೂಪಾಯಿ ಹಣ ಇರುವುದಿಲ್ಲ ದಿನಗೂಲಿ ಮಾಡಿಕೊಂಡು ಆಹಾರ ಸೇವಿಸುತ್ತಿದ್ದರು ಹೀಗೆ ಒಮ್ಮೆ ತನ್ನ ಪತಿಯ ಜೊತೆ ಕೂಲಿ ಕೆಲಸವನ್ನು ಮಾಡುತ್ತಿರುವಾಗ ಆಕಸ್ಮಿಕವಾಗಿ ಅವರ ಪತಿಯು ಬಿದ್ದು ಹೋಗುತ್ತಾರೆ ಇದರಿಂದ ಆತಂಕಕ್ಕೀಡಾದ ಅಕ್ಕಪಕ್ಕದವರ ಸಹಾಯವನ್ನು ಕೇಳಿ ಅವರನ್ನು ಅಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗುತ್ತದೆ ಸರ್ಕಾರಿ ಆಸ್ಪತ್ರೆ ವೈದ್ಯರು ಅವರ ಪತಿಯ ಹಲವಾರು ವೈದ್ಯಕೀಯ ಟೆಸ್ಟ್ ಗಳನ್ನು ಮಾಡಿಸಿ ನಂತರ ಇಲ್ಲಿ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಕೊನೆಗೆ ಅವರನ್ನು ಅಲ್ಲೇ ಹತ್ತಿರ ಇದ್ದಂತಹ ಭರಹಮತಿ ಟರ್ಮಿನಲ್ ಆಸ್ಪತ್ರೆಗೆ ದಾಖಲಾತಿ ಮಾಡುವಂತೆ ಸೂಚಿಸುತ್ತಾರೆ ಇದನ್ನು ಕೇಳಿದವರು ತಬ್ಬಿಬ್ಬಾಗುತ್ತಾರೆ

ಕಾರಣವೇನೆಂದರೆ ತಮ್ಮ ಮಕ್ಕಳ ಮದುವೆ ಮಾಡಿದ ನಂತರ ಅವರು ಅಕ್ಷರಶಃ ಬರಿಗೈಯಲ್ಲಿ ಜೀವನ ಸಾಗಿಸುತ್ತಿದ್ದರು ಇನ್ನೂ ಹೆಣ್ಣುಮಕ್ಕಳು ಅವರ ಗಂಡನ ಮನೆಯಲ್ಲಿ ಸುಖವಾಗಿ ಸಂಸಾರ ಮಾಡುತ್ತಿದ್ದರು ಅವರ ಬಳಿ ಇರೋದು ಸ್ವಾಭಿಮಾನ ಒಂದೇ ಇನ್ನೂ ಎಷ್ಟೇ ಕಷ್ಟ ಬಂದರೂ ಸಂಬಂಧಿಕರು ಅಕ್ಕಪಕ್ಕದವರ ಹತ್ತಿರ ಯಾವುದೇ ಕಾರಣಕ್ಕೂ ಕೈಚಾಚುವ ಮನೋಭಾವ ಹೊಂದಿರಲಿಲ್ಲ ಅಲ್ಲಿನ ಆಸ್ಪತ್ರೆಗೆ ದಾಖಲಾತಿ ಮಾಡಿಕೊಂಡ ವೈದ್ಯರೂ ಅದರ ಎಂ ರ್ ಐ ಸ್ಕ್ಯಾನ್ ಚಿಕಿತ್ಸೆಗೆ ಐದಾರು ಸಾವಿರ ಬೇಕು ಎಂದು ಹೇಳುತ್ತಾರೆ ಆದರೆ ಆಕೆಯ ಬಳಿ ಹಣವಿರುವುದಿಲ್ಲ ಸ್ವಾಭಿಮಾನವನ್ನು ಬಿಟ್ಟು ಸಂಬಂಧಿಕರ ಬಳಿ ಹಣವನ್ನು ಕೇಳುತ್ತಾರೆ ತಮ್ಮ ಬಳಿಇದ್ದ ಅಷ್ಟು ಇಷ್ಟು ಹಣವನ್ನು ಸಂಬಂಧಿಕರು ನೀಡುತ್ತಾರೆ

ಕೊನೆಗೆ ಸ್ಕ್ಯಾನಿಂಗ ಮಾಡಲು ಐದು ಸಾವಿರ ಹಣದ ಕಮ್ಮಿ ಇರುವುದು ಇದರಿಂದ ಚಿಂತೆಗೆ ಈಡಾಗಿ ಏನನ್ನು ತಿನ್ನದೆ ಕೊನೆಗೆ ತನ್ನ ಬಳಿ ಇದ್ದ ಇಪ್ಪತ್ತು ರೂಪಾಯಿ ಹಣ ಎರಡು ಸಮೋಸವನ್ನು ತೆಗೆದುಕೊಂಡು ಒಂದು ತನ್ನ ಪತಿಗೆ ಹಾಗೂ ಇನ್ನೊಂದು ತನ್ನಗೆ ತೆಗೆದುಕೊಂಡು ತಿನ್ನಲು ಶುರು ಮಾಡುತ್ತಾರೆ ಕೊನೆಗೆ ಪೇಪರ್ ಅನ್ನು ಬಿಸಾಡಲು ಹೋದಾಗ ಅಲ್ಲಿನ ಜಾಹೀರಾತನ್ನು ನೋಡಿ ಅಜ್ಜಿ ಅಲ್ಪ ಸ್ವಲ್ಪ ಅಕ್ಷರ ಜ್ಞಾನವನ್ನು ಹೊಂದಿರುವ ಅಜ್ಜಿ ಪಕ್ಕದ ಊರಿನಲ್ಲಿ ಮಾರಥನ ಬಗ್ಗೆ ಮಾಹಿತಿ ತಿಳಿದುಕೊಂಡು ಕೊನೆಗೆ ಪಕ್ಕದ ಅವರ ಹತ್ತಿರ ಓದಿ ಮನದಟ್ಟು ಮಾಡಿಕೊಳ್ಳುತ್ತಾರೆ ತಾನು ಕೂಡ ಇದರಲ್ಲಿ ಭಾಗವಹಿಸಿದಲ್ಲಿ ಪತಿಯ ಚಿಕಿತ್ಸೆಗೆ ಅಗತ್ಯವಾದ ಹಣವನ್ನು ಹೊಂಚಬಹುದು ಎಂಬ ಮಹದಾಸೆ ಯೊಂದಿಗೆ ದೃಢ ನಿರ್ಧಾರ ಮಾಡಿದರು

ಈ ಸ್ಪರ್ಧೆ ಹೆಚ್ಚುದೂರ ವಿಲ್ಲದೆ ಆಸ್ಪತ್ರೆಗೆ ಅತಿ ಸಮೀಪದಲ್ಲೇ ಇದ್ದದ್ದು ಕೊನೆಗೂ ವಿಳಾಸವನ್ನು ಅಕ್ಕಪಕ್ಕದವರನ್ನು ಕೇಳುತ್ತಾ ಕೊನೆಗೂ ಸ್ಪರ್ಧೆ ನಡೆಯುವ ಸ್ಥಳಕ್ಕೆ ತಲುಪುತ್ತಾರೆ ಆಯೋಜಕರಿಗೆ ತನ್ನ ಹೆಸರನ್ನುನೀಡಿದಾಗ ಅವರು ಅಜ್ಜಿಯನ್ನು ಒಮ್ಮೆ ಅಡಿಯಿಂದ ಮುಡಿಯವರೆಗೂ ನೋಡಿ ನಿಮ್ಮಿಂದ ಈ ಸ್ಪರ್ಧೆಯನ್ನು ಓಡಲು ಹಾಗೂ ಗೆಲ್ಲಲು ಸಾಧ್ಯವೇ ಎಂದು ಅಣಕಿಸುತ್ತಾರೆ ಕೊನೆಗೆ ತನ್ನ ಕಷ್ಟವನ್ನು ಅವರಲ್ಲಿ ಹೇಳಿಕೊಂಡಾಗ ಆಯೋಜಕರು ಯಾವುದೇ ಶುಲ್ಕವಿಲ್ಲದೆ ಈ ಸ್ಪರ್ಧೆ ಆಯೋಜಿಸಿದ ಕಾರಣ ಹಾಗಾಗಿ ಅಜ್ಜಿಗೆ ಅವಕಾಶವನ್ನು ನೀಡುತ್ತಾರೆ ಸಾಮಾನ್ಯವಾಗಿ ಮ್ಯಾರಥಾನ್ ಎಂದರೆ ಇಂದಿನ ಯುಗದಲ್ಲಿ ಒತ್ತಡ ಜೀವನ ಬಿಡುವಿಲ್ಲದ ಕೆಲಸ ಮಾಡುವವರ ಉದ್ಯಮಿಗಳಿಗೆ ಹಾಗೂ ಯುವಕರಿಗೆ ಒಂದು ಸ್ಪರ್ಧೆಯಾಗಿದೆ ಅಲ್ಲಿ ಹಲವಾರು ಜನರ ಮಧ್ಯೆ ಅಜ್ಜಿಯು ದೃತಿಗೆಡದೆ ಉಟ್ಟಿದ್ದ ಸೀರೆಯನ್ನು ಕಚ್ಚೆಯಂತೆ ಕಟ್ಟಿ ಹವಾಯಿ ಚಪ್ಪಲಿ ಹಾಕಿಕೊಂಡು ತಾನು ಸ್ಪರ್ಧೆಗೆ ಇಳಿಯುತ್ತಾರೆ

ಆರಂಭವಾದ ನಂತರತಾನು ಇಳಿವಯಸ್ಸಿನಲ್ಲಿಯೂ ನಾನು ಒಬ್ಬ ಸ್ಪರ್ಧಿಯಂತೆ ಓಡಿ ಮದ್ಯದಲ್ಲಿ ಚಪ್ಪಲಿ ಕಿತ್ತು ಹೋದರು ಕೂಡ ಬರಿಗಾಲಿನಲ್ಲಿ ಓಡಿ ಕೊನೆಗೆ ಆ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ ಈ ಅಜ್ಜಿಯ ಧೈರ್ಯ ಹಾಗೂ ಆಕೆಯ ಆತ್ಮಸ್ಥೈರ್ಯ ಅಲ್ಲಿ ಇರುವ ಎಲ್ಲರೂ ತಲೆಬಾಗುತ್ತಾ ಪ್ರಶಸ್ತಿಯ ಐದು ಸಾವಿರ ಹಣವನ್ನು ಆಕೆಗೆ ನೀಡುತ್ತಾರೆ ಹಾಗು ಆಕೆಯ ಕಷ್ಟ ತಿಳಿದ ಹಲವಾರು ದಾನಿಗಳು ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ನೀಡಿ ಅಜ್ಜನಿಗೆ ಒಳ್ಳೆಯ ಚಿಕಿತ್ಸೆ ನೀಡಿ ಕೊನೆಗೆ ಗುಣ ಮುಖ ಹೊಂದುತ್ತಾರೆ ಈ ಘಟನೆ 2014ರಲ್ಲಿ ನಡೆದಿದ್ದು 2020 ಜನವರಿ ಅಲ್ಲಿ ಇವರ ಈ ಪ್ರೇಮದ ಕತೆಯನ್ನು ಅಲ್ಲಿನ ಮರಾಠಿ ಅಲ್ಲಿ ಬಯೋಪಿಕ್ ಆಗಿ ನಿರ್ಮಾಣ ಆಗಿತ್ತು ಇದನ್ನು ನೋಡಿದ ಜನರು ಆಕೆಯನ್ನು ಆದುನಿಕ ಅನುಸೂಯಾ ಎಂದೇ ನಾಮಕರಣ ಮಾಡಿದ್ದಾರೆ

ಇನ್ನೂ ಇವರ ಕತೆಗೆ ನ್ಯಾಷನಲ್ ಅವಾರ್ಡ್ ಕೂಡ ಬಂದಿದೆ ಜೀವನದಲ್ಲಿ ಏನೆಲ್ಲಾ ಕಷ್ಟ ಬಂದರು ಕೂಡ ಎಲ್ಲು ಧೃತಿಗೆಡದೆ ಸಂಗಾತಿಯೊಂದಿಗೆ ಒಲವು ಪ್ರೀತಿ ಹಾಗೂ ಅನುಕರಣೆ ಇದ್ದಲ್ಲಿ ಈ ತರಹ ಸಾಮರಸ್ಯ ಜೀವನ ಸಾಧ್ಯ ಎಂಬುದು ಸಾಬೀತು ಆಗುವುದು ಇನ್ನು ಇದರಿಂದ ನಮ್ಮ ಆಧುನಿಕ ಜೀವನ ಜನರಿಗೆ ಇವರ ಈ ಸಾಹಸ ಕಥೆ ಒಂದು ಪಾಠ ಎಂದರೆ ಸುಳ್ಳಲ್ಲ ಸಣ್ಣ ಸಣ್ಣ ಜಗಳ ಅಥವಾ ಕೋಪಕ್ಕು ಕೂಡ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುವ ಜನರಿಗೆ ಇವರನ್ನು ನೋಡಿ ತಿಳಿದುಕೊಳ್ಳಬೇಕು.

Leave a Reply

Your email address will not be published. Required fields are marked *