ಗಂಡ ಹೆಂಡತಿ ನಡುವೆ ಮೂರನೆಯವಳು ಬಂದಾಗ ಏನಾಗುತ್ತೆ ನೋಡಿ, ರಿಯಲ್ ಕಹಾನಿ

0 6,698

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಇತೀಚಿನ ದಿನಗಳಲ್ಲಿ ಮದುವೆಯಾದ ಪುರುಷರು ಪರ ಸ್ತ್ರೀಯರ ಸಹವಾಸಕ್ಕೆ ಹೋಗುವುದು ಹೆಚ್ಚಾಗಿವೆ ಇದರಿಂದ ಸಂಸಾರ ಹಾಳಾಗುತ್ತದೆ. ಯುವತಿಯ ಜೊತೆ ಗಂಡನನ್ನು ನೋಡಿದ ಮಹಿಳೆ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಎರಡು ಘಟನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಗಂಡ-ಹೆಂಡತಿಯ ನಡುವೆ ಬೇರೊಬ್ಬರು ಬಂದಾಗ ಸಂಸಾರವೆ ಹಾಳಾಗುತ್ತದೆ. ಅದು ಗಂಡಿರಲಿ, ಹೆಣ್ಣಿರಲಿ ಅಕ್ರಮ ಸಂಬಂಧದಿಂದ ಅದೆಷ್ಟೊ ಸಂಸಾರಗಳು ಹಾಳಾಗಿವೆ. ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಹೋಟೆಲ್ ಎದುರು ಕಾರಿನಲ್ಲಿ ತನ್ನ ಗಂಡನ ಜೊತೆ ಬೇರೆ ಯುವತಿ ಇರುವುದನ್ನು ನೋಡಿದ ಮಹಿಳೆ ಆ ಕಾರಿಗೆ ಅಡ್ಡಹಾಕಿ ಕಾರಿನಿಂದ ಗಂಡನ ಪ್ರೇಯಸಿಯನ್ನು ಕೆಳಗಿಳಿಸಿ ಮನಬಂದಂತೆ ಆಕೆಗೆ ಥಳಿಸಿದ್ದಾಳೆ ಇದರಿಂದ ಅವಮಾನಗೊಂಡ ಆ ಯುವತಿ ತನ್ನ ಮುಖ ಕಾಣದಂತೆ ದುಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆ ದುಪಟ್ಟಾವನ್ನು ಎಳೆದು ನಿನಗೆ ಇಂತಹ ಕೆಲಸ ಮಾಡುವಾಗ ನಾಚಿಕೆಯಾಗಲಿಲ್ವ, ಈಗ ಯಾಕೆ ಮುಖ ಮುಚ್ಚಿಕೊಳ್ಳುತ್ತಿದ್ದೀಯಾ? ಎಂದು ಕಿಡಿ ಕಾರಿದ್ದಾಳೆ ಅಲ್ಲದೆ ಗಂಡನತ್ತ ಹೋಗಿ ಇವಳು ಯಾರು ಎಂಬುದು ನನಗೆ ಈಗಲೆ ಗೊತ್ತಾಗಬೇಕು, ಅವಳ ಜೊತೆ ಯಾಕೆ ಸುತ್ತಾಡುತ್ತಿದ್ದೀರ ಎಂದು ಕಿರುಚಾಡಿದ್ದಾಳೆ.

ಹೆಂಡತಿಯ ಪ್ರಶ್ನೆಗಳಿಗೆ ಉತ್ತರಿಸದ ಆತ ತನ್ನ ಪ್ರೇಯಸಿಯನ್ನು ಹೆಂಡತಿಯಿಂದ ಕಾಪಾಡಲು ಪ್ರಯತ್ನಿಸಿದ್ದಾನೆ. ಹೋಟೆಲ್ ರೂಮ್ ಬುಕ್ ಮಾಡಿದ್ದ ಗಂಡ ಮತ್ತು ಆತನ ಪ್ರೇಯಸಿ ಅದೆ ಹೋಟೆಲ್​ ಎದುರು ಇನ್ನೇನು ಕಾರು ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಹೆಂಡತಿ ಎದುರು ಬಂದಿದ್ದಾಳೆ. ಈಗಾಗಲೆ ಗಂಡನ ವರ್ತನೆ ಬಗ್ಗೆ ಅನುಮಾನಗೊಂಡ ಹೆಂಡತಿ ಆತನನ್ನು ಹಿಂಬಾಲಿಸಿದ್ದಳು. ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಡಿಯೊ ಭಾರೀ ವೈರಲ್ ಆಗಿದೆ. ಅದೆ ರೀತಿ ಗುಜರಾತ್ ನಲ್ಲಿಯೂ ಇಂತದ್ದೆ ಒಂದು ಘಟನೆ ನಡೆದಿದೆ

ತನ್ನ ಗಂಡ ಬೇರೊಬ್ಬಳೊಂದಿಗೆ ಹೋಟೆಲ್ ರೂಮ್ ನಲ್ಲಿ ಸರಸ-ಸಲ್ಲಾಪ ನಡೆಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಕೆಂಡಾಮಂಡಲವಾದ ಹೆಂಡತಿ ಆ ಯುವತಿಯನ್ನು ರೂಮಿನಿಂದ ಹೊರಗೆ ಎಳೆದುಕೊಂಡು ಬಂದು ಕೆನ್ನೆಗೆ ಹೊಡೆದಿದ್ದಾಳೆ. ತನ್ನ ಮಗಳ ಜೊತೆ ಶಾಪಿಂಗ್​ಗೆ ಹೋಗಿದ್ದ ಮಹಿಳೆ ಹೋಟೆಲ್​ಗೆ ಊಟಕ್ಕೆ ಹೋಗಿದ್ದಳು ಅದೆ ಹೊಟೇಲ್ ನಲ್ಲಿ ತನ್ನ ಗಂಡ ಬೇರೊಬ್ಬಳೊಂದಿಗೆ ಹೋಟೆಲ್ ರೂಮಿನೊಳಗೆ ಹೋಗಿದ್ದನ್ನು ನೋಡಿದ ಆಕೆ ಆ ರೂಮಿನಿಂದ ಗಂಡನ ಪ್ರೇಯಸಿಯನ್ನು ಎಳೆದುಕೊಂಡು ಬಂದಿದ್ದಾಳೆ.

ಮಹಿಳೆ ಮತ್ತು ಆಕೆಯ ಮಗಳು ಸೇರಿ ರೂಮಿನಲ್ಲಿದ್ದ ಯುವತಿಯನ್ನು ಎಳೆದುಕೊಂಡು ಬಂದು ಬಟ್ಟೆಯಿಲ್ಲದೆ ರೂಮಿನಿಂದ ಹೊರಗೆ ಹೋಗಬೇಕೆಂದು ಗಲಾಟೆ ಮಾಡಿದ್ದಾರೆ. ನಂತರ ಆ ಯುವತಿಯ ಜೊತೆಗೆ ತನ್ನ ಗಂಡನಿಗೂ ಎಲ್ಲರೆದುರು ಹೊಡೆದಿರುವ ಆಕೆ ಮಾಡಿದ ಹೈಡ್ರಾಮದಿಂದ ಗಂಡನ ಅನೈತಿಕ ಸಂಬಂಧ ಬಟಾ ಬಯಲಾಗಿದೆ. ಈ ರೀತಿ ಅಕ್ರಮ ಸಂಬಂಧ ಹೊಂದಿದ ಪುರುಷರ ಒಂದು ದೊಡ್ಡ ಲೀಸ್ಟೆ ಸಿಗುತ್ತದೆ. ಹೀಗೆ ಮುಂದುವರೆದರೆ ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆ ಇಲ್ಲದಂತಾಗುತ್ತದೆ. ಈ ಎರಡು ಘಟನೆಯನ್ನು ಓದಿದ ನಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Leave A Reply

Your email address will not be published.