ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು ದೊಡ್ಡವರು ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನುಗಳನ್ನು ನಾವು ಕಾಣಬಹುದು. ಆದರೆ ಇವುಗಳಿಂದ ಉಂಟಾಗುವ ಲಾಭ ಅಥವಾ ಉಪಯೋಗಕ್ಕಿಂತ ಅನಾನುಕೂಲತೆ ಮತ್ತು ದುರ್ಬಳಕೆ ಹೆಚ್ಚು. ಆದರೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಬುದ್ಧಿವಂತಿಕೆಯಿಂದ 13 ವರ್ಷದ ಅಯಾನ್ ಚಾವ್ಲಾ ಎಂಬ ಹುಡುಗ ಭಾರತದ ಅತ್ಯಂತ ಕಿರಿಯ ಸಿಇಓ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಯಾನ್ ಚಾವ್ಲಾ ಸಿಇಓ ಆಗಿದ್ದು ಹೇಗೆ ಎಂಬುದರ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅಯಾನ್ ಜನಿಸಿದ್ದು 1997ರಲ್ಲಿ ದೆಹಲಿಯಲ್ಲಿ. ಅಯಾನ್ ತಂದೆ ಕುಂಜಮ್ ಚಾವ್ಲಾ ಒಬ್ಬ ಫ್ಯಾಷನ್ ಡಿಸೈನರ್. ಅಕ್ಕ ಜ್ಯೋಲ್ಷಾ ಚಾವ್ಲಾ ಸಿವಿಲ್ ಎಂಜಿನಿಯರ್. ಅಯಾನ್ 8 ವರ್ಷದಲ್ಲಿದ್ದಾಗಲೇ ತಮಗೆ ಎಂದೇ ಸ್ವಂತಕ್ಕೊಂದು ಕಂಪ್ಯೂಟರ್ ತೆಗೆದುಕೊಂಡಿದ್ದ. 8 ವರ್ಷದವನಿದ್ದಾಗ್ಲೇ ಹೆತ್ತವರು ಅಯಾನ್ ಗೆ ಕೊಡಿಸಿದ ಕಂಪ್ಯೂಟರ್ ನಲ್ಲಿ ಅಡೋಬ್ ಸಾಫ್ಟ್ ವೇರ್ ನಂತಹ ಎಡಿಟಿಂಗ್ ಟೂಲ್ ಗಳನ್ನು ಬಳಸಿ ತಾನೇ ವಿಡಿಯೋ ಎಡಿಟಿಂಗ್ ಮಾಡಲು ಆರಂಭಿಸಿದ್ರು. ಹೊಸದಾಗಿ ಏನೇ ಕಾಣಿಸಿದರೂ ಅದರಲ್ಲಿ ಏನಾದರೂ ಪ್ರಯೋಗ ಮಾಡುವ ಹವ್ಯಾಸ ಅಯಾನ್ ಗೆ ಇದ್ದಿತ್ತು. ವಿಡಿಯೋ ಗೇಮ್ಸ್ ಆಡುವುದರಿಂದ ಹಿಡಿದು ವಿಡಿಯೋ ಹಾಗೂ ಸಿನಿಮಾ ಎಡಿಟ್ ಮಾಡುವುದರಲ್ಲಿ ಕೂಡ ಅಯಾನ್ ಹಿಂದೆ ಬೀಳಲಿಲ್ಲ. ವೆಬ್ ಸೈಟ್, ಆ್ಯಪ್, ಸಾಫ್ಟ್ ವೇರ್ ಅಭಿವೃದ್ಧಿ ಪಡಿಸುವುದು ಎಲ್ಲವನ್ನೂ ಯಾರದ್ದೇ ಸಲಹೆ ಸೂಚನೆ ಸಹಾಯ ಪಡೆಯದೆ ಸ್ವತಃ ತಾವೇ ಕಲಿತರು. ಅನೇಕ ಪುಸ್ತಕಗಳನ್ನು ಓದಿದರೂ ಸಹ ಎಲ್ಲದಕ್ಕೂ ಇಂಟರ್ನೆಟ್ ಅನ್ನೇ ಅವಲಂಬಿಸಿದ್ದರು. ತಂತ್ರಜ್ಞಾನದ ಬಗ್ಗೆ ಸಾಕಷ್ಟು ತಿಳಿದಿದ್ದ ಅಯಾನ್ ಅದರಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಲೇ ಇರುತ್ತಿದ್ದ. ಶಿಕ್ಷಣ ಅನ್ನೋದು ಪ್ರತಿಯೊಬ್ಬರ ಜೀವದಲ್ಲೂ ಎಷ್ಟು ಮಹತ್ವ ಪಡೆದಿದದೆ ಅನ್ನೋದನ್ನು ಎಲ್ಲರೂ ಅವರಿಗೆ ತಿಳಿಸಿ ಹೇಳುತ್ತಾ ಇದ್ದರೂ ಸಹ ಅಯಾನ್ 9ನೇ ತರಗತಿಗೆ ಶಾಲೆ ಬಿಡುವ ನಿರ್ಧಾರ ಮಾಡಿ ಅದು ಅವರ ಬದುಕನ್ನೇ ಬದಲಾಯಿಸುತ್ತದೆ.
2011ರ ಮಾರ್ಚ್ 11ರಂದು ಅಯಾನ್ ಏಷ್ಯನ್ ಫಾಕ್ಸ್ ಡೆವಲಪ್ಮೆಂಟ್ಸ್ ಕಂಪನಿ ಒಂದನ್ನು ಸ್ಥಾಪನೆ ಮಾಡುತ್ತಾರೆ. ಈ ಕಂಪನಿ ಐಟಿ, ವೆಬ್, ಮತ್ತು ಮಾರ್ಕೆಟಿಂಗ್ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುತ್ತದೆ. ಆಮೇಲೆ, ಈ ಕಂಪನಿಯ ಜೊತೆಗೆ ಕೇವಲ ಎರಡೇ ವರ್ಷಗಳಲ್ಲಿ ಗ್ರೂಪ್ ಫಾರ್ ಬಡ್ಡೀಸ್, ಗ್ಲೋಬಲ್ ವೆಬ್ ಮೌಂಟ್ ಹಾಗೂ ಮೈಂಡ್ ಇನ್ ಅಡ್ವರ್ಟೈಸಿಂಗ್ ಎಂಬ ಮೂರು ಕಂಪನಿಗಳನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಅಯಾನ್ ತಾಯಿ ಕಂಪನಿಗಾಗಿ 10 ಸಾವಿರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದರು.
ಎಷ್ಟೋ ಬಾರಿ ಅಯಾನ್ ಅವರನ್ನು ಕಂಪನಿಯ ಸೇಲ್ಸ್ ಮನ್ ಗಳನ್ನೇ ಗಂಭೀರವಾಗಿ ಪರಿಗಣಿಸುತ್ತಾ ಇರಲಿಲ್ಲ ಲೆಕ್ಕಕ್ಕೇ ತೆಗೆದುಕೊಳ್ತಿರಲಿಲ್ಲ. ತುಂಬಾನೇ ಚಿಕ್ಕವನಾಗಿದ್ದರಿಂದ ಮೊದಲ ವರ್ಷ ಸಾಕಷ್ಟು ಕಷ್ಟ ಪಟ್ಟ ಅಯಾನ್ ಅನಂತರದಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುತ್ತಾರೆ. ಈಗಲೂ ಸಮಯ ಸಿಕ್ಕಾಗಲೆಲ್ಲ ಅಯಾನ್ ಇಂಟರ್ನೆಟ್ ನಲ್ಲಿ ಐಟಿ ಹಾಗೂ ಮಾರ್ಕೆಟ್ ಬಗ್ಗೆ ತಿಳಿದುಕೊಳ್ತಾರೆ. ಅಯಾನ್ ತನಗೆ ಕೇವಲ 18 ವರ್ಷ ಆಗುವಷ್ಟರಲ್ಲಿ 1 ಲಕ್ಷ ಗ್ರಾಹಕರನ್ನು ಸಂಪಾದಿಸಿದ್ದರು. ಅಮೆರಿಕ, ಬ್ರಿಟನ್, ಟರ್ಕಿ ಮತ್ತು ಹಾಂಗ್ ಕಾಂಗ್ ನಲ್ಲೂ ಅಯಾನ್ ಕಂಪನಿಯ ಶಾಖೆಗಳಿವೆ. ಈಗಾಗಲೇ 2 ಬಾರಿ ಅಯಾನ್ ಗೆ ‘ಯಂಗ್ ಎಂಟರ್ ಪ್ರೆನ್ಯೂರ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿದೆ. ಪ್ರಧಾನಿ ಕಾರ್ಯಾಲಯದಿಂದಲೂ ಅವರಿಗೆ ಮೆಚ್ಚುಗೆ ಪತ್ರ ಲಭಿಸಿದೆ. ಅಪರೂಪದಲ್ಲೊಬ್ಬ ಅಪರೂಪದ ಉದ್ಯಮಿ ಅಯಾನ್. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಯಾಗ ಬಯಸುವ ಅಯಾನ್ ಉತ್ತಮ ಯುವಕರಿಗೆಲ್ಲ ಮಾದರಿ ಎನ್ನಬಹುದು.