ಟಾಟಾ ಗ್ರೂಪ್ ಭಾರತದಲ್ಲಿ ಸ್ಥಾಪಿತವಾದ ಮಲ್ಟಿನ್ಯಾಷನಲ್ ಕಂಪನಿಯಾಗಿದೆ. ಇದರ ಮುಖ್ಯ ಶಾಖೆಯು ಮುಂಬೈನಲ್ಲಿ ಇದೆ. ಟಾಟಾ ಗ್ರೂಪ್ ಅನ್ನು 1868 ರಲ್ಲಿ ಜಂಶೆಡ್ಜಿ ಟಾಟಾ ರವರು ಪ್ರಾರಂಭಿಸುತ್ತಾರೆ. ಟಾಟಾ ಗ್ರೂಪ್ ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ದೊಡ್ಡ ಕಂಪನಿಯಾಗಿದೆ. ಟಾಟಾ ಗ್ರೂಪ್ ಅನೇಕ ಉದ್ಯಮಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಇನ್ನು ಅನೇಕ ಉದ್ಯಮಗಳನ್ನು ಟಾಟಾ ಗ್ರೂಪ್ ಹೊಂದಿದೆ. ಆದ್ದರಿಂದ ನಾವು ಇಲ್ಲಿ ಉದ್ಯೋಗಾವಕಾಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಟಾಟಾ ಗ್ರೂಪ್ ನ ಈಗಿನ ಚೇರ್ಮನ್ ಆಗಿ
ರತನ್ ಟಾಟಾ ಅವರು ಟಾಟಾ ಗ್ರೂಪನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ರತನ್ ಟಾಟಾ ಅವರು ಟಾಟಾ ಕಂಪನಿಯ ಎಲ್ಲಾ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ ಕಂಪನಿಯ ಲಾಭಾಂಶವನ್ನು ಹೆಚ್ಚಿಸಿದರು. ಟಾಟಾ ಕಂಪನಿಯು ಅನೇಕ ಭಾರತೀಯರಿಗೆ ಉದ್ಯೋಗ ಅವಕಾಶವನ್ನು ಒದಗಿಸಿದೆ.
ಟಾಟಾ ಮೋಟಾರ್ಸ್ ಅವರು 2021ರಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿಯ ಸಲುವಾಗಿ ಅರ್ಜಿಯನ್ನು ಆಹ್ವಾನಿಸುತ್ತಿದ್ದಾರೆ. ಟಾಟಾ ಮೋಟರ್ಸ್ ಕಂಪನಿಯು ಒಟ್ಟು 2157ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತಿದೆ. ಟಾಟಾ ಕಂಪನಿಗೆ ಅರ್ಜಿಸಲ್ಲಿಸಲು ಯಾವುದೇ ಸಮಯದ ಮಿತಿಯನ್ನು ನೀಡಿರುವುದಿಲ್ಲ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹ ಹುದ್ದೆಗಳನ್ನು ಕಂಡು ಸರಿಯಾಗಿ ಅರ್ಜಿ ಸಲ್ಲಿಸಬೇಕು. ಪ್ರತಿ ಹುದ್ದೆಗಳಿಗೂ ವಿಭಿನ್ನ ಅರ್ಹತೆ ಮತ್ತು ಅನುಭವಗಳಿಗೆ ಸಂಬಳದ ಪ್ಯಾಕೇಜ್ ಇರುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು ಅರ್ಜಿ ಸಲ್ಲಿಸುವ ಮೊದಲು ಕೆಲಸದ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.
ಟಾಟಾ ಮೋಟರ್ಸ್ ನಲ್ಲಿ ವೆಹಿಕಲ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಕೆಲಸವಾಗಿರುತ್ತದೆ. ಕೆಲಸ ಮಾಡುವ ಸ್ಥಳಗಳು ಬೆಂಗಳೂರು ಮತ್ತು ಭಾರತದಲ್ಲಿ ಇರುವ ಯಾವುದೇ ಸಿಟಿಗಳಲ್ಲಿ ಆಗಿರಬಹುದು. ವೇತನವನ್ನು ಅವರ ಕೆಲಸದ ಮೇಲೆ ಮತ್ತು ಅವರ ಅನುಭವದ ಮೇಲೆ ನಿರ್ಧಾರ ಮಾಡಲಾತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ. ಕೆಲಸ ಬಯಸುವವರು ಮುಕ್ತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.