Kannada Actor: ಚಿತ್ರರಂಗ ಎನ್ನುವುದು ರಂಗಿನ್ ದುನಿಯಾ ಆಗಿದ್ದು ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಒಂದಕ್ಕಿಂತ ಹೆಚ್ಚು ಮದುವೆ ಆಗಿರುವ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟರ ಬಗ್ಗೆ. ಈ ಸಾಲಿನಲ್ಲಿ ಮೊದಲಿಗೆ ಪವನ್ ಕಲ್ಯಾಣ್ ಬರುತ್ತಾರೆ. 1997ರಲ್ಲಿ ನಂದಿನಿ ಎನ್ನುವರನ್ನು ಮೊದಲ ಮದುವೆಯಾಗುತ್ತಾರೆ. ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗುತ್ತಾರೆ. ನಂತರ ಅವರಿಂದಲೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಪವನ್ ಕಲ್ಯಾಣ್ ರಷ್ಯಾ ಮೂಲದ ಅನಾ ಲೆಜ್ನೇವಾ ಎನ್ನುವವರನ್ನು ಮೂರನೇ ಮದುವೆಯಾಗುತ್ತಾರೆ.

Duniya vijay ದುನಿಯಾ ವಿಜಯ್ ಅವರು ಮೊದಲಿಗೆ ನಾಗರತ್ನ ಎನ್ನುವವರನ್ನು ಮದುವೆ ಆಗಿರುತ್ತಾರೆ. ನಂತರ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ಅವರು ಸದ್ಯಕ್ಕೆ ನಟಿ ಕೀರ್ತಿ ಅವರ ಜೊತೆಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಟೈಗರ್ ಪ್ರಭಾಕರ್ ಅವರು ಮೊದಲಿಗೆ ಆಲ್ಫಾಂಸೋ ಎನ್ನುವವರನ್ನು ಮದುವೆಯಾಗುತ್ತಾರೆ. ನಂತರ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಕನ್ನಡ ಚಿತ್ರರಂಗದ ಖ್ಯಾತ ನಟಿ ಜಯಮಾಲಾ ಅವರನ್ನು ಮದುವೆಯಾಗುತ್ತಾರೆ. ಅವರಿಂದಲೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಟೈಗರ್ ಪ್ರಭಾಕರ್ ಬೇಬಿ ಅಂಜು ಅವರನ್ನು ಮೂರನೇ ಮದುವೆಯಾಗುತ್ತಾರೆ.

ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹೆಸರನ್ನು ಗಳಿಸಿರುವ ಪ್ರಕಾಶ್ ರೈ ಅವರು ಮೊದಲಿಗೆ ತಮಿಳು ಮೂಲದ ನಟಿ ಲಲಿತ ಕುಮಾರಿ ಅವರನ್ನು ಮದುವೆಯಾಗುತ್ತಾರೆ. ನಂತರ ಅವರಿಂದ ಡಿವೈಡ್ಸ್ ಪಡೆದುಕೊಳ್ಳುವ prakash rai ಪ್ರಕಾಶ್ ರೈ ಬಾಲಿವುಡ್ ಮೂಲದ ಕೊರಿಯೋಗ್ರಾಫರ್ ಆಗಿರುವ ಬೋನಿವರ್ಮ ಅವರನ್ನು ಎರಡನೇ ಮದುವೆಯಾಗುತ್ತಾರೆ. ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್ ಎಂಬುದಾಗಿ ಹೆಸರನ್ನು ಹೊಂದಿರುವ ಪ್ರಭುದೇವ ಅವರು ಮೊದಲಿಗೆ ರಾಮಲತಾ ಎನ್ನುವವರನ್ನು ಮದುವೆಯಾಗಿ ನಂತರ ಅವರಿಗೆ ಡಿವೋರ್ಸ್ ನೀಡುತ್ತಾರೆ. ನಂತರ ನಯನತಾರಾ ಅವರ ಜೊತೆಗೆ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಇದ್ದು ಮದುವೆ ಆಗುವ ಸಂದರ್ಭದಲ್ಲಿ ಇಬ್ಬರು ಕೂಡ ದೂರವಾಗುತ್ತಾರೆ.

ತಮಿಳು ಚಿತ್ರರಂಗದ ಲೆಜೆಂಡರಿ ನಟ ಕಮಲ್ ಹಾಸನ್ ಅವರು ಮೊದಲಿಗೆ ವಾಣಿ ಗಣಪತಿ ಎನ್ನುವವರನ್ನು ಮದುವೆಯಾಗುತ್ತಾರೆ. ನಂತರ ಅವರಿಂದ ದೂರವಾಗಿ ಖ್ಯಾತ ನಟಿ ಸಾರಿಕಾ ಅವರನ್ನು ಮದುವೆಯಾಗುತ್ತಾರೆ. ಅವರಿಂದಲೂ ಕೂಡ ದೂರವಾಗುವ ಕಮಲ್ ಹಾಸನ್ ಅವರು ಕೊನೆಗೆ ಗೌತಮಿ ಅವರನ್ನು ಮದುವೆಯಾಗುತ್ತಾರೆ. ಇವರೇ ಗೆಳೆಯರೇ ಒಂದಕ್ಕಿಂತ ಹೆಚ್ಚು ಮದುವೆ ಆಗಿರುವ ಸೌತ್ ಇಂಡಿಯಾ ಫಿಲಂ ಇಂಡಸ್ಟ್ರಿಯ ಸೆಲೆಬ್ರಿಟಿಗಳು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Reply

Your email address will not be published. Required fields are marked *