ಭಾರತದ ಶ್ರೀಮಂತ ಹಳ್ಳಿ ಯಾವುದು ಗೊತ್ತೇ? ಇಲ್ಲಿ ಎಲ್ಲರೂ ಕೋಟ್ಯಧಿಪತಿಗಳೇ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

indian richest village ನಗರದಲ್ಲಿ ಅಭಿವೃದ್ಧಿ ಕಾಣುವುದು, ಬದಲಾವಣೆಗಳನ್ನು ನೋಡುವುದು ಸರ್ವೇಸಾಮಾನ್ಯ ಆದರೆ ನಗರಕ್ಕೂ ಮೀರಿ ಹಳ್ಳಿ ಬೆಳೆಯುವುದು ಸುಲಭವಲ್ಲ ಆದರೆ ಇಲ್ಲೊಂದು ಹಳ್ಳಿ ನಗರಗಳಿಗಿಂತ ಹೆಚ್ಚು ಅಭಿವೃದ್ಧಿಯಾಗಿದೆ. ಅದು ಯಾವ ಹಳ್ಳಿ, ಎಲ್ಲಿದೆ, ಹೇಗೆ ಅಭಿವೃದ್ಧಿಯಾಗಿದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಳ್ಳಿ ಎಂದರೆ ಮೂಗು ಮುರಿಯುವವರು ಅದೆಷ್ಟೋ ಜನ. ಹಳ್ಳಿ ಎಂದರೆ ನಮ್ಮ ಕಣ್ಣೆದುರಿಗೆ ಬರುವ ಚಿತ್ರಣವೆಂದರೆ ಕಚ್ಚಾ ಪಕ್ಕಾ ಮನೆಗಳು, ಎತ್ತಿನ ಬಂಡಿ, ರಸ್ತೆಯೇ ಕಾಣದ ಮಣ್ಣಿನ ರಸ್ತೆಗಳು, ಹೊಲ ಗದ್ದೆಗಳು. ಆದರೆ ಗುಜರಾತ್ ರಾಜ್ಯದಲ್ಲಿರುವ ಧರ್ಮಜ ಎಂಬ ಹಳ್ಳಿ, ಈ ಹಳ್ಳಿಯ ಹೆಸರು ವಿಚಿತ್ರವಾಗಿದೆ ಅನಿಸಬಹುದು ಆದರೆ ಈ ಹಳ್ಳಿಯನ್ನು ನೋಡಿದರೆ ಆಶ್ಚರ್ಯವೇ ಆಗುತ್ತದೆ.

ಭಾರತದ ಈ ಹಳ್ಳಿಯಲ್ಲಿ ಅನ್ಯ ಹಳ್ಳಿಗಳಲ್ಲಿದ್ದಂತೆ ಕಚ್ಚಾ ಮನೆಗಳಿಲ್ಲ, ಧೂಳು ತುಂಬಿದ ಮಣ್ಣಿನ ರಸ್ತೆಗಳಿಲ್ಲ, ರಸ್ತೆಗಳಲ್ಲಿ ಎತ್ತಿನ ಬಂಡಿ ತಿರುಗಾಡುವುದಿಲ್ಲ ಬದಲಾಗಿ ಈ ಹಳ್ಳಿಯ ಜನ ಮರ್ಸಿಡಿಸ್, ಬಿಎಂಡಬ್ಲ್ಯು, ಆಡಿ ಕಾರುಗಳಲ್ಲಿ ಓಡಾಡುತ್ತಾರೆ. ಈ ಹಳ್ಳಿಯನ್ನ ನೋಡಿದರೆ ಅದನ್ನು ಮಿನಿ ಲಂಡನ್ ಅಂತ ಕರೆದರೆ ತಪ್ಪಾಗಲಾರದು. ಇಲ್ಲಿನ ಜನ ನಗರವಾಸಿಗಳು ಹಾಗೂ ಹಳ್ಳಿಗರಂತೆ ಎರಡೂ ರೀತಿಯ ಜೀವನವನ್ನು ನಡೆಸುತ್ತಿದ್ದಾರೆ. ಧರ್ಮಜ ಹಳ್ಳಿಯ ವಿಶೇಷತೆಯೆಂದರೆ ಈ ಹಳ್ಳಿ ಇಡೀ ದೇಶದಲ್ಲೇ ಆರ್ಥಿಕವಾಗಿ ಸಂಪನ್ನವಾದ ಹಳ್ಳಿಯೆಂದೇ ಖ್ಯಾತವಾಗಿದೆ ಅಷ್ಟೇ ಅಲ್ಲದೆ ಕೆಲವರು ಈ ಹಳ್ಳಿಯು ಸರ್ಕಾರದ ಸಹಾಯದಿಂದ ಶ್ರೀಮಂತವಾಗಿದೆ ಎಂದು ತಿಳಿದುಕೊಳ್ಳುತ್ತಾರೆ ಅದು ತಪ್ಪು ಈ ಹಳ್ಳಿಯ ಜನ ಸರ್ಕಾರದ ಯೋಜನೆಯಿಂದಾಗಲಿ ಅಥವಾ ಸರ್ಕಾರದ ಸಹಾಯದಿಂದ ಇಷ್ಟು ಶ್ರೀಮಂತವಾಗಿಲ್ಲ‌.

ಧರ್ಮಜ ಹಳ್ಳಿಯಲ್ಲಿನ ಜನ ವಿದೇಶದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿನ ಜನ ತಮ್ಮ ಹಳ್ಳಿಯ ಅಭಿವೃದ್ಧಿಗಾಗಿ ವಿದೇಶದಿಂದ ಸಾಕಷ್ಟು ಹಣ ಕಳಿಸುತ್ತಾರೆ. ಇದರಿಂದಾಗಿ ಈ ಹಳ್ಳಿಯಲ್ಲಿ ಅಭಿವೃದ್ಧಿ ಹಾಗು ಶ್ರೀಮಂತಿಕೆ ಕಂಡು ಬರುತ್ತದೆ. ಬಹುಶಃ ಭಾರತದ ಇತಿಹಾಸದಲ್ಲೇ ಧರ್ಮಜ ಹಳ್ಳಿಯ ಬಗ್ಗೆ ಮಾತ್ರ ಇತಿಹಾಸ, ವರ್ತಮಾನ ಹಾಗೂ ಭೂಗೋಳದ ಬಗ್ಗೆ ಸಾಕಷ್ಟು ಟೇಬಲ್‌ಬುಕ್ ಗಳು ಪ್ರಕಾಶಿತವಾಗಿವೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಈ ಹಳ್ಳಿಯದ್ದೇ ಆದ ಒಂದು ವೆಬಸೈಟ್ ಕೂಡ ಇದೆ. ಹಳ್ಳಿಗಾಗಿ ಒಂದು ವಿಶೇಷವಾದ ಹಾಡು ಕೂಡ ಇದೆ.

ಈ ಹಳ್ಳಿಯವರು ತಮ್ಮ ಹಳ್ಳಿಯ 1,500 ಕುಟುಂಬಗಳು ಬ್ರಿಟನ್ ನಲ್ಲಿ, 200 ಕೆನಡಾದಲ್ಲಿ, 300 ಕ್ಕಿಂತ ಹೆಚ್ಚು ಅಮೇರಿಕಾದಲ್ಲಿ ಕುಟುಂಬಗಳು ವಾಸವಾಗಿದ್ದಾರೆ ಎಂದು ಹೇಳಿದರು. ಧರ್ಮಜ ಹಳ್ಳಿಯ ಪ್ರತಿಯೊಂದು ಕುಟುಂಬದಲ್ಲೂ 5 ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದು ಈ ಹಳ್ಳಿಯ ಜನರು ಮಾಹಿತಿ ನೀಡಿದ್ದಾರೆ. ಅವರು ತಮ್ಮ ಹಳ್ಳಿಯ ಎಷ್ಟು ಜನ ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಲೆಕ್ಕವಿಡಲು ಒಂದು ಡೈರೆಕ್ಟರಿಯನ್ನೇ ಮಾಡಿಟ್ಟಿದ್ದಾರೆ ಅದರಲ್ಲಿ ಯಾವ ಕುಟುಂಬದ ಯಾವ ಸದಸ್ಯರು ಯಾವ ರಾಷ್ಟ್ರದಲ್ಲಿದ್ದಾರೆ, ಯಾವ ದಿನ ಅವರು ವಿದೇಶಕ್ಕೆ ತೆರಳಿದ್ದಾರೆ, ಅವರ ಕುಟುಂಬದ ಪ್ರತಿಯೊಂದು ಮಾಹಿತಿಯನ್ನು ಡೈರೆಕ್ಟರಿಯಲ್ಲಿ ದಾಖಲು ಮಾಡಿಟ್ಟಿರುತ್ತಾರೆ.

ಈ ಹಳ್ಳಿಯ ಹೆಚ್ಚು ಜನರು ಪ್ರೈವೇಟ್ ಹಾಗೂ ಸರ್ಕಾರಿ ಬ್ಯಾಂಕುಗಳಲ್ಲಿದ್ದಾರೆ, ಆ ಬ್ಯಾಂಕುಗಳಲ್ಲಿ ಹಳ್ಳಿಗರ ಹೆಸರಲ್ಲೇ ಒಂದು ಸಾವಿರ ಕೋಟಿಗೂ ಅಧಿಕ ಹಣ ಡೆಪಾಸಿಟೆಡ್ ಇದೆ. ಈ ಹಳ್ಳಿಯಲ್ಲಿ ಮೆಕ್ ಡೊನಾಲ್ಡ್ಸ್ ನಂತಹ ಪಿಜ್ಜಾ ಪಾರ್ಲರ್ ಗಳು ಇವೆ‌ ಇದರ ಹೊರತಾಗಿ ಫೇಮಸ್ ರೆಸ್ಟೋರೆಂಟ್ ಗಳ ಫ್ರ್ಯಾಂಚೈಸಿಗಳು ಇವೆ‌. ಅಲ್ಲದೇ ಆಯುರ್ವೇದಿಕ್ ಆಸ್ಪತ್ರೆಯಿಂದ ಹಿಡಿದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ಈ ಹಳ್ಳಿಯಲ್ಲಿವೆ.

ಈ ಹಳ್ಳಿಯ ಜನ ಪ್ರತಿ ವರ್ಷ ಜನೇವರಿ 12 ರಂದು ಧರ್ಮಜಡೆ ಎಂಬ ದಿನವನ್ನು ಎಲ್ಲರೂ ಸೇರಿ ಆಚರಿಸುತ್ತಾರೆ, ಅದರಲ್ಲಿ ಭಾಗವಹಿಸಲು ಪ್ರಪಂಚದ ಮೂಲೆ ಮೂಲೆಗಳಲ್ಲಿ ವಾಸವಾಗಿರುವ ಈ ಹಳ್ಳಿಯ ಜನ ತಮ್ಮ ಇಡೀ ಕುಟುಂಬ ಸಮೇತ ಧರ್ಮಜ ಹಳ್ಳಿಗೆ ಬರುತ್ತಾರೆ‌. ವಿದೇಶದಿಂದ ಬಂದ ಈ ಕುಟುಂಬಗಳು ಒಂದು ತಿಂಗಳಿನವರೆಗೆ ತಮ್ಮ ಹಳ್ಳಿಯಲ್ಲೇ ಇದ್ದು ಸಂಭ್ರಮಾಚರಣೆ ಆಚರಿಸುತ್ತಾರೆ. ತಮ್ಮ ಮಕ್ಕಳಿಗೆ ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಇತಿಹಾಸವನ್ನು ತಾವೇ ಖುದ್ದಾಗಿ ಹೇಳಿಕೊಡುತ್ತಾರೆ. ಅಬ್ಬಾ ಈ ಹಳ್ಳಿಯಲ್ಲಿ ಏನಿಲ್ಲಾ ತಂತ್ರಜ್ಞಾನ, ಸಂಸ್ಕೃತಿ ಎಲ್ಲವೂ ಇಲ್ಲೆ ಇದೆ‌‌. ನಮ್ಮ ದೇಶದ ಪ್ರತಿಯೊಂದು ಹಳ್ಳಿ ಹೀಗೆ ಅಭಿವೃದ್ಧಿ ಆದರೆ ಬಡತನ ಎನ್ನುವುದು ಇರಲಾರದು‌.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *