ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ (Group C) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಸ್ಟಾಫ್ ಕಾರ್ ಡ್ರೈವರ್ (staff car driver) ಹುದ್ದೆಗಳನ್ನು ನಿಯೋಜನೆ ಮಾಡುವ ಮೂಲಕ ಭರ್ತಿ ಮಾಡಲು ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಜನರು ವೆಬ್ಸೈಟ್’ನಲ್ಲಿ ಹೇಳಲಾಗಿರುವ ವಿದ್ಯಾ ಅರ್ಹತೆ ಮತ್ತು ಮುಂತಾದ ಷರತ್ತುಗಳನ್ನು ಪೂರೈಕೆ ಮಾಡಬೇಕು.

ಅರ್ಜಿ ಸಲ್ಲಿಸಲು 23/07/2024 ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಪಡೆಯಲು ಆಸಕ್ತಿ ಉಳ್ಳವರು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು. ಈ ನೇಮಕಾತಿಯ ಬಗ್ಗೆ ಪೂರ್ಣ ಮಾಹಿತಿ ನೋಡೋಣ ಬನ್ನಿ;

Indian Postal Department ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾ ಅರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಕೆ ಮಾಡುವ ವಿಧಾನ ಮುಂತಾದ ವಿವರಗಳನ್ನು ಮೊದಲು ತಿಳಿದು ನಂತರ ಅರ್ಜಿ ಸಲ್ಲಿಕೆ ಮಾಡಬೇಕು.

ಹುದ್ದೆಗಳ ವಿವರವನ್ನು ನೋಡೋಣ :-
ಇಲಾಖೆ : ಅಂಚೆ ಇಲಾಖೆ.
ಹುದ್ದೆಯ ಹೆಸರು : ಸ್ಟಾಫ್ ಕಾರ್ ಡ್ರೈವರ್ ( staff car driver ).
ಹುದ್ದೆಗಳ ಸಂಖ್ಯೆ : 02.ಕೆಲಸದ ಸ್ಥಳ : ನವದೆಹಲಿ ( New Delhi )

ವೇತನ ಶ್ರೇಣಿ :-ಅಂಚೆ ಇಲಾಖೆಯ ನಿಯಮಗಳ ಅನುಸಾರ ಮೂಲ ವೇತನ ರೂ. ₹19,900 – ₹63,200 ನೀಡಲಾಗುತ್ತದೆ.

ವಿದ್ಯಾ ಅರ್ಹತೆ ಏನಿರಬೇಕು :-ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆಯ ( notification ) ಅನುಸಾರ ಅಂಗೀಕೃತ ಬೋರ್ಡ್ ನಿಂದ 10 ನೇ ತರಗತಿ ಪಾಸ್ ಆಗಿರಬೇಕು. ಚಾಲ್ತಿಯಲ್ಲಿ ಇರುವ ವಾಹನಾ ಚಾಲನಾ ಪರವಾನಗಿಯನ್ನು ( driving  licence ) ಹೊಂದಿರಬೇಕು.

ವಯೋಮಿತಿ :-ಅರ್ಜಿದಾರರು ಗರಿಷ್ಟ ಎಂದರೆ 56 ವರ್ಷದವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಆಯ್ಕೆ ವಿಧಾನ ಹೇಗಿರುತ್ತೆ?
ಸ್ಪರ್ಧಾತ್ಮಕ ಪರೀಕ್ಷೆ / ಕೌಶಲ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಹಾಕುವುದು ಹೇಗೆ?
ಅರ್ಹ ಮತ್ತು ಆಸಕ್ತ ಉಳ್ಳವರು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್’ಗೆ ಹೋಗಿ. ಇಲಾಖೆಯ ವೆಬ್ಸೈಟ್’ಗೆ ಹೋಗಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. www.indianpost.gov.in  ವೆಬ್ಸೈಟ್’ನಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ದಿನಾಂಕ 23/07/2024 ರ ಒಳಗಾಗಿ Speed Post / Register Post ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವ ದಿನಾಂಕಗಳು:
ಅರ್ಜಿ ಆನ್ಲೈನ್ ಮುಖಾಂತರ ಸಲ್ಲಿಸುವ ಕೊನೆಯ ದಿನಾಂಕ :- 23/07/2024ಅರ್ಜಿ ನಮೂನೆ/ Application Form ಮತ್ತು ಅಧಿಸೂಚನೆ/ Notification ಲಿಂಕ್’ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!