ಇಂತಹ ಹುಡುಗರನ್ನ ಎಲ್ಲ ಹುಡುಗಿಯರು ಇಷ್ಟಪಡ್ತಾರಂತೆ ನೋಡಿ..

0 0

ಹುಡುಗಿಯರಾಗಲಿ ಹುಡುಗರಾಗಲಿ ತಮ್ಮ ಜೀವನಸಂಗಾತಿ ಹೀಗೆ ಇರಬೇಕು ಎಂಬ ಆಸೆ ಕಲ್ಪನೆಗಳಿರುತ್ತವೆ. ತಾವು ಇಷ್ಟಪಟ್ಟವರು ತಮ್ಮೊಂದಿಗೆ ಹೇಗಿರುತ್ತಾರೆ ಎನ್ನುವುದರ ಮೇಲೆ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾದರೆ ಹುಡುಗಿಯರು ಹುಡುಗರಲ್ಲಿ ಇಷ್ಟಪಡುವ ಗುಣಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಯೊಬ್ಬ ಹುಡುಗಿಯು ತನ್ನನ್ನು ಪ್ರೀತಿಸುವ ಹುಡುಗ ಹೀಗೆ ಇರಬೇಕು ಎಂಬ ಆಸೆ ಕನಸುಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ತಮಗೆ ಗೌರವ ಕೊಡಲಿ ಎಂದು ಬಯಸುತ್ತಾರೆ. ಅದರಂತೆ ತನ್ನನ್ನು ಹೆಚ್ಚು ಗೌರವಿಸುವ ಹುಡುಗನನ್ನು ಇಷ್ಟಪಡುತ್ತಾರೆ. ಹುಡುಗಿಯು ತನ್ನ ನಿರ್ಧಾರಗಳನ್ನು, ತನ್ನ ಮಾತನ್ನು, ತನ್ನ ಸಂತೋಷವನ್ನು ಗೌರವಿಸುವ ಹುಡುಗನನ್ನು ಇಷ್ಟಪಡುತ್ತಾಳೆ.

ಹುಡುಗಿಯರು ಪ್ರಾಮಾಣಿಕ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ. ಹುಡುಗರು ಇಷ್ಟಪಡುವ ಹುಡುಗಿಗೆ ಸುಳ್ಳು ಹೇಳುತ್ತಾರೆ ಆದರೆ ಒಮ್ಮೆ ಹೇಳಿದ ಸುಳ್ಳಿನ ಬಗ್ಗೆ ಹುಡುಗಿಗೆ ಗೊತ್ತಾದಾಗ ಅವರು ಬಹಳ ನೊಂದುಕೊಳ್ಳುತ್ತಾರೆ ಮತ್ತು ಅವರು ಎಂದಿಗೂ ಅಂತಹ ಪುರುಷನನ್ನು ಕ್ಷಮಿಸುವುದಿಲ್ಲ. ಇದರಿಂದ ಪ್ರೀತಿಯಲ್ಲಿ ವೈಮನಸ್ಸು ಉಂಟಾಗುತ್ತದೆ ಅಲ್ಲದೆ ಬೇರೆ ಬೇರೆ ಆಗುವ ಸಂಭವ ಕೂಡ ಬರುತ್ತದೆ. ಎಂಥ ಸಂದರ್ಭದಲ್ಲೂ ನಿಜವನ್ನೆ ಹೇಳುವ ಪ್ರಾಮಾಣಿಕರಾಗಿರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.

ಸಾಮಾನ್ಯವಾಗಿ ಹುಡುಗಿಯರು ತಮಗಿಂತ ಹೆಚ್ಚು ಎತ್ತರವಿರುವ ಹುಡುಗರನ್ನು ಇಷ್ಟ ಪಡುತ್ತಾರೆ. ತಮಗಿಂತ ಕುಳ್ಳಗಿರುವ ಅಥವಾ ತಮ್ಮಷ್ಟೆ ಎತ್ತರವಿರುವ ಹುಡುಗರನ್ನು ಅವರು ಇಷ್ಟಪಡುವುದಿಲ್ಲ. ಕೆಲವು ಹುಡುಗಿಯರು ರೌಡಿಯಂತೆ ವರ್ತಿಸುವ, ಸ್ಟ್ರಾಂಗ್ ಆಗಿರುವ ಹುಡುಗರನ್ನು ಇಷ್ಟ ಪಡುತ್ತಾರೆ ಏಕೆಂದರೆ ಯಾವಾಗಲೂ ಅವರು ತಮ್ಮನ್ನು ರಕ್ಷಿಸುತ್ತಾರೆ ಎಂಬ ನಂಬಿಕೆಯಿಂದ. ಕಷ್ಟದ ಸಮಯದಲ್ಲಿ ಸಲಹೆ ಕೊಡುವ, ನಿನ್ನೊಂದಿಗೆ ನಾನಿದ್ದೇನೆ ಎಂದು ಭರವಸೆ ಮೂಡಿಸುವ ಹುಡುಗರನ್ನ ಹುಡುಗಿಯರು ಇಷ್ಟಪಡುತ್ತಾರೆ. ಸಮಸ್ಯೆ ಬಂದಾಗ ಹೇಡಿತನದಿಂದ ಓಡಿಹೋಗುವ ಹುಡುಗರನ್ನು ಹುಡುಗಿಯರು ಎಂದಿಗೂ ಇಷ್ಟಪಡುವುದಿಲ್ಲ.

ಹುಡುಗಿಯರು ಸಾಮಾನ್ಯವಾಗಿ ಹೆಚ್ಚು ಮಾತನಾಡುತ್ತಿರುತ್ತಾರೆ. ಅವರೊಂದಿಗೆ ಹೆಚ್ಚು ಮಾತನಾಡುವ, ಸಲಹೆ ಕೇಳುವ, ತಮ್ಮ ಸುಖ-ದುಃಖ ಎಲ್ಲ ವಿಷಯವನ್ನು ಹಂಚಿಕೊಳ್ಳುವ, ಹುಡುಗಿಯ ಎಲ್ಲ ಮಾತಿಗೂ, ಅವರ ಭಾವನೆಗಳಿಗೂ ಸ್ಪಂದಿಸುವ ಹುಡುಗರನ್ನು ಇಷ್ಟ ಪಡುತ್ತಾರೆ. ಹುಡುಗಿಯರು ಹಾಸ್ಯಪ್ರಜ್ಞೆಯನ್ನು ಹೊಂದಿರುವ ಹುಡುಗರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹುಡುಗಿಯು ತನ್ನನ್ನು ನಗಿಸುವ, ತನ್ನ ಬೇಸರವನ್ನು ದೂರಮಾಡುವ ಸದಾ ಮುಗುಳುನಗುತ್ತಾ ತಮಾಷೆ ಮಾಡುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಹುಡುಗರು ತಾವು ಇಷ್ಟಪಡುವ ಹುಡುಗಿಗಾಗಿ ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.