ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಆಹಾರವಾಗಿದೆ ಇದರ ಸಿಪ್ಪೆ ತಿರುಳು ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು ಇನ್ನು ಇದರ ಎಲೆಯನ್ನು ಕೂಡ ಮನೆಮದ್ದಾಗಿ ಬಳಸುತ್ತಾರೆ ಅತಿಸಾರ ಉಂಟಾದಾಗ ಸೀಬೆಕಾಯಿ ಕುಡಿ ಎಲೆಯ ರಸ ಕುಡಿದರೆ ತಕ್ಷಣ ನಿಲ್ಲುವುದು
ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ದೊರೆಯುವುದರಿಂದ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಬಹುದಾಗಿದೆ ಹಾಗೆಯೇ ಸಾವಯುವ ಕೃಷಿಯ ಮೂಲಕ ಸೀಬೆ ಕಾಯಿಯನ್ನು ಬೆಳೆಯುದರಿಂದ ಹೆಚ್ಚು ಲಾಭ ಗಳಿಸಬಹುದು ಹಾಗೆಯೇ ಸೀಬೆ ಕಾಯಿ ಒಳ್ಳೆಯ ಕ್ವಾಲಿಟಿ ಯಾಗಿಯು ಬೆಳೆಯುತ್ತದೆ ನಾವು ಈ ಲೇಖನದ ಮೂಲಕ ಸೀಬೆ ಕಾಯಿಯ ಬೆಳೆಯ ಬಗ್ಗೆ ತಿಳಿದುಕೊಳ್ಳೋಣ.
ಕೆ ಎಸ್ ಸುರೇಂದ್ರ ಅವರು ಮೊದಲು ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು ಎಂಟು ವರ್ಷದ ನಂತರ ಒಂದು ಗೊಬ್ಬರದ ಅಂಗಡಿ ಮಾಡಿದರು ಕೆಎಸ್ ಸುರೇಂದ್ರ ಅವರ ಸ್ನೇಹಿತ ಆದಿಲ್ ಎನ್ನುವರು ಸೀಬೆ ಕಾಯಿಯ ಗಿಡವನ್ನು ಹಾಕಲು ತಿಳಿಸಿದರು ಹಾಗೆಯೇ ಆದಿಲ್ ಅವರು ಚತ್ತಿಸಿಗಡ್ ದಿಂದ ಸೀಬೆ ಕಾಯಿ ಗಿಡವನ್ನು ತಂದುಕೊಟ್ಟರು
ಒಂದು ಗಿಡಕ್ಕೆ ನೂರಾ ಎಂಬತ್ತು ರೂಪಾಯಿಯಂತೆ ತಂದು ಎರಡು ಎಕರೆ ಪ್ರದೇಶಕ್ಕೆ ಹಾಕಿದರು ಮೂರು ತಿಂಗಳ ನಂತರ ಗಿಡಕ್ಕೆ ಹೂವು ಬಿಡಲು ಆರಂಭವಾಯಿತು ನಂತರ ಒಂದುವರೆ ತಿಂಗಳ ನಂತರ ಕಾಯಿ ಬಿಡುತ್ತದೆ ಆರ್ಗಾನಿಕ್ ಆಗಿ ವ್ಯವಸಾಯ ಮಾಡುವ ಮೂಲಕ ಅಧಿಕ ಇಳುವರಿ ಪಡೆಯಬಹುದು ಆರ್ಗಾನಿಕ್ ವ್ಯವಸಾಯದ ಮೂಲಕ ಸೀಬೆ ಕಾಯಿ ಕ್ವಾಲಿಟಿಯಾಗಿ ಬೆಳೆಯುತ್ತದೆ .
ಸೀಬೆ ಕಾಯಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುತ್ತದೆ ಹಾಗೆಯೇ ಜೀವಾಮೃತ ಗೊಬ್ಬರ ಎಲ್ಲವನ್ನೂ ಸ್ವಲ್ಪ ಹಾಕಬೇಕು ಇದರಿಂದ ಉತ್ತಮ ಫಲ ಸಿಗಲು ಸಾಧ್ಯ ವಾಗುತ್ತದೆ ಒಂದು ಗಿಡಕ್ಕೆ ಸೀಬೆ ಕಾಯಿ ಹತ್ತ ರಿಂದ ಹದಿನೈದು ಕೇಜಿ ಯಸ್ಟು ಸೀಬೆ ಕಾಯಿ ಬಿಡುತ್ತದೆ ಎರಡು ಸಾವಿರ ಗಿಡದಲ್ಲಿ ಮೂವತ್ತೈದು ಟನ್ ಅಷ್ಟು ಸೀಬೆ ಕಾಯಿ ಬಿಡುತ್ತದೆ ಒಂದು ಕೆಜಿಗೆ ನೂರಾ ಇಪ್ಪತ್ತ ರಿಂದ ನೂರಾ ಅರವತ್ತರ ವರೆಗೆ ಬೆಲೆ ಇರುತ್ತದೆ ಕ್ವಾಲಿಟಿ ಗೆ ಅನುಗುಣವಾಗಿ ಸಿಬೇಕಾಯಿಗೆ ಬೆಲೆ ಬರುತ್ತದೆ
ಮೊದಲ ವರ್ಷದಲ್ಲಿ ಎಲ್ಲ ಖರ್ಚನ್ನು ಕಳೆದು ಎಂಟು ಲಕ್ಷದ ವರೆಗೆ ಲಾಭ ಬರುತ್ತದೆ ಹಾಗೆಯೇ ಒಂದು ವರ್ಷಕ್ಕೆ ಇಪ್ಪತ್ತರಿಂದ ಇಪ್ಪತೈದು ಲಕ್ಷ ಆದಾಯ ಬರುತ್ತದೆ ಸಾವಯುವ ಕೃಷಿಯನ್ನು ಬಳಸಿ ಹೆಚ್ಚನ ಲಾಭ ಗಳಿಸಬಹುದು .ಸೀಬೆ ಕಾಯಿ ಬೆಳೆಯುವ ಜೊತೆಗೆ ಅದರ ಪಕ್ಕದ ಖಾಲಿ ಜಾಗದಲ್ಲಿ ಸಹ ಬೇರೆ ಬೆಳೆಯನ್ನು ಬೆಳೆಯಬಹುದು ಉದಾಹರಣೆಗೆ ಮೆಕ್ಕೆ ಜೋಳ ತರಕಾರಿ ಕೊತ್ತುಂಬರಿ ಹೀಗೆ ಬೇರೆ ಬೆಳೆಯನ್ನು ಬೆಳೆಯಬಹುದು ಈ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು.
ರೈತನು ಯಾವಾಗಲೂ ಒಂದೇ ಬೆಳೆಗೆ ಅಂಟಿಕೊಂಡಿರಬಾರದು ಆಹಾರ ಬೆಳೆಗಳಾದ ಭತ್ತ ರಾಗಿ ಜೋಳ ಗೋಧಿ ಮುಂತಾದವುಗಳನ್ನು ಮಾತ್ರ ಬೆಳೆದರೆ ಅವನು ಅಭಿವೃದ್ಧಿ ಹೊಂದಿದ ರೈತನಾಗುವುದು ಅಸಾಧ್ಯ ತನ್ನ ಹೊಲದಲ್ಲಿ ವೈವಿಧ್ಯಮಯ ಬೆಳೆಗಳನ್ನು ಕೂಡಿಸಿಕೊಂಡು ಅಭಿವೃದ್ಧಿಪಡಿಸಿದರೆ ಮಾತ್ರ ಅವನ ಆರ್ಥಿಕ ಸ್ಥಿತಿಗತಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಹಾಗಾಗಿ ಸೀಬೆ ಕಾಯಿ ಬೆಳೆಯುದರಿಂದ ಹೆಚ್ಚು ಲಾಭವೇ ಹೊರತು ನಷ್ಟ ವಾಗುವುದಿಲ್ಲ ಅಧಿಕ ಇಳುವರಿಯನ್ನು ಸಾವಯುವ ಕೃಷಿ ಮಾಡುವುದರ ಮೂಲಕ ಪಡೆಯಬಹುದು ಸೀಬೆ ಕಾಯಿಗೆ ಉತ್ತಮ ಮಾರುಕಟ್ಟೆ ಇರುತ್ತದೆ ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು ತಿನ್ನಲು ರುಚಿಯಾಗಿ ಇರುತ್ತದೆ ಹಾಗಾಗಿ ಸೀಬೆ ಕಾಯಿ ಬೆಳೆಯುದರಿಂದ ಹೆಚ್ಚಿನ ಲಾಭ ಪಡೆಯಬಹುದು.