2020ರಲ್ಲಿ ಭಾರತದಲ್ಲಿ 138 ಕೋಟಿಗೂ ಹೆಚ್ಚು ಜನಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ 80 ಪರ್ಸೆಂಟ್ ಎಷ್ಟು ಜನರು ಎಲ್ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರೇ ಇದ್ದಾರೆ. ಈ ಲೇಖನದ ಮೂಲಕ ನಾವು ಗ್ಯಾಸ್ ಏಜೆನ್ಸಿ ನಾವು ತೆಗೆದುಕೊಳ್ಳುವುದು ಹೇಗೆ ಇದರಿಂದ ನಮಗೆ ಏನೆಲ್ಲ ಲಾಭಗಳಿವೆ? ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳಬೇಕೆಂದರೆ ಯಾವೆಲ್ಲ ದಾಖಲೆಗಳನ್ನು ನೀಡಬೇಕು ಇವೆಲ್ಲವುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ನಮ್ಮಲ್ಲಿ ಹೆಚ್ಚಾಗಿ ಜನರು ಉಪಯೋಗಿಸುವಂತಹ ಎಲ್ಪಿಜಿ ಗ್ಯಾಸ್ ಗಳೆಂದರೆ ಇಂಡಿಯನ್, ಎಚ್ಪಿ ಹಾಗೂ ಭಾರತ್ ಗ್ಯಾಸ್. ಇದೊಂದು ಒಳ್ಳೆಯ ಮಾರ್ಕೆಟ್ ಇರುವಂತಹ ಉತ್ತಮ ಬಿಸಿನೆಸ್ ಅಂತ ಹೇಳಬಹುದು. ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕನೆಕ್ಷನ್ ಗಳು ಬರುತ್ತಲೇ ಇರುವುದರಿಂದ ಇದನ್ನು ಉತ್ತಮ ಎಂದು ಹೇಳಬಹುದು. ಮೊದಲಿಗೆ ನಾವು ಎಲ್ಪಿಜಿ ಗ್ಯಾಸ್ ಏಜೆನ್ಸಿ ಅನ್ನು ತೆಗೆದುಕೊಳ್ಳಬೇಕು ಅಂತ ಇದ್ದರೆ ಯಾವೆಲ್ಲಾ ಅರ್ಹತೆಗಳು ಇರಬೇಕು ಅಂತ ನೋಡೋಣ. ಮೊದಲಿಗೆ ಎಲ್ಪಿಜಿ ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳುವಂತಹ ವ್ಯಕ್ತಿ ಭಾರತೀಯ ನಾಗರಿಕ ಆಗಿರಬೇಕು. ಎಸೆಸೆಲ್ಸಿ ಪಾಸಾಗಿರಬೇಕು ಹಾಗೂ ವಯಸ್ಸು 21 ವರ್ಷ ಮೇಲ್ಪಟ್ಟು 60 ವರ್ಷದ ಒಳಗೆ ಇರಬೇಕು. ವ್ಯಕ್ತಿಯ ಮೇಲೆ ಯಾವುದೇ ರೀತಿಯ ಪೊಲೀಸ್ ಕೇಸ್ ಇರಬಾರದು ಹಾಗೂ ಜಾಗ ಕೂಡ ತುಂಬಾ ಮುಖ್ಯವಾಗಿರುತ್ತದೆ.
ಇನ್ನು ಎಲ್ಪಿಜಿ ಗ್ಯಾಸ್ ಏಜೆನ್ಸಿ ಮಾಡಲು ಅಪ್ಲಿಕೇಶನ್ ಅನ್ನು ನೀಡುವ ವಿಧಾನ ಈ ರೀತಿಯಾಗಿ ಇರುತ್ತದೆ. ಫಾರ್ಮ್ ತುಂಬಿದ ನಂತರ ಅಪ್ಲಿಕೇಶನ್ ಫೀಸ್ ಅಂತ ಹಣವನ್ನು ಕಟ್ಟಬೇಕಾಗುತ್ತದೆ. ಆದರೆ ಹಣ ವ್ಯತ್ಯಾಸವನ್ನು ಹೊಂದಿದ್ದು, ಜಾಗದ ಮೇಲೆ ಅವಲಂಬಿತವಾಗಿರುತ್ತದೆ ಒಂದು ವೇಳೆ ನೀವು ನಗರಗಳಲ್ಲಿ ಅಪ್ಲಿಕೇಶನ್ ತುಂಬಿದ್ದರೆ ಜನರಲ್ ಕೆಟಗರಿ ಯವರಿಗೆ 10000 ಫೀಸ್ ಇರುತ್ತದೆ. ಓಬಿಸಿ ಕ್ಯಾಟಗರಿ ಅವರಿಗೆ 5000 ರೂಪಾಯಿ ಹಾಗೂ ಎಸ್ಸಿಎಸ್ಟಿ ಕ್ಯಾಟಗರಿ ಅವರಿಗೆ 3000 ರೂಪಾಯಿ ಫೀಸನ್ನು ತುಂಬ ಬೇಕಾಗಿರುತ್ತದೆ. ಹಳ್ಳಿಯಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಅಪ್ಲಿಕೇಶನ್ ತುಂಬುವುದಾದರೂ ಜನರಲ್ ಕೆಟಗರಿ ಯವರಿಗೆ 8000 ರೂಪಾಯಿ ಒಬಿಸಿ ಕೆಟಗರಿ ಯವರಿಗೆ 4000 ರೂಪಾಯಿ ಹಾಗೂ ಎಸ್ಸಿಎಸ್ಟಿ ಕ್ಯಾಟಗರಿ ಅವರಿಗೆ 2500 ರೂಪಾಯಿ ಫೀಸನ್ನು ತುಂಬಬೇಕಾಗುತ್ತದೆ. ಆದರೆ ನೀವು ಕಟ್ಟಿದಂತಹ ಈ ಹಣ ನಿಮ್ಮ ಅಪ್ಲಿಕೇಶನ್ ಒಂದು ವೇಳೆ ಅಪ್ರೂವಲ್ ಆದರೂ ಅದು ಆಗದೇ ಇದ್ದರೂ ಹಣ ಹಿಂದಿರುಗಿ ಕೊಡಲಾಗುವುದಿಲ್ಲ. ಇನ್ನು ಅಪ್ಲಿಕೇಶನ್ ಅಪ್ರೋವಲ್ ಆದನಂತರ ಕೆಲವೊಂದಿಷ್ಟು ದಾಖಲೆಗಳನ್ನು ಹಾಗೂ ಹತ್ತು ಪರ್ಸೆಂಟ್ ಸೆಕ್ಯೂರಿಟಿ ಡೇಪೋಸಿಟ್ ಅಂತ ತುಂಬಬೇಕಾಗುತ್ತದೆ. ಸೆಕ್ಯೂರಿಟಿ ಡೇಪೋಸಿಟ್ ನಗರಗಳಲ್ಲಿ ಆದರೆ 5,00,000 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕು ಲಕ್ಷ ರೂಪಾಯಿ ತುಂಬಬೇಕಾಗುತ್ತದೆ. ಇಷ್ಟರ ನಂತರ ನಿಮಗೆ ಏಜೆನ್ಸಿಯನ್ನು ನೀಡಲಾಗುತ್ತದೆ.
ಗ್ಯಾಸ್ ಏಜೆನ್ಸಿ ಗೆ ಅಪ್ಲೈ ಮಾಡುವುದು ಹೇಗೆ ಅಂತ ನೋಡುವುದಾದರೆ ಎಲ್ಲಿ ಎರಡು ರೀತಿಯಲ್ಲಿ ನಾವು ಅಪ್ಲೈ ಮಾಡಬಹುದು. ರಾಜ್ಯದ ಅನುಗುಣವಾಗಿ ನ್ಯೂಸ್ ಪೇಪರ್ ಗಳಲ್ಲಿ ಅಡ್ವಟೈಸ್ಮೆಂಟ್ ನೀಡುತ್ತಾರೆ. ಇದನ್ನು ಹೊರತಾಗಿ ಎಲ್ಪಿಜಿ ವಿತರಕ ಚಯನ್ ಎನ್ನುವ ವೆಬ್ಸೈಟ್ ಮೂಲಕ ಸಹ ಅಲ್ಲಿ ಭೇಟಿ ನೀಡಿ ರಿಜಿಸ್ಟ್ರೇಷನ್ ಮಾಡಿಸಿ ಆಗಾಗ ಈ ವೆಬ್ಸೈಟ್ ಅನ್ನು ಚೆಕ್ ಮಾಡಿದ್ದರೆ ನಮ್ಮ ರಾಜ್ಯಗಳ ವೇಕೆನ್ಸಿ ಲಿಸ್ಟ್ ಇಲ್ಲಿ ದೊರೆಯುತ್ತದೆ. ಇನ್ನು ಗ್ಯಾಸ್ ಏಜೆನ್ಸಿಗೆ ನಾವು ಎಷ್ಟು ಇನ್ವೆಸ್ಟ್ಮೆಂಟ್ ಮಾಡಬೇಕಾಗಬಹುದು ಎನ್ನುವುದನ್ನು ನೋಡುವುದಾದರೆ ಸಾಮಾನ್ಯವಾಗಿ 15 ರಿಂದ 20 ಲಕ್ಷ ಇನ್ವೆಸ್ತ್ಮೆಂಟ್ ಮಾಡಬೇಕಾಗುತ್ತದೆ ಅಥವಾ ಇದಕ್ಕೂ ಜಾಸ್ತಿಯಾಗಬಹುದು. ಇನ್ನು ಇದರಿಂದ ನಮಗಾಗುವ ಪ್ರಾಫಿಟ್ ಅಥವ ಲಾಭದ ಬಗ್ಗೆ ನೋಡುವುದಾದರೆ ಗ್ಯಾಸ್ ಏಜೆನ್ಸಿ ಯಲ್ಲಿ ವಿತರಕರಿಗೆ ಒಂದು ಸಿಲೆಂಡರ್ ಗೆ 44ರೂಪಾಯಿ ಲಾಭ ಸಿಗುತ್ತೆ ಹಾಗೆ ಒಬ್ಬ ವಿತರಕ ತಿಂಗಳಿಗೆ ಏಳರಿಂದ ಎಂಟು ಸಾವಿರ ಸಿಲಿಂಡರ್ಗಳನ್ನು ವಿತರಿಸಿದ್ದರೆ ಅವರಿಗೆ ಸರಿ ಸುಮಾರು 3ರಿಂದ 4ಲಕ್ಷ ರೂಪಾಯಿ ಲಾಭ ದೊರೆಯುತ್ತದೆ. ಆದರೆ ಇದು ನಿಖರವಾಗಿ ಇರದೆ ಹೆಚ್ಚುಕಡಿಮೆ ಕೂಡ ಆಗಬಹುದು.