ಇಂದಿನ ಜೀವನದಲ್ಲಿ ಹಲವು ಕೆಲಸಕ್ಕೆ ಟ್ರಕ್ ಅವಶ್ಯಕ. ಭಾರತದಲ್ಲಿ ಮೊದಲ ಟ್ರಕ್ ಯಾವ ಕಂಪನಿ ತಯಾರಿಸಿತ್ತು ಅದರ ಓನರ್ ಯಾರು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಭಾರತದಲ್ಲಿ ಸಾಕಷ್ಟು ವಿವಿಧ ಟ್ರಕ್ ಗಳನ್ನು ನೋಡಬಹುದಾಗಿದೆ. ಭಾರತ ಟ್ರಕ್ ಗಳ ಮೇಲೆ ಅವಲಂಬಿತವಾಗಿದೆ. ಭಾರತಕ್ಕೆ ಸ್ವಾತಂತ್ರ ಬರುವವರೆಗೆ ಭಾರತದಲ್ಲಿ ಟ್ರಕ್ ಗಳ ತಯಾರಿಕೆ ಇರಲಿಲ್ಲ. ಭಾರತಕ್ಕೆ ಸ್ವಾತಂತ್ರ ಬಂದ ನಂತರ ಟಾಟಾ ಕಂಪನಿ ಜರ್ಮನಿಯ ಡೈಲಮೇರ ಜೊತೆ ಸೇರಿ ಟ್ರಕ್ ಉತ್ಪಾದನೆ ಮಾಡಲು ಪ್ರಾರಂಭಿಸಿತು. 1954 ರಲ್ಲಿ ಮೊದಲ ಟ್ರಕ್ ನ್ನು ಉತ್ಪಾದನೆ ಮಾಡಿತು. ಆ ಟ್ರಕ್ ಪಡೆದಿದ್ದು ಕರ್ತಾರ ಸಿಂಗ್ ಎಂಬ ವ್ಯಕ್ತಿ. ಭಾರತದಲ್ಲಿ ಟ್ರಕ್ ಬಹುಬೇಗನೆ ಮಾರಾಟವಾಗುತ್ತಿತ್ತು ನಂತರ ಸಾಕಷ್ಟು ಕಂಪನಿಗಳು ಹುಟ್ಟಿಕೊಂಡವು. ಈ ಸಮಯದಲ್ಲಿ ಅಶೋಕ ಲೈಲಾಂಡ್ ಬ್ರಿಟನ್ನಿನ ಲೆಲಾಂಡ್ ಕಂಪನಿಯ ಜೊತೆ ಸೇರಿ ಭಾರತದಲ್ಲಿ ಟ್ರಕ್ ಗಳ ಉತ್ಪಾದನೆಯನ್ನು ಪ್ರಾರಂಭಿಸಿತು.
ನಂತರ ಡೆಲಮೊರಾದಿಂದ ಬೇರೆಯಾಗಿ ಟಾಟಾ ಮೋಟಾರ್ಸ್ ಸ್ವತಂತ್ರವಾಗಿ ಟ್ರಕ್ ಉತ್ಪಾದನೆ ಮಾಡಿತು. ಈಗ ಅಶೋಕ್ ಲೈಲಾಂಡ್, ಮಹೀಂದ್ರಾ, ಭಾರತ್ ಬೆಂಜ್ ಮುಂತಾದ ಕಂಪನಿಗಳು ಭಾರತದಲ್ಲಿ ಟ್ರಕ್ ಗಳನ್ನು ಉತ್ಪಾದಿಸುತ್ತಿವೆ. ಇದರ ಜೊತೆಗೆ ಮಿನಿ ಟ್ರಕ್ ಗಳು, ಲೈಟ್ ಕಮರ್ಷಿಯಲ್ ವೆಹಿಕಲ್ ಗಳು, ಸಣ್ಣ ಸಣ್ಣ ಗೂಡ್ಸ್ ವೆಹಿಕಲ್ ಗಳನ್ನು ಸಹ ಉತ್ಪಾದನೆಯಾಗುತ್ತಿದೆ. ಅಲ್ಲದೇ ಟಾಟಾ, ಲೇಲ್ಯಾಂಡ್ ಕಂಪನಿಗಳು ಬಸ್ ಗಳ ಉತ್ಪಾದನೆಯನ್ನು ಪ್ರಾರಂಭಿಸಿವೆ. ಈಗ ಸರಕುಗಳ ಸಾಗಣೆ ಮಾಡಲು ರೇಲ್ವೆಗಳಿಗಿಂತ ಹೆಚ್ಚಾಗಿ ಟ್ರಕ್ ಗಳನ್ನು ಅವಲಂಬಿಸಲಾಗಿದೆ. ಆಹಾರ, ಕೈಗಾರಿಕಾ ಬಿಡಿ ಭಾಗಗಳು, ಬಟ್ಟೆ, ಪಶು ಆಹಾರ, ಗೊಬ್ಬರ ಬೀಜ, ತರಕಾರಿ, ಹಾಲು, ಪೆಟ್ರೋಲಿಯಂ ಹೀಗೆ ಪ್ರತಿಯೊಂದು ಸರಕುಗಳ ಸಾಗಾಣಿಕೆಗೆ ಟ್ರಕ್ ಅವಶ್ಯಕ.