ಮೊದಲಿನ ಕಾಲಕ್ಕಿಂತ ಈಗಿನ ದಿನಗಳಲ್ಲಿ ಹರೆಯದಲ್ಲಿ ಹುಡುಗರು, ಹುಡುಗಿಯರು ಪ್ರೀತಿ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಹುಡುಗರಿಗೆ ಯಾವ ರೀತಿಯ ಹುಡುಗಿಯರು ಇಷ್ಟವಾಗುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಯೌವನದಲ್ಲಿ ಹುಡುಗರು, ಹುಡುಗಿಯರು ಪ್ರೀತಿಯಲ್ಲಿ ಬೀಳುವುದು ಸಹಜ. ಹುಡುಗರು ಹುಡುಗಿಯರು ಹೇಗಿದ್ದರೆ ಇಷ್ಟಪಡುತ್ತಾರೆ ಎಂದು ಸಂಶೋಧನೆ ನಡೆಸಿದಾಗ ಕೆಲವು ಅಂಶಗಳು ಪತ್ತೆಯಾಗಿದೆ. ಅವೆಂದರೆ ಹುಡುಗರು ಹುಡುಗಿಯರ ತುಟಿಯನ್ನು ಗಮನಿಸುತ್ತಾರೆ, ಹುಡುಗಿಯರ ತುಟಿಯಿಂದಲೆ ಆಕರ್ಷಿತರಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಹೇರ್ ಸ್ಟೈಲ್ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸುತ್ತಾರೆ ಹುಡುಗರು ಹುಡುಗಿ ಯಾವ ರೀತಿ ಹೇರ್ ಸ್ಟೈಲ್ ಮಾಡಿಕೊಂಡಿದ್ದಾಳೆ ಎಂಬುದರ ಮೇಲೆ ಆಕರ್ಷಿತರಾಗುತ್ತಾರೆ. ಆಕರ್ಷಣೆಯ ವಿಷಯದಲ್ಲಿ ಕಣ್ಣು ಮುಖ್ಯವಾಗಿದೆ. ಹುಡುಗಿಯರ ಕಣ್ಣನ್ನು ನೋಡಿ ಆಕರ್ಷಿತರಾದ ಹುಡುಗರು ಕಂಡುಬರುತ್ತಾರೆ. ಕಣ್ಣೋಟವೆ ಮನಸಿನ ಭಾವನೆಗಳನ್ನು ತಿರುಗಿಸಿ ಸ್ನೇಹ ಪ್ರೀತಿಯತ್ತ ತಿರುಗುತ್ತದೆ. ಹುಡುಗಿಯರ ನಗು ನೋಡಿಯೇ ಆಕರ್ಷಿತರಾಗುವ ಹುಡುಗರಿದ್ದಾರೆ ಹುಡುಗಿಯರ ತುಂಟತನದ ತುಂಟ ನಗುವೆಂದರೆ ಹುಡುಗರಿಗೆ ಇಷ್ಟವಾಗುತ್ತದೆ.
ಕೆಲವು ಹುಡುಗರಿಗೆ ಹೆಚ್ಚು ಮಾತನಾಡುವ, ತಮಾಷೆ ಮಾಡುವ ಹುಡುಗಿಯರೆಂದರೆ ಇಷ್ಟವಾಗುತ್ತದೆ. ಕೆಲವು ಹುಡುಗರಿಗೆ ಕಡಿಮೆ ಮಾತನಾಡುವ ಹುಡುಗಿಯರು ಇಷ್ಟವಾಗುತ್ತಾರೆ. ಕೆಲವು ಹುಡುಗರು ಹುಡುಗಿಯರ ಗುಣವನ್ನು ನೋಡಿ ಇಷ್ಟಪಡುತ್ತಾರೆ.
ಯಾವ ಹುಡುಗರಿಗೆ ಯಾವ ರೀತಿಯ ಹುಡುಗಿಯರು ಇಷ್ಟವಾಗುತ್ತಾರೆ ಎಂದು ತಿಳಿಯುವುದಿಲ್ಲ. ಬೇರೆ ಬೇರೆ ಹುಡುಗರ ಸ್ವಭಾವ ಬೇರೆ ಬೇರೆಯಾಗಿರುತ್ತದೆ. ಒಟ್ಟಿನಲ್ಲಿ ಹುಡುಗರಾಗಲಿ, ಹುಡುಗಿಯರಾಗಲಿ ಮೋಸ ಮಾಡದೆ ಪ್ರೀತಿ ಮಾಡಿ, ಜೀವನ ಸಂಗಾತಿಯಾಗಿ ಮದುವೆಯಾಗಿ ಜೀವನ ನಡೆಸುವುದು ಒಳ್ಳೆಯವರ ಲಕ್ಷಣವಾಗಿದೆ ಆದರೆ ಇತ್ತೀಚೆಗೆ ಹುಡುಗರು, ಹುಡುಗಿಯರು ಟೈಮ್ ಪಾಸ್ ಗೆ ಪ್ರೀತಿ ಮಾಡುವುದು ಸಾಮಾನ್ಯವಾಗಿದೆ.