ಹೆಚ್ಚಾಗಿ ಎಲ್ಲಾ ಆಟ ಆಡುವಾಗ ಆಟಗಾರರು ತಮ್ಮ ಜೆರ್ಸಿಗೆ ನಂಬರ್ ಹಾಕಿಸಿಕೊಂಡಿರುತ್ತಾರೆ.ಹಾಗೆಯೇ ಕ್ರಿಕೆಟ್ ನಲ್ಲಿ ಕೂಡ ಹೌದು. ಕ್ರಿಕೆಟ್ ನೋಡುವ ಎಲ್ಲರೂ ಒಂದು ವಿಷಯವನ್ನು ಗಮನಿಸಿರುತ್ತಾರೆ. ಅದೇನೆಂದರೆ ಆಟಗಾರರ ಜೆರ್ಸಿಯ ಮೇಲೆ ನಂಬರ್ ಹಾಕಿರುತ್ತಾರೆ. ಮತ್ತೆ ಈ ನಂಬರ್ ಇದೇ ಆಟಗಾರನಿಗೆ ಇರಬೇಕು ಎಂದು ಹಾಕಿರುತ್ತಾರೆ. ಆಟಗಾರರನ್ನು ಆಯ್ಕೆ ಮಾಡುವಾಗ ನಂಬರ್ ನೋಡಿ ಸಮಿತಿಯವರು ಆಯ್ಕೆ ಮಾಡುತ್ತಾರೆ. ಹಾಗಾಗಿ ನಾವು ಇಲ್ಲಿ ಕ್ರಿಕೆಟ್ ಆಟಗಾರರ ಜೆರ್ಸಿಯ ಮೇಲೆ ನಂಬರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವಿರಾಟ್ ಕೊಹ್ಲಿ ಅವರ ಜೆರ್ಸಿಯ ಮೇಲೆ 18 ಎಂಬ ನಂಬರ್ ಇದೆ. 2006 ಡಿಸೆಂಬರ್18ನೇ ತಾರೀಖಿನಂದು ಅವರ ತಂದೆ ತೀರಿಕೊಂಡಿದ್ದರು. ಹಾಗಾಗಿ ಅವರು ತಮ್ಮ ಜೆರ್ಸಿಯ ಮೇಲೆ 18 ಎಂಬ ನಂಬರ್ ಹಾಕಿಕೊಂಡಿದ್ದಾರೆ. ಹಾಗೆಯೇ ಒಂದು ಇಂಟರ್ವ್ಯೂದಲ್ಲಿ ಆ ಜೆರ್ಸಿಯನ್ನು ಹಾಕಿಕೊಂಡರೆ ನನ್ನ ತಂದೆ ನನ್ನ ಜೊತೆ ಇದ್ದಾರೆ ಎಂದು ಅನಿಸುತ್ತದೆ ಎಂದು ಅವರು ಹೇಳಿದ್ದರು. ಹಾರ್ದಿಕ್ ಪಾಂಡೆ ಅವರ ಜೆರ್ಸಿ ನಂಬರ್ 228. ಇದಕ್ಕೂ ಮುಂಚೆ ಅವರು ರಣಜಿಯಲ್ಲಿ ಆಟ ಆಡುತ್ತಿದ್ದರು. ಕೇವಲ 200ರನ್ ಗೆ 3 ವಿಕೆಟ್ ಬೇಕಿತ್ತು. ಆಗ 228ರನ್ ಹೊಡೆದು ಗೆಲುವಿಗೆ ಕಾರಣವಾದರು.
ರೋಹಿತ್ ಶರ್ಮಾ ಅವರ ಜೆರ್ಸಿ ನಂಬರ್ 45. ಆದರೆ ಅವರ ಇಷ್ಟದ ನಂಬರ್ 9 ಆಗಿತ್ತು. ಆಗ ಅವರ ತಂದೆ ತಾಯಿ ಅವರು 4 ಮತ್ತು 5 ಸೇರಿದರೆ 9 ಆಗುತ್ತದೆ ಎಂದು 45 ಇಡಲು ನಿಶ್ಚಯಿಸಿದರು. ವೀರೇಂದ್ರ ಸೆಹ್ವಾಗ್ ಅವರ ಜೆರ್ಸಿ ನಂಬರ್ 44 ಇತ್ತು. ಆದರೆ ಅದು ಅವರಿಗೆ ಅಷ್ಟೊಂದು ಜಯವನ್ನು ತಂದುಕೊಡಲಿಲ್ಲ. ಒಬ್ಬ ಸಂಖ್ಯಾಜ್ಯೋತಿಷಿಯನ್ನು ಕೇಳಿ 46 ಮಾಡಿಕೊಂಡರು. ಆ ನಂಬರ್ ಕೂಡ ಏನು ಕೆಲಸ ಮಾಡಲಿಲ್ಲ. ಹಾಗಾಗಿ ಯಾವ ನಂಬರ್ ನ್ನು ಅವರು ಈಗ ಹಾಕಿಕೊಂಡಿಲ್ಲ.
ಸಚಿನ್ ತೆಂಡೂಲ್ಕರ್ ಅವರ ಜೆರ್ಸಿ ನಂಬರ್ 10. ಇದು ಅವರಿಗೆ ಒಳ್ಳೆಯ ಯಶಸ್ಸನ್ನು ತಂದುಕೊಡುತ್ತದೆ. ಹಾಗೆಯೇ ಶಿಖರ್ ಧವನ್ ಅವರು ತಮ್ಮ ಮಗಳ ಹುಟ್ಟಿದ ದಿನವನ್ನು ಜೆರ್ಸಿ ನಂಬರ್ ಆಗಿ ಮಾಡಿಕೊಂಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಬಗೆಯ ಜೆರ್ಸಿ ನಂಬರ್ ಹಾಕಿಸಿಕೊಂಡಿದ್ದಾರೆ.