ಆಸ್ಟ್ರೇಲಿಯಾದಲ್ಲಿ ಸರಣಿ ಸೋತ ಭಾರತ ಆದ್ರೆ, ಈ ಯುವಕ ಮಾಡಿದ್ದೇನು ಗೊತ್ತೇ?

0 0

ಸಿಡ್ನಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 51 ರನ್ ನಿಂದ ಸೋಲನುಭವಿಸಿದೆ. ಆಸ್ಟ್ರೇಲಿಯಾದ ನೀಡಿದ 390 ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 338 ರನ್ ಗಳಿಸಲಷ್ಟೆ ಶಕ್ತವಾಯಿತು. ಆ ಮೂಲಕ ಮೂರು ಮ್ಯಾಚ್ ಗಳ ಸರಣಿಯನ್ನು ಭಾರತ ಸೋತಿದೆ. ಆದರೆ ಪಂದ್ಯದ ಮಧ್ಯೆ ಮತ್ತೊಂದು ವಿಚಾರ ಗಮನ ಸೆಳೆದಿದ್ದು, ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಮ್ಯಾಚ್ ನೋಡಲು ಹೋಗಿ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂಡಿಯಾ-ಆಸ್ಟ್ರೇಲಿಯಾ ಹೈ ಓಲ್ಟೇಜ್ 2ನೇ ಅಂತರಾಷ್ಟ್ರೀಯ ಏಕದಿನ ಪಂದ್ಯದ ಮಧ್ಯೆ ಮತ್ತೊಂದು ವಿಚಾರ ಗಮನ ಸೆಳೆದಿದ್ದು, ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗಲೇ ಪ್ರಪೋಸ್ ಮಾಡಿದ್ದಾನೆ. ಹಲವು ಜನರ ಮಧ್ಯೆ ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಅಪಾರ ಪ್ರಮಾಣದಲ್ಲಿ ಜನ ಸೇರಿದ್ದು, ಇದರ ಮಧ್ಯೆ ಭಾರತ ಕ್ರಿಕೆಟ್ ತಂಡದ ಅಭಿಮಾನಿ ಆಸ್ಟ್ರೇಲಿಯಾ ಯುವತಿಗೆ ಮೊಣಕಾಲೂರಿ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಇನ್ನೂ ಆಶ್ಚರ್ಯವೆಂಬಂತೆ ಯುವತಿ ಈತನ ಪ್ರೇಮನಿವೇದನೆಯನ್ನು ಒಪ್ಪಿಕೊಂಡಿದ್ದಾಳೆ. ಹೀಗಾಗಿ ಯುವಕನಿಗೆ ಇದು ಲಕ್ಕಿ ಡೇ ಎಂದು ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಲವು ಜನರ ಗದ್ದಲದ ನಡುವೆ ಯುವಕ ಪ್ರಪೋಸ್ ಮಾಡುವ ಮೂಲಕ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾನೆ.

ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 390 ರನ್‍ಗಳನ್ನು ಭಾರತ ಬೆನ್ನಟ್ಟಿದೆ. ಸಂಜೆ 4.30ರ ಹೊತ್ತಿಗೆ ಭಾರತ 4 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ. ಇನ್ನು ಆಸ್ಟ್ರೇಲಿಯಾ ಹುಡುಗಿಗೆ ಪ್ರಪೋಸ್ ಮಾಡಿದ ಯುವಕ ಆಕೆಗೆ ರಿಂಗ್​ ತೊಡಿಸಿದ್ದು, ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಜೋಡಿಯನ್ನು ಹುರಿದುಂಬಿಸಿದ್ಧಾರೆ. ಅಲ್ಲದೇ , ಮೈದಾನದಲ್ಲಿದ್ದ ಆಟಗಾರರು ಕೂಡ ಚಪ್ಪಾಳೆ ತಟ್ಟಿ ಶುಭಾಶಯ ತಿಳಿಸಿದ್ದಾರೆ. ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲೂ ಸೋಲನುಭವಿಸಿದರೂ ಟೀಂ ಇಂಡಿಯಾದ ಅಭಿಮಾನಿ ಮಾತ್ರ ಆಸ್ಟ್ರೇಲಿಯಾದಿಂದ ಬಹುಮಾನ ಗೆದ್ದಿದ್ದಾರೆ ಎನ್ನಬಹುದು.

Leave A Reply

Your email address will not be published.